ಬೆಟ್ಟಿಂಗ್ ಕಾನೂನು ಬದ್ಧ ಆಗಲಿ: ಅರುಣ್
ಶಿವಮೊಗ್ಗ: ಕ್ರಿಕೆಟ್ ಬೆಟ್ಟಿಂಗನ್ನು ಕಾನೂನು ಮೂಲಕ ಕ್ರಮಬದ್ಧಗೊಳಿಸಬೇಕು ಎಂದು ಕೆಎಸ್ಸಿಎ ರಾಯಲ್ ಚಾಲೆಂಜರ್ಸ್ ವಿಭಾಗೀಯ ಅಧ್ಯಕ್ಷ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ಶಿವಮೊಗ್ಗದ ಈ ವಾರದ ಸಭೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಹಗರಣ ವಿಚಾರವಾಗಿ ಮಾತನಾಡಿದ ಅರುಣ್, ಇಂಗ್ಲೆಂಡ್ನಲ್ಲಿ ಈಗಲೂ ಬೆಟ್ಟಿಂಗ್ ಕಾನೂನು ಬದ್ಧವಾಗಿದೆ. ವಿಶ್ವಕಪ್ ವೇಳೆ ಸಹ ಇಂಗ್ಲೆಂಡ್ನಲ್ಲಿ ಬೆಟ್ಟಿಂಗ್ ನಡೆದಿದ್ದೂ ಯಾವುದೇ ಹಗರಣವೆನಿಸಲಿಲ್ಲ. ಅಲ್ಲಿ ಬೆಟ್ಟಿಂಗ್ ಕಾನೂನು ಬದ್ಧವಾಗಿರುವ ಜೊತೆಗೆ ನಿಯಮಿತವಾಗಿದೆ. ಅಂದರೆ ಬೆಟ್ಟಿಂಗ್ ಮಾಡಲು ನಿರ್ದಿಷ್ಟ ಮಿತಿ ಇದೆ ಎಂದರು. ಟಿ20 ಕ್ರಿಕೆಟ್ ಪಂದ್ಯಗಳು ಚಾಲ್ತಿಗೆ ಬಂದು, 2008ರಿಂದ ಲಲಿತ್ ಮೋದಿಯವರ ವ್ಯಾವಹಾರಿಕ ದೂರದೃಷ್ಟಿಯಿಂದ ಐಪಿಎಲ್ ಕ್ರಿಕೆಟ್ ಪಂದ್ಯಗಳು ಜನಪ್ರಿಯವಾಗಿ ಪ್ರಾಂಚೈಸಿಗಳು ಹುಟ್ಟಿಕೊಂಡು ಈಗ ಕ್ರಿಕೆಟ್ ಶ್ರೀಮಂತ ಆಟವಾಗಿದೆ. ಅಲ್ಲದೇ ಫ್ರಾಂಚೈಸಿಗಳೂ ನಷ್ಟವನ್ನುಭವಿಸಲಾಗದೆ, ಬೆಟ್ಟಿಂಗ್ಗೆ ತೊಡಗುವುದೂ ಸಹ ನಡೆದಿದೆ ಎಂದರು.
ಈ ಬೆಟ್ಟಿಂಗನ್ನು ಒಂದು ಹಂತದವರೆಗೆ ಕಾನೂನು ಬದ್ಧಗೊಳಿಸಬೇಕು. ಇದನ್ನು ಮೀರಿದವರಿಗೆ ಆಸ್ತಿ ಮಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮವನ್ನು ಕೈಗೊಳ್ಳಬೇಕು. ಎಂದು ತಿಳಿಸಿದ ಅವರು, ಶಿವಮೊಗ್ಗೆಯಲ್ಲಿರುವ ಆರು ಕ್ರಿಕೆಟ್ ಪಿಚ್ಗಳು ಉತ್ತಮವಾಗಿವೆ. ನಮ್ಮ ಮಕ್ಕಳನ್ನು ಕ್ರಿಕೆಟ್ನಲ್ಲಿ ತೊಡಗಿಸಿ ಯುವ ಪೀಳಿಗೆಯನ್ನು ಪ್ರೋತ್ಸಾಹಿಸೋಣ ಎಂದರು ಕರೆ ನೀಡಿದರು. ಸಭೆಯಲ್ಲಿ ಎನ್. ಶ್ರೀಧರ್ ಮತ್ತು ಎಚ್. ಎಸ್. ರಘುರಾಮ ಭಟ್ ಉಪಸ್ಥಿತರಿದ್ದರು.
ಮಂಗಗಳ ಕಾಟ; ಅಡಕೆ ಬೆಳೆ ನಾಶ
ಜೋಗ್ಫಾಲ್ಸ್: ಸಮೀಪದ ಹಿರೇಮನೆ ಗ್ರಾಮದಲ್ಲಿ ರಾಜೇಂದ್ರ ಎಂಬವರಿಗೆ ಸೇರಿದ ಅಡಕೆ ತೋಟಕ್ಕೆ ಮಂಗಗಳು ದಾಳಿ ನಡೆಸಿ ಬೆಳೆ ನಾಶಗೊಳಿಸಿದ್ದು, ಒಂದೇ ದಿನದಲ್ಲಿ ಸುಮಾರು 1 ಕ್ವಿಂಟಲ್ನಷ್ಟು ಅಡಕೆ ನಾಶವಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ರಾಜೇಂದ್ರ ದೂರು ಸಲ್ಲಿಸಿದ್ದು, ತಾಳಗುಪ್ಪ ವಲಯದ ಅರಣ್ಯಾಧಿಕಾರಿ ಶಿವಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಂಗಗಳ ದಾಳಿಗೆ ಸುತ್ತಮುತ್ತಲ ಅಡಕೆ ತೋಟದಲ್ಲಿ ಬೆಳೆ ನಾಶವಾಗುತ್ತಿದ್ದು, ಮಂಗಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ನಷ್ಟಗೊಂಡ ಬೆಳೆಗೆ ಪರಿಹಾರ ಮರೀಚಿಕೆಯೇ ಎಂಬುದು ರೈತರ ಅಳಲು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

