ಮಳೆ ಹಾನಿ ವರದಿ ಸಲ್ಲಿಸಲು ಒತ್ತಾಯ
ಕ.ಪ್ರ.ವಾರ್ತೆ, ಸೊರಬ, ಜು. 6
ತಾಲೂಕಿನಲ್ಲಿ ಮಳೆಯಿಂದಾದ ಹಾನಿಯ ಕುರಿತು ಶೀಘ್ರ ಪರಿಶೀಲನೆ ನಡೆಯಲಿ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಒತ್ತಾಯಿಸಿದ್ದಾರೆ.
ವರದಾ ಮತ್ತು ದಂಡಾವತಿ ನದಿ ತೀರ ಪ್ರದೇಶದ ಸಾವಿರಾರು ಎಕರೆ ಜಮೀನು ನೆರೆ ಹಾವಳಿಗೆ ತುತ್ತಾಗಿದ್ದು, ನೆರೆಪೀಡಿತ ಜಮೀನುಗಳಿಗೆ ಅಧಿಕಾರಿಗಳು ತೆರಳಿ ಪರಿಹಾರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ಬೀಜ ವಿತರಣೆಗೆ ಮನವಿ: ಪಟ್ಟಣದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಮಳೆ ಹಾವಳಿಯಿಂದಾಗಿ ಕೋಟ್ಯಂತರ ರು.ನಷ್ಟ ಸಂಭವಿಸಿದ್ದು, ಅನೇಕ ಕೆರೆ ಕಟ್ಟೆಗಳು ಶಿಥಿಲಗೊಂಡಿರುವುದು ಹಾಗೂ ಒಡೆದಿರುವುದು ರೈತನ ಭವಿಷ್ಯದ ದೃಷ್ಟಿಯಿಂದ ತುಂಬಲಾರದ ನಷ್ಟ. ಇದರೊಂದಿಗೆ ನಾಟಿಗೆ ಸಿದ್ಧಗೊಂಡ ಅಗೆ, ಬಿತ್ತಿದ ಬೀಜ ನೀರುಪಾಲಾಗಿದ್ದು, ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರದಿಂದ ಬೀಜ ವಿತರಿಸುವ ಬಗ್ಗೆ ಚಿಂತನೆ ನಡೆಸಿದ್ದು, ಮನವಿ ನೀಡಲಾಗುವುದು ಎಂದರು.
ಹೈಕಮಾಂಡ್ ನಿರ್ಧಾರಕ್ಕೆ: ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದಾಗ, ನನ್ನ ರಾಜಕೀಯ ಸೊರಬ ಕ್ಷೇತ್ರಕ್ಕೆ ಮೀಸಲು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಹೇಗಿರುತ್ತದೆಯೊ ಹಾಗೆ ನಾನು ಬದ್ಧವಾಗಿರುತ್ತೇನೆ ಎಂದು ತಿಳಿಸಿದರು.
ತಾಲ್ಲೂಕು ಬ್ಲಾಕ್ ಅಧ್ಯಕ್ಷ ಕೆ.ಮಂಜುನಾಥ್, ಮಹಿಳಾ ಅಧ್ಯಕ್ಷೆ ಕೆ.ಜೆ.ಲೋಲಾಕ್ಷಮ್ಮ, ಟೌನ್ ಅಧ್ಯಕ್ಷ ಬಂದಿಗೆ ಬಸವರಾಜಶೇಠ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಬಲಿ ಬಂಗಾರಪ್ಪ, ತಾಪಂ ಸದಸ್ಯ ಕೆ.ಅಜ್ಜಪ್ಪ, ಪಪಂ ಸದಸ್ಯ ಎಂ.ಡಿ.ಉಮೇಶ್, ಮಂಚಿ ಹನುಮಂತಪ್ಪ, ಸುಜಾಯತುಲ್ಲಾ, ಮುಖಂಡರಾದ ನಿಟ್ಟಕ್ಕಿ ಜೀವಣ್ಣ, ಜೆ.ಶಿವಾನಂದಪ್ಪ, ಕೆ.ಡಾಕಪ್ಪ, ಟಿ.ಆರ್.ಸುರೇಶ್, ಎಲ್.ಗಿರೀಶ್, ಜಿ.ಕೆರೆಯಪ್ಪ, ದಿವಾಕರ್ ಮರೂರು, ನಿರಂಜನ ಮೂರ್ತಿ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

