ನಿವೃತ್ತ ಯೋಧರಿಗಾಗಿಯೇ ಪಾಲಿ ಕ್ಲಿನಿಕ್
-ಮೋಹನ್ ಕುಮಾರ್ ಎನ್.
ಶಿವಮೊಗ್ಗ: ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಂತರ ವಿಶ್ರಾಂತ ಜೀವನ ನಡೆಸುತ್ತಿರುವ ವೀರ ಯೋಧರಿಗೆ ಕೇಂದ್ರ ಸರ್ಕಾರ ಆರೋಗ್ಯ ಯೋಜನೆ ತಂದಿದ್ದು, ಅದರಡಿ ಶಿವಮೊಗ್ಗದಲ್ಲಿ ಇಸಿಎಚ್ಎಸ್ ಪಾಲಿ ಕ್ಲಿನಿಕ್ ಪ್ರಾರಂಭವಾಗಿದೆ.
ಸೈನ್ಯದಿಂದ ನಿವೃತ್ತಿ ಹೊಂದಿದ ಯೋಧರ ಆರೋಗ್ಯವನ್ನು ಕಾಪಾಡುವುದು ಕೇಂದ್ರ ಸರ್ಕಾರದ ಹೊಣೆಯಾದ್ದರಿಂದ ಸರ್ಕಾರ ಇಸಿಎಚ್ಎಸ್ ಯೋಜನೆ ತಂದಿದೆ. ಈ ಯೋಜನೆಗೆ ದೇಶದ ವಿವಿಧ ರಕ್ಷಣಾ ಇಲಾಖೆಗಳಾದ, ಭಾರತೀಯ ನೌಕಪಡೆ, ವಾಯುಪಡೆ ಮತ್ತು ಸೈನಿಕ ದಳದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಎಲ್ಲಾ ರೀತಿಯ ರ್ಯಾಂಕ್ ಪಡೆದ ಅಥವಾ ಸಾಮಾನ್ಯ ಯೋಧರಿಗೆ ವೈದ್ಯಕೀಯ ಸೇವೆ ಮತ್ತು ಮಾಹಿತಿ ಕಲ್ಪಿಸಲು ಸಂಸ್ಥೆಯಲ್ಲಿ ಅವಕಾಶವಿದೆ.
ಸೈನಿಕ ಸೇವೆಯಿಂದ ನಿವೃತ್ತಿ ಹೊಂದಿದ್ದಾಗ ರಕ್ಷಣಾ ಪಡೆ (ಕರ್ತವ್ಯ ನಿರ್ವಹಿಸುತ್ತಿದ್ದ ಇಲಾಖೆ) ಕನಿಷ್ಠ 15 ಸಾವಿರವನ್ನು ಸೈನಿಕನಿಂದ ಪಡೆದು ಇಸಿಎಚ್ಎಸ್ ಕಾರ್ಡ್ ವಿತರಣೆ ಮಾಡುತ್ತದೆ.
ಇದು ಒಮ್ಮೆ ಮಾತ್ರ. ಈ ಕಾರ್ಡ್ನಲ್ಲಿ ಸೈನಿಕ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೌಲಭ್ಯ ಒದಗಿಸಲಾಗುವುದು.
ಚಿಕಿತ್ಸೆ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈ ಯೋಜನೆ ಅಡಿ ಪಾಲಿ ಕ್ಲಿನಿಕ್ ತೆರೆಯಲಾಗಿದ್ದು, ಪ್ರಥಮ ಚಿಕಿತ್ಸೆ ನೀಡಲು ಒಬ್ಬರು ಎಂಬಿಬಿಎಸ್ ವೈದ್ಯರು ಹಾಗೂ ಸಹಾಯಕರನ್ನು ನೇಮಕ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಡಿಂಗ್ ಆಸ್ಪತ್ರೆ ಹಾಗೂ ಇಸಿಎಚ್ಎಸ್ಗೆ(ಎಂಪ್ಲಾನಡ್ ಹಾಸ್ಪಿಟಲ್) ಒಳಪಟ್ಟಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯವಿರುತ್ತದೆ. ಆದರೆ, ಸ್ಥಳೀಯ ಪಾಲಿ ಕ್ಲಿನಕ್ನಿಂದ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಇಲ್ಲಿ ಸೈನಿಕರಿಂದ ಯಾವುದೇ ಹಣ ಪಡೆಯುವುದಿಲ್ಲ.
ೈಚಿಕಿತ್ಸಾ ವೆಚ್ಚವನ್ನು ಪಾಲಿ ಕ್ಲಿನಿಕ್ ನೀಡುತ್ತದೆ. ರಾಜ್ಯದಲ್ಲಿ 107 ಪಾಲಿ ಕ್ಲಿನಿಕ್ಗಳಿದ್ದು,75 ಖಾಸಗಿ ಆಸ್ಪತ್ರೆಗಳು ಈ ಯೋಜನೆಗೆ ಸೇರಿಕೊಂಡಿವೆ.
ಬೆಂಗಳೂರು, ಮೈಸೂರು, ಮಂಗಳೂರು, ಮಣಿಪಾಲ್, ಬೆಳಗಾವಿ, ಹುಬ್ಬಳಿ, ಬಾಗಲಕೋಟೆ, ಬಿಜಾಪುರ, ಧಾರವಾಡದಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಗಳು ಈ ಯೋಜನೆಗೆ ಸೇರಿಕೊಂಡಿವೆ. ಸದ್ಯದಲ್ಲೇ ಶಿವಮೊಗ್ಗದ ಸುಬ್ಬಯ್ಯ, ವಾಸನ್ ಕಣ್ಣಿನ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆಗಳಿಗೆ ಪಾಲಿ ಕ್ಲಿನಿಕ್ನಿಂದ ಇಸಿಎಚ್ಎಸ್ ಯೋಜನೆಗೆ ಸೇರಿಕೊಳ್ಳುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಕ್ಲಿನಿಕ್: ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಕ್ಲಿನಿಕ್ ಆರಂಭವಾಗಿದೆ.
ಶಿವಮೊಗ್ಗ ಸೇರಿದಂತೆ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿರುವ ಮಾಜಿ ಸೈನಿಕರು ಹಾಗೂ ಕುಟುಂಬ ಸದಸ್ಯರು ಇಲ್ಲಿ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆಯಬಹುದು. ಹೆಚ್ಚಿನ ಚಿಕಿತ್ಸೆಗಾಗಿ ಇಸಿಎಚ್ಎಸ್ ಯೋಜನೆಗೆ ಸೇರಿಕೊಂಡಿರುವ ಖಾಸಗಿ ಆಸ್ಪತ್ರೆಯಲ್ಲಿ ಶಿಫಾರಸು ಮಾಡಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಪಾಲಿ ಕ್ಲಿನಿಕ್ ಆಡಳಿತಾಧಿಕಾರಿ ಕರ್ನಲ್ ಕೆ.ಎ. ರಾಮಚಂದ್ರ.
ಅಂದ ಹಾಗೆ ಈ ಆಸ್ಪತ್ರೆ ಅಚ್ಯುತರಾವ್ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ದೂರವಾಣಿ ಸಂಖ್ಯೆ 08182 220794
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

