ಶಿವಮೊಗ್ಗ

ಬಾರದ ಬೆಳೆ ವಿಮೆ; ಮಾಹಿತಿ ಇಲ್ಲದ ಅಧಿಕಾರಿಗಳು

Published On :

ಶಿರಾಳಕೊಪ್ಪ: ಕಳೆದ ಕೆಲ ವರ್ಷಗಳಿಂದ ಮಳೆ ಕಡಿಮೆ ಆಗುತ್ತಿದ್ದು, ಬೆಳೆ ಸರಿಯಾಗಿ ಬಂದಿಲ್ಲ, ಕಳೆದ 2012-2013ನೆ ಸಾಲಿನಲ್ಲಿ ಸಂಪೂರ್ಣ ಬೆಳೆ ನಾಶವಾಗಿದ್ದರೂ ಬೆಳೆವಿಮೆ ಕೊಡದ ವಿಮಾ ಕಂಪನಿ ಒತ್ತಾಯದಿಂದ ಹಣ ವಸೂಲಿ ಮಾಡುವದಾದರೂ ಏಕೆ ಎಂದು ರೈತರು ಪ್ರಶ್ನಿಸಿದ್ದಾರೆ.
ಶಿರಾಳಕೊಪ್ಪ ನಾಡಕಚೇರಿಯಲ್ಲಿ ಉಡಗಣಿ-ತಾಳಗುಂದ ಹೋಬಳಿಯ ಹಲವಾರು ರೈತರು ತಹಸೀಲ್ದಾರ್‌ರನ್ನು ಭೇಟಿಯಾಗಿ ವಿಮಾ ಕಂಪನಿ ಬಗ್ಗೆ ಪ್ರಶ್ನಿಸಿದರು. ತಹಸೀಲ್ದಾರ್ ಗಣಾಚಾರಿ, ತಕ್ಷಣ ಕೃಷಿ ಅಧಿಕಾರಿಯನ್ನು ವಿಮೆ ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದಾಗ ಕೃಷಿ ಅಧಿಕಾರಿಗಳು ತಮಗೆ ಯಾವದೇ ಮಾಹಿತಿ ಇಲ್ಲ ಎಂಬ ಉತ್ತರದಿಂದ ರೈತರಿಗೆ ಯಾವದೇ ಸರಿಯಾದ ಉತ್ತರ ಸಿಗದೇ ಬೆಳೆ ವಿಮೆ ಪ್ರಶ್ನೆ ಪ್ರಶ್ನೆಯಾಗೆ ಉಳಿಯಿತು.
ಕಂದಾಯ ಇಲಾಖೆ ಸ್ಪಷ್ಟನೆ: ಈ ಬಗ್ಗೆ ರೈತರು ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳನ್ನು ಪ್ರಶ್ನಿಸಿದಾಗ ಕಳೆದ ವರ್ಷ ಶಿರಾಳಕೊಪ್ಪ ಭಾಗದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿ ಶೇ.50ಕ್ಕಿಂತ ಕಡಿಮೆ ಬೆಳೆ ಬಂದಿದೆ ಎಂಬ ಮಾಹಿತಿ ಹೋದರೂ ರೈತರು ಈ ವರೆಗೆ ತಮಗೆ ವಿಮೆ ಬಗ್ಗೆ ಯಾವದೇ ಮಾಹಿತಿ ತಿಳಿಯದಿರುವದರಿಂದ ವಿಮೆ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ್ದಾರೆ.
ವಿಮೆ ಕಟ್ಟಲು ಒತ್ತಾಯ ಸರಿಯಲ್ಲ: ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಬಳ್ಳಿಗಾವಿಯ ಚೆನ್ನಬಸಪ್ಪ ಮತ್ತು ಬೆಲವಂತನಕೊಪ್ಪದ ವೀರಯ್ಯ ಮಾತನಾಡಿ, ಪ್ರತಿವರ್ಷ ವಿಮೆ ಹಣವನ್ನು ಪಾವತಿಸಲಾಗುತ್ತಿದೆ. ಆದರೆ ನಮಗೆ ವಿಮೆ ಬಗ್ಗೆ ಯಾವದೇ ಮಾಹಿತಿ ಸಿಗುತ್ತಿಲ್ಲ ಆದರೂ ರೈತರಿಂದ ಒತ್ತಾಯ ಪೂರ್ವವಾಗಿ ವಿಮೆ ಕೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಸೇವಾ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಕುಮಾರ, ಮಾಜಿ ಅಧ್ಯಕ್ಷ ಸಂಗಮೇಶ್, ಚಂದ್ರಶೇಖರ್, ನಿರ್ದೇಶಕ ಶೇರ್ ಅಲಿ, ಚಿಕ್ಕಣ್ಣ ರವಿ ಕುಮಾರ ಸುರಹೊನ್ನೆ ಹಾಗೂ ಹಲವಾರು ಗ್ರಾಮಗಳ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.