ಶಿವಮೊಗ್ಗ

ನೈತಿಕತೆ ಕಳೆದುಕೊಂಡರೆ ಭವಿಷ್ಯವಿಲ್ಲ

Published On :




ಶಿವಮೊಗ್ಗ: ಭಾರತ, ಕರ್ನಾಟಕ, ಕನ್ನಡ, ಕನ್ನಡಿಗ ಎಂಬ ಅಭಿಮಾನವಿರಬೇಕು. ನಾವು ನಮ್ಮ ನೈತಿಕತೆಯನ್ನು ಕಳೆದುಕೊಳ್ಳಬಾರದು. ರಾಜಕಾರಣಿಗಳು ಜನರೊಂದಿಗೆ ಸ್ಪಂದಿಸದಿದ್ದರೆ, ಸಮಾನತೆ ರೂಢಿಸಿಕೊಳ್ಳದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಧರ್ಮಾಧಿಕಾರಿಗಳಾದ ಫಾದರ್ ಮಾರ್ಕ್ ಡಿಸಿಲ್ವ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ತಿಂಗಳ ಹುಣ್ಣಿಮೆಯ ದಿನ ಏರ್ಪಡಿಸುವ ಸಾಹಿತ್ಯ ಹುಣ್ಣಿಮೆಯ ಎಂಬತ್ತೊಂಬತ್ತನೆಯ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿರು. ಭವ್ಯ ಭಾರತದ ನಿರ್ಮಾಣಕ್ಕೆ ನಾವೆಲ್ಲ ಸಂಕಲ್ಪ ಮಾಡೋಣ. ಕರ್ನಾಟಕದ ಸೊಬಗನ್ನು, ಘನತೆಯನ್ನು ಹೆಚಿಸಲು ದುಡಿಯೋಣ, ಭಾಷಾಭಿಮಾನ ಬೆಳಸಿಕೊಳ್ಳೋಣ ಎಂದರು.
ಹಿಂದಿನ ಸಾಹಿತ್ಯ ಹುಣ್ಣಿಮೆಯ ಆತಿಥ್ಯ ನೀಡಿದ್ದ ಇಂಜಿನಿಯರ್ ಇಲಾಖೆಗಳ ಸಾಂಸ್ಕೃತಿಕ ವೇದಿಕೆಯ ಬಿ.ಟಿ. ಕಾಂತರಾಜ್, ಸಾಹಿತ್ಯ ಹುಣ್ಣಿಮೆಗೆ ತಾರಾಮೌಲ್ಯ ಬರುತ್ತಿದೆ. ಸ್ಥಳೀಯ ಪ್ರತಿಭೆಗೆ ಅವಕಾಶ ನೀಡುತ್ತಲೇ ಉತ್ತಮ ಸಂದೇಶ, ಮನರಂಜನೆ ನೀಡುವ ಕಾರ್ಯಕ್ರಮ ಜನಪ್ರಿಯವಾಗುತ್ತಿದೆ. ಸ್ಥಳೀಯ ಮತ್ತು ಹೊರಗಿನ ಕಲಾವಿದರ ಪರಸ್ಪರ ಪರಿಚಯ, ಸಮನ್ವಯ ಗೊಳಿಸುವ ಕೆಲಸ ಅರ್ಥಪೂರ್ಣವಾಗಿದೆ. ಸಮಾಜದ ಒಳಿತಿಗೂ ಸಹಕಾರಿಯಾಗಿದೆ ಎಂದರು. ಆತಿಥ್ಯ ನೀಡಿದ್ದ ಜಿಲ್ಲಾ ಜನತಾದಳ ಅಧ್ಯಕ್ಷ ಎಂ. ಶ್ರೀಕಾಂತ, ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆಸುತ್ತಿರುವ ಪರಿಷತ್ತು ಕಾರ್ಯಶ್ಲಾಘನೀಯ ಎಂದರು. ಗಾಯಕ ಭದ್ರಾವತಿಯ ಹರೋನಹಳ್ಳಿ ಸ್ವಾಮಿ ಮತ್ತು ತಂಡದವರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಕೋಗಳಿ ಕೊಟ್ರೇಶ್ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕೆ.ಪಿ. ಶ್ರೀಪಾಲ ಮತ್ತು ಎನ್. ಹರಿಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.