ಅಂಬೇಡ್ಕರ್ ಶೋಷಿತ ವರ್ಗಗಳ ಆಶಾಕಿರಣ
ತೀರ್ಥಹಳ್ಳಿ: ಡಾ. ಅಂಬೇಡ್ಕರ್ ಶೋಷಿತ ವರ್ಗಗಳ ಆಶಾಕಿರಣವಾಗಿದ್ದರು. ಅವರ ವಿಚಾರಧಾರೆಗಳನ್ನು ಇನ್ನೂ ಜನಮನಗಳಿಗೆ ತಲುಪುವಂತೆ ಪ್ರಚುರಪಡಿಸಬೇಕಾದ ಅಗತ್ಯವಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.
ಬಂಟರ ಭವನದಲ್ಲಿ ಅಂಬೇಡ್ಕರ್ ವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತ ಶಕ್ತಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ, ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ವರ್ಗದ ವಾಸ್ತವ ಸ್ಥಿತಿಯ ಸತ್ಯ ಅರಿಯಬೇಕಾದರೆ ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ವಿಚಾರಧಾರೆಗಳ ಕುರಿತಂತೆ ಮುಂದುವರಿದ ಜನಾಂಗವೂ ಸೇರಿದಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಗುಲಾಮಗಿರಿ ಬದುಕು: ಪ್ರೊ. ರಾಚಪ್ಪ ಸಮಾರಂಭ ಉದ್ಘಾಟಿಸಿ, ಅಂಬೇಡ್ಕರ್ ಜನಿಸದಿದ್ದರೆ ಜೀತದ ಎತ್ತುಗಳಂತೆ ದುಡಿಯುತ್ತಿದ್ದ ದಲಿತವರ್ಗ ಗುಲಾಮಗಿರಿಯಲ್ಲೇ ಬದುಕಬೇಕಾಗಿತ್ತು. ಅಂಬೇಡ್ಕರ್ ಅವರಿಂದಾಗಿಯೇ ಈ ವರ್ಗದ ಹೊಸಬಾಳು ಆರಂಭವಾಯಿತು ಎಂದರು.
ಪ್ರೊ.ಕೆ. ಗಂಗಾಧರ್ ಮಾತನಾಡಿ, ಮೀಸಲಾತಿಯ ನಡುವೆಯೂ ಈ ವರ್ಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಈಗ ಸ್ಪರ್ಧೆ ಏರ್ಪಟ್ಟಿದೆ. ಮನುಷ್ಯ ಮನುಷ್ಯನ ನಡುವಿನ ಅಂತರ ಕಡಿಮೆಯಾಗಬೇಕು. ಇಲ್ಲದಿದ್ದರೆ ಒಂದಾಗುವುದು ಅಸಾಧ್ಯ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಟಿ.ಕೆ. ರಮೇಶ ಶೆಟ್ಟಿ, ಶಿವಾನಂದಕರ್ಕಿ, ಕಬಸೆ ಅಶೋಕಮೂರ್ತಿ, ದೇವೇಂದ್ರಪ್ಪ, ಮಂಜುನಾಥ ನವುಲೆ, ಪರಮೇಶ್ವರ್ ದೂಗೂರು ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

