ಶಿವಮೊಗ್ಗ

ಕ್ರಷರ್ ಸುರಕ್ಷಿತ ವಲಯ ಸ್ಥಾಪಿಸಿ

Published On :

ಕ.ಪ್ರ.ವಾರ್ತೆ, ಸಾಗರ, ಜು.11
ಹೊಸನಗರ ತಾಲೂಕಿನ ಮಸಗಲ್ಲಿ ಸ.ನಂ. 16ರಲ್ಲಿ ಕ್ರಷರ್ ಸುರಕ್ಷಿತ ವಲಯ ಸ್ಥಾಪಿಸುವಂತೆ ಒತ್ತಾಯಿಸಿ ಬುಧವಾರ ಜಲ್ಲಿ ಬಳಕೆದಾರರು, ಕ್ರಷರ್ ಕಾರ್ಮಿಕರು ಹಾಗೂ ಲಾರಿ ಮಾಲೀಕರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಮಸಗಲ್ಲಿ ಸ.ನಂ. 16 ರಲ್ಲಿ ಸುರಕ್ಷಿತ ವಲಯವನ್ನು ಗುರುತಿಸಿದೆ. ಜಲ್ಲಿ ಕಲ್ಲುಪುಡಿ ಮಾಡುವ ಪ್ರತಿಯೊಂದು ಘಟಕಕ್ಕೆ ಕಚ್ಚಾವಸ್ತು ಸಿಗಬೇಕು ಎನ್ನುವ ಉದ್ದೇಶದಿಂದ 20 ಎಕರೆ ಪ್ರದೇಶ ಕೋರೆ ನಡೆಸಲು ಮಂಜೂರಾಗಿರುತ್ತದೆ.
ಉದ್ಯೋಗಕ್ಕೆ ಸೂಕ್ತ ಸ್ಥಳ: ಕಲ್ಲುಕೋರೆ ಸ್ಪೋಟಿಸಲು ಹಿಂದಿನ ಜಿಲ್ಲಾಧಿಕಾರಿಗಳು ನಿರಾಕ್ಷೇಪಣಪತ್ರವನ್ನು ನೀಡಿದ್ದಾರೆ. ಆದ್ದರಿಂದ ಮಸಗಲ್ಲಿ ಸ.ನಂ. 16 ಕ್ರಷರ್ ಉದ್ಯೋಗಕ್ಕೆ ಸೂಕ್ತ ಸ್ಥಳವೆಂದು ಮನವಿಯಲ್ಲಿ ಹೇಳಲಾಗಿದೆ.
ಸ.ನಂ.16ರಲ್ಲಿ ಕ್ರಷರ್ ಸುರಕ್ಷಿತ ವಲಯ ಸ್ಥಾಪಿಸುವುದರಿಂದ ಸಾಗಾಣಿಕೆ ವೆಚ್ಚ ಕಡಿಮೆಯಾಗಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಜಲ್ಲಿ ಪೂರೈಸಲು ಸಾಧ್ಯವಾಗುತ್ತದೆ. ಜೊತೆಗೆ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದಂತೆ ಆಗುತ್ತದೆ.
ಮಸಗಲ್ಲಿ ಗ್ರಾಮಕ್ಕಿಂತ ಹತ್ತಿಪ್ಪತ್ತು ಕಿ.ಮೀ. ದೂರದಲ್ಲಿ ಕ್ರಷರ್ ಸ್ಥಾಪನೆ ಮಾಡಿದರೆ ಇಂದಿನ ಡಿಸೇಲ್ ದರದಲ್ಲಿ ಗ್ರಾಹಕರಿಗೆ ಕಡಮೆ ವೆಚ್ಚದಲ್ಲಿ ಜಲ್ಲಿ ಪೂರೈಸಲು ಸಾಧ್ಯವಾಗುವುದಿಲ್ಲ.
ಸುಧಾಕರ್, ರಾಬರ್ಟ್, ಎಸ್.ಕೆ. ಚಂದ್ರು, ಪ್ರಸಾದ್, ದಿವಾಕರ ಶೆಟ್ಟಿ, ಕುಮಾರ್, ಕಲ್ಯಾಣಪ್ಪ ಗೌಡ, ಮಹಾಬಲ, ಜಯದೇವಪ್ಪ ಗೌಡ, ವಿನಯ್, ಮಂಜಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.