ಒಂದು ಟನ್ ಕಬ್ಬಿಗೆ ರು. 3,500 ನಿಗದಿಗೊಳಿಸಿ
ಕ.ಪ್ರ.ವಾರ್ತೆ ಭದ್ರಾವತಿ ಜು.6
ರೈತರು ಸಕ್ಕರೆ ಕಾರ್ಖಾನೆಗೆ 2013-14ನೇ ಸಾಲಿನಲ್ಲಿ ಸರಬರಾಜು ಮಾಡುವ ಪ್ರತಿ ಟನ್ ಕಬ್ಬಿಗೆ ಸರ್ಕಾರ ರು. 3,500 ದರ ನಿಗದಿ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಭದ್ರಾವತಿ ಘಟಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಈ ಬಗ್ಗೆ ಸಂಘ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವ ಹಂತಕ್ಕೆ ಬಂದಿದ್ದರೂ, ಕಬ್ಬಿನ ಬೆಲೆ ನಿಗದಿಯಾಗಿಲ್ಲ. ಕಳೆದ 2 ವರ್ಷಗಳಿಂದಲೂ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ವಿಳಂಬ ನೀತಿ ಅನುಸರಿಸಿದೆ. ಸಂಘ ಈ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದರೂ, ರಾಜ್ಯ ಸರ್ಕಾರ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.
ಹೆಚ್ಚುವರಿ ಹರ ಪಾವತಿಸಿಲ್ಲ: ಈ ಹಿಂದೆ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಆಗಸ್ಟ್ 19, 2011ರಂದು ಆ ಸಾಲಿನ ತಾತ್ಕಾಲಿಕ ಕಬ್ಬಿನ ದರವನ್ನು ರು. 1,800ಎಂದೂ ಹಾಗೂ ಅಂತಿಮ ದರವನ್ನು ರು. 1,900 ಎಂದು ಘೋಷಿಸಿದರೂ, ಎಂಪಿಎಂ ಸಕ್ಕರೆ ಕಾರ್ಖಾನೆ ರೈತರಿಗೆ ಹೆಚ್ಚುವರಿ ರು. 100ನ್ನು ಪಾವತಿಸಲಿಲ್ಲ.
2011-12ನೇ ಸಾಲಿಗೆ ತಾತ್ಕಾಲಿಕ ರು. 2,000ಗಳೆಂದು ಅಂದಿನ ಮುಖ್ಯಮಂತ್ರಿ ಸದಾನಂದಗೌಡರು ಘೋಷಿಸಿದಾಗ ಸಂಘವು ರು. 2,500 ನಿಗದಿಪಡಿಸಬೇಕು ಎಂದು ಒತ್ತಾಯಿಸಿತ್ತಾದರೂ ಅದಕ್ಕೆ ಮಾನ್ಯತೆ ದೊದೊರಕಲಿಲ್ಲ. 2012-13ನೇ ಸಾಲಿಗೆ ತಾತ್ಕಾಲಿಕ ದರ 2400 ರು.ಗಳೆಂದು ಘೋಷಿಸಿದಾಗಲೂ ಸಂಘ ರು. 3000 ಬೇಡಿಕೆಯನ್ನಿಟ್ಟಿತ್ತು. ಅದೂ ಸಹ ಊರ್ಜಿತವಾಗಲಿಲ್ಲ.
ದರ ನಿಗದಿಗೊಳಿಸಿ: ಈಗ 2013-14ನೇ ಸಾಲಿಗೆ ಮುಖ್ಯಮಂತ್ರಿ ಎನ್. ಸಿದ್ದರಾಮಯ್ಯನವರು ರೈತರ ಕಷ್ಟ ಪರಿಗಣಿಸಿ ರು. 3,500 ದರವನ್ನು ನಿಗದಿಪಡಿಸಬೇಕು ಹಾಗೂ ಈ ಬಾರಿಯ ಮುಂಗಡಪತ್ರದಲ್ಲಿ ರೈತರ ಹಣ ಪಾವತಿಸಲು ರು. 100 ಕೋಟಿ ಪ್ಯಾಕೇಜನ್ನು ಘೋಷಿಸಬೇಕೆಂದು ಕಬ್ಬು ಬೆಳೆಗಾರರ ಸಂಘದ ಭದ್ರಾವತಿ ಘಟಕದ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

