ಶಿವಮೊಗ್ಗ

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಅಗತ್ಯ

Published On :

ಹೊಸನಗರ: ಐತಿಹಾಸಿಕ ಶ್ರೀಮಂತಿಕೆ, ಹಿರಿಯರ ಬದುಕಿನ ಹೂರಣವನ್ನು ಉಣಬಡಿಸುವ ಸ್ಮಾರಕಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಮೂಡುಗೊಪ್ಪ(ನಗರ)ಗ್ರಾಪಂ ಅಧ್ಯಕ್ಷ ಎಚ್.ವೈ. ಸತೀಶಗೌಡ ಹೇಳಿದರು.
ತಾಲೂಕಿನ ನಗರದ ಬಾಲಕರ ಪಾಠಶಾಲೆ ಆವರಣದಲ್ಲಿ ಕೊಡಚಾದ್ರಿ ಪ್ರಥಮದರ್ಜೆ ಕಾಲೇಜು, ರಾಷ್ಟ್ರೀಯ  ಸೇವಾ ಯೋಜನೆ ಘಟಕ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರವನ್ನು ಉದ್ಘಾಟಿಸಿ, ಸ್ಮಾರಕಗಳು ಆ ಭಾಗದ ತಳಹದಿ ನೆನಪಿಸುತ್ತದೆ ಎಂದರು. ಬಿದನೂರಿನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಅರಿವು ಮತ್ತು ಸ್ವಚ್ಛತಾ ಕಾರ್ಯ ನಡೆಸಲು ಮುಂದಾಗಿರುವ ಕಾಲೇಜು ಮತ್ತು ವಿದ್ಯಾರ್ಥಿಗಳ ಕಾಳಜಿ ಮಾದರಿ. ನಮ್ಮೂರು ಎಂಬ ಅಭಿಮಾನ, ಹಿರಿಯರ ಕೊಡುಗೆಯ ಸ್ಮರಣೆ, ನಮ್ಮತನದ ರಕ್ಷಣೆ ಯುವಕರ ಕರ್ತವ್ಯವಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಬಿ. ಕರುಣಾಕರ, ಪದವಿ ಪ್ರಮಾಣ ಪತ್ರಗಳು ಪ್ರಶಸ್ತಿ ಪತ್ರಗಳಂತೆ ಮನೆಯಲ್ಲಿಡುವುದಕ್ಕೆ ಸೀಮಿತವಾಗದಿರಲಿ. ಪದವಿ ಪಡೆದವರೆಂದರೆ ಸುಶಿಕ್ಷಿತರು  ಎಂಬ ಕಲ್ಪನೆ ಗ್ರಾಮೀಣ ಪ್ರದೇಶದಲ್ಲಿದೆ. ಅವರ ವಿಶ್ವಾಸಗಳಿಗೆ ಪೂರಕವಾಗಿ ಪದವೀಧರರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದರು. ಶಾಲಿನಿ ಜೋಗಿ, ಶಾರದಾ ವಿಶ್ವನಾಥ್, ಪೂರ್ಣೇಶ್, ನಳೀನಚಂದ್ರ, ಸೌಮ್ಯ, ಈಶ್ವರಪ್ಪ, ಯು.ಜಿ. ರಮೇಶ್,  ಶ್ರೀಧರಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.