ಶಿವಮೊಗ್ಗ

ನಾಳೆ ನಾಟ್ಯಶ್ರೀ ಸೆಲ್ವಂ ರಂಗಪ್ರವೇಶ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಜು.5
ನಗರದ ನಟನಂ ಬಾಲ ನಾಟ್ಯ ಕೇಂದ್ರದ 14ನೇ ರಂಗಪ್ರವೇಶ ಮತ್ತು ಗುರುವಂದನಾ ಕಾರ್ಯಕ್ರಮ ಜು.7ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ವಿದ್ವಾನ್ ಎಸ್.ಕೆ. ಕೇಶವಕುಮಾರ್ ಪಿಳ್ಳೆ ಅವರ ಪುತ್ರಿ ಹಾಗೂ ಶಿಷ್ಯೆ ನಾಟ್ಯಶ್ರೀ ಕೆ. ಸೆಲ್ವಂ ಅವರ  ಭರತನಾಟ್ಯ ರಂಗಪ್ರವೇಶ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಆದಿಚುಂಚನಗಿರಿ ಶಾಖ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಯಾಗಿ ಬೆಂಗಳೂರಿನ ನೃತ್ಯ ಗುರು ಶ್ರೀವಲ್ಲಿ ಅಂಬರೀಶ್, ಶಿವಮೊಗ್ಗದ ಗುರುಗುಹು ಸಂಗೀತ ಶಾಲೆಯ ಪ್ರಾಂಶುಪಾಲ ವಿದ್ವಾನ್ ಎಚ್.ಎಸ್. ಶೃಂಗೇರಿ ನಾಗರಾಜ್, ಹೊಸಪೇಟೆಯ ಎಂ.ಆರ್. ಪರಿಹಾರ್‌ಕುಮಾರ್, ಬೆಂಗಳೂರಿನ ಕಿರುತೆರೆ ಕಲಾವಿದೆ ಸಹನ ಮಹಳತ್ಕರ್, ನೃತ್ಯ ಶಿಕ್ಷಕಿ ಕೆ. ಬೃಂದಾ, ಎಸ್.ಪಿ. ಶಂಕರ್, ಆದಿಚುಂಚನಗಿರಿ ಪ್ರಾಂಶುಪಾಲ ಗುರುರಾಜ್ ಪಾಲ್ಗೊಳ್ಳುವರು.
ಈ ವೇಳೆ ನೃತ್ಯ ಗುರು ವಿದ್ವಾನ್ ಕಣ್ಣನ್ ಅವರನ್ನು ಸನ್ಮಾನಿಸಲಾಗುವುದು.
  ಕಾರ್ಯಕ್ರಮದ ಹಿಮ್ಮೇಳದಲ್ಲಿ ಎಸ್. ಕೇಶವಕುಮಾರ್ ಪಿಳ್ಳೆ ಅವರಿಂದ ಹಾಡುಗಾರಿಕೆ, ವನಿತ ರಾಜ್, ಡಿ. ಭಾವನ, ಅಭಿಲಾಷ ಕೆ.ಶಾಸ್ತ್ರಿ ಅವರಿಂದ ನಟುವಾಂಗ, ಕೋದಂಡರಾಮ್, ಗಣೇಶ್ ಅವರಿಂದ ಮೃದಂಗ, ಮೈಸೂರಿನ ಸಿ. ಚೇತನ್ ವಯೋಲಿನ್, ವಿಜಯ ರಂಗಧೂಳ್ ರಿದಮ್ ಪ್ಯಾಡ್, ಕಣ್ಣಗಿ ಆರ್. ಶೇಖರ್ ಅವರಿಂದ ವರ್ಣಾಲಂಕಾರವಿರುತ್ತದೆ.
ಕಲಾವಿದೆ ಪರಿಚಯ: ನಾಟ್ಯಶ್ರೀ ಕೆ. ಸೆಲ್ವಂ ನಾಲ್ಕನೇ ವಯಸ್ಸಿನಿಂದ ತಂದೆ ಕೇಶವಕುಮಾರ್ ಅವರಲ್ಲಿ ನೃತ್ಯಭ್ಯಾಸ ಆರಂಭಿಸಿದ್ದು, ಭರತ ನಾಟ್ಯದಲ್ಲಿ ವಿದ್ವತ್ ಕಲಿಕೆ ಹಾಗೂ ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸುಮಾರು 350ಕ್ಕೂ ಹೆಚ್ಚು ನೃತ್ಯ ಪ್ರದರ್ಶನ ನೀಡಿರುವ ಕೆ. ಸೆಲ್ವಂ ಅವರಿಗೆ ಹಲವಾರು ಪ್ರಶಸ್ತಿಗಳು, ಬಿರುದುಗಳು ಲಭಿಸಿವೆ.
  ಪ್ರಸ್ತುತ ನಗರದ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ನೃತ್ಯಭ್ಯಾಸವನ್ನು ಅವರು  ಮುಂದುವರೆಸಿದ್ದಾರೆ.

ಅರ್ಜಿ ಆಹ್ವಾನ
ಚಿಕ್ಕಮಗಳೂರು: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದಿಂದ ಮಹಿಳಾ ತರಬೇತಿ ಯೋಜನೆಯಡಿ ಕಂಪ್ಯೂಟರ್ ಬೇಸಿಕ್ ಸ್ಪೋಕನ್ ಇಂಗ್ಲೀಷ್ ಅಂಡ್ ಕಮ್ಯುನಿಕೇಷನ್ ಸ್ಕಿಲ್ ಮತ್ತು ಬಿ.ಪಿ.ಒ ಟ್ರೈನಿಂಗ್ ನೀಡಲು ಅರ್ಹ ವಿಕಲಚೇತನ ಮತ್ತು ಅಸಹಾಯಕ ಮಹಿಳಾ ಅಭ್ಯರ್ಥ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.