ನಿಯಮ ಉಲ್ಲಂಘಿಸಿದರೆ ಕ್ರಮ
ಕ.ಪ್ರ.ವಾರ್ತೆ ಶಿವಮೊಗ್ಗ ಜು.10
ಜಿಲ್ಲೆಯಾದ್ಯಂತ ಜುಲೈ 10 ರಿಂದ ಗುಟ್ಕಾ ಮಾರಾಟವನ್ನು ಸಂಪೂರ್ಣ ನಿಷೇಧ ಮಾಡಿದ್ದು, ನಿಯಮ ಉಲ್ಲಂಘಿಸುವ ಮಾರಾಟಗಾರರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಮೇ 30ರಂದು ರಾಜ್ಯಾದ್ಯಂತ ಗುಟ್ಕಾ ಮಾರಾಟ ನಿಷೇಧ ಮಾಡಲಾಗಿತ್ತು. ಆದರೆ, ಜಿಲ್ಲೆಯ ಗುಟ್ಕಾ ವ್ಯಾಪರಸ್ಥರು ಅಂಗಡಿಯಲ್ಲಿ ಈಗಿರುವ ಗುಟ್ಕಾವನ್ನು ಮಾರಾಟ ಮಾಡಲು ಕಾಲವಕಾಶ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರಿಂದ ಜುಲೈ 10ರವಗೆ ಕಾಲವಕಾಶ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಅದರಂತೆ ಜಿಲ್ಲಾಡಳಿತ ಜುಲೈ 10ರ ನಂತರ ಗುಟ್ಕಾ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದೆ.
ಈಗಾಗಲೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ನಗರದಲ್ಲಿರುವ 102 ಗುಟ್ಕಾ ಅಂಗಡಿಗಳಿಗೆ ಗುಟ್ಕಾ ಮಾರಾಟ ಮಾಡದಂತೆ ನೋಟಿಸ್ ನೀಡಿದೆ. ಗುಟ್ಕಾ ಮಾರಾಟ ಮಾಡುವ ಅಂಗಡಿಗಳ ತಪಾಸಣೆ ನಡೆಸಲು ಪ್ರತ್ಯೇಕ ತಂಡವನ್ನು ಈಗಾಗಲೇ ರಚನೆ ಮಾಡಿದ್ದು, ತಂಡ ಗುರುವಾರದಿಂದ ಗುಟ್ಕಾ ಅಂಗಡಿಗಳ ಮೇಲೆ ದಾಳಿ ನಡೆಸಿ ತಪಾಸಣಾ ಕಾರ್ಯಕೈಗೊಳ್ಳಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ದಂಡ, ಜೈಲು ಶಿಕ್ಷೆ: ಒಂದು ವೇಳೆ ನಿಯಮ ಉಲ್ಲಂಘಿಸಿ ಗುಟ್ಕಾ ಮಾರಾಟ, ಸಂಗ್ರಹಣೆ ಮಾಡುವ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲು ಮಾಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 57, 58 ಮತ್ತು 59ರ ಉಪ ಕಲಂಗಳ ಅನ್ವಯ ನಿಯಮ ಉಲ್ಲಂಘಿಸಿದವರಿಗೆ 10 ಲಕ್ಷ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು.
ಪರ್ಯಾಯ ಗುಟ್ಕಾ: ಸರ್ಕಾರ ಚಾಪೆ ಕಳೆಗೆ ನುಸುಳಿದರೆ, ವ್ಯಾಪಾರಸ್ಥರು, ಗುಟ್ಕಾ ಗೀಳಂಟಿಸಿಕೊಂಡವರು ರಂಗೋಲಿ ಕಳೆಗೆ ನುಸುಳುತ್ತಿದ್ದಾರೆ.
ರಾಜ್ಯದಲ್ಲಿ ಗುಟ್ಕಾ ಮಾರಾಟವೆನೋ ನಿಷೇಧ ಮಾಡಿದ್ದಾಗಿದೆ. ಆದರೆ, ಗುಟ್ಕಾ ಜಗಿಯುವವರು, ವ್ಯಾಪರಸ್ಥರು ಇದಕ್ಕೊಂದು ಪರ್ಯಾಯ ಕಂಡುಕೊಂಡಿದ್ದಾರೆ.
ಒಂದು ಅಡಕೆ ಪ್ಯಾಕೇಟ್ನೊಂದಿಗೆ ಸಣ್ಣದೊಂದು ಮಸಾಲಾ ಪ್ಯಾಕೇಟ್ ಪಡೆದು ಜಗಿಯಲು ಪ್ರಾರಂಭಿಸಿದ್ದಾರೆ. ಈ ಪ್ಯಾಕೇಟ್ಗಳ ಮೇಲೆ ಗುಟ್ಕಾ ಮತ್ತು ಪಾನ್ ಮಸಾಲ, ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನು ಬಳಸಲಾಗಿಲ್ಲ ಎಂದು ಮುದ್ರಿತವಾಗಿದೆ. ಆದರಿಂದ ಈ ಗುಟ್ಕಾ ಪ್ಯಾಕೇಟ್ಗಳನ್ನು ನಿಷೇಧ ಮಾಡಲು ಬರುವುದಿಲ್ಲ ಎಂಬುದು ವ್ಯಾಪರಸ್ಥರ ನಿಲುವು. ಆದರಿಂದ ಇಂತಹ ಪ್ಯಾಕೇಟ್ಗಳು ಮಾರಾಟ ಮಾಡುತ್ತಿದ್ದರೆ ದಾಳಿ ಮಾಡಿ ಕ್ರಮಕೈಗೊಳ್ಳುವುದಾದರೂ ಹೇಗೆ ಎನ್ನುತ್ತಾರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

