ಪುಸ್ತಕ ಬಿಡುಗಡೆ
ಶಿವಮೊಗ್ಗ: ಜಯದೇವಪ್ಪ ಜೈನಕೇರಿ ರಚಿಸಿರುವ ಸಂಜನ ದರುಶನ(ಪ್ರವಾಸ ಕಥನ)ಕೃತಿಯಲ್ಲಿ ದೇಶದ ವಿವಿಧ ಪ್ರವಾಸಿ ಸ್ಥಳಗಳನ್ನು ಪರಿಚಯಿಸುವುದರೊಂದಿಗೆ ಪ್ರಾಮುಖ್ಯತೆ ತಿಳಿಸಲಾಗಿದೆ ಎಂದು ವಿಮರ್ಶಕ ಶಿರಸಿಯ ಕೃಷ್ಣಮೂರ್ತಿ ಹೇಳಿದರು.
ನಗರದ ಬೆಕ್ಕಿನ ಕಲ್ಮಠದಲ್ಲಿ ಸೋಮವಾರ ಆಯೋಜಿಸಿದ್ದ 397ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಸಂಜನ ದರುಶನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕೃತಿ ಸಮಕಾಲೀನ ಪ್ರವಾಸಿ ಸಂಗತಿಗಳನ್ನು ದಾಖಲಿಸಿದ್ದು, ಇಡೀ ಕೃತಿ ದೇಶ ಹಾಗೂ ರಾಜ್ಯದ ಪ್ರಮುಖ ಪ್ರವಾಸಿ ಸ್ಥಳಗಳನ್ನು ಪರಿಚಯಿಸಿದೆ. ಶಿವಮೊಗ್ಗ, ಗುಲ್ಬರ್ಗ, ದೆಹಲಿ, ಅಮೃತಸರ, ಶಿಮ್ಲಾಗಳ ಪ್ರವಾಸಿ ಸ್ಥಳಗಳಲ್ಲಿನ ಮಹತ್ವವನ್ನು ಜೈನಕೇರಿ ಅವರು ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ ಎಂದರು.
ಕೃತಿಯಲ್ಲಿ ದೆಹಲಿಯನ್ನು ದೇಶದ ಸಾಂಸ್ಕೃತಿಕ ಪ್ರತೀಕ ಎಂದು ಬಣ್ಣಿಸಲಾಗಿದೆ. ಸಸ್ಯರಾಶಿಗಳ ಪರಿಚಯ ಉಲ್ಲೇಖ ಮಾಡಲಾಗಿದ ಎಂದ ಅವರು, ಕೃತಿಯು ಓದುಗನಿಗೆ ಪ್ರವಾಸಿ ತಾಣಗಳ ಪರಿಚಯಿಸುವುದರೊಂದಿಗೆ ಕೆಲ ಕುತೂಹಲಕಾರಿ ಸಂಗತಿಗಳನ್ನು ತಿಳಿಸುತ್ತದೆ ಎಂದರು.
ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಲೇಖಕ ಜಯದೇವಪ್ಪ ಜೈನಕೇರಿ, ಶಿರಾಳಕೊಪ್ಪದ ಕುಬಸದ ಚಂದ್ರಶೇಖರಪ್ಪ, ಕರಿಬಸವಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

