ನ್ಯಾನೋ ಸೈನ್ಸ್ ಅಂಡ್ ಟೆಕ್ನಾಲಜಿ ಪ್ರವೇಶ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕೇಂದ್ರ ಸರ್ಕಾರದ ನ್ಯಾನೋಮಿಶನ್ನಿಂದ ಪ್ರಾಯೋಜಿತವಾದ 2 ವರ್ಷದ ನ್ಯಾನೋ ಸೈನ್ಸ್ ಅಂಡ್ ಟೆಕ್ನಾಲಜಿ (ಎಂ.ಟೆಕ್) ಸ್ನಾತಕೋತ್ತರ ಪದವಿ ತರಗತಿ ನಡೆಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿಗೆ ಅರ್ಜಿ ಆಹ್ವಾನಿಸಿದೆ.
ಎಂಎಸ್ಸಿ ಅಥವಾ ಬಿಇಬಿಟೆಕ್ನಲ್ಲಿ ಕನಿಷ್ಠ ಶೇ.50 (ಪ.ಜಾ.ಪ.ಪಂ ಅಭ್ಯರ್ಥಿಗಳಿಗೆ ಶೇ.45) ಅಂಕದೊಂದಿಗೆ ಉತ್ತೀರ್ಣರಾಗಿರುವವರು ಜು.17ರೊಳಗೆ ಅರ್ಜಿಯನ್ನು ಸಲ್ಲಿಸಿ, ವಿಜ್ಞಾನ ಭವನದಲ್ಲಿ ಜುಲೈ 20ರಂದು ನಡೆಯುವ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸೂಚಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಸಿಕ 8 ಸಾವಿರ ಹಾಗೂ ವಾರ್ಷಿಕ 25 ಸಾವಿರ ರು.ಗಳನ್ನು ಲೇಖನ ಸಾಮಾಗ್ರಿಗಳ ಖರೀದಿಗಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಯೋಜನಾಧಿಕಾರಿ ಡಾ. ಜೆ. ಮಂಜಣ್ಣ ಇವರನ್ನು ಸಂಪರ್ಕಿಸಬಹುದು. ಮೊ- 9916584954 (ಢಿಢಿಢಿ.್ಞ್ಡಢಜಟಠ್ಡ.ಛ್ಛ.್ಝಟಿ)
ಮಾಹಿತಿ ಕಾರ್ಯಕ್ರಮ
ಶಿವಮೊಗ್ಗ: ಪದವಿ ಪೂರ್ವ ಕಾಲೇಜು ಅಧ್ಯಾಪಕರ ವೇದಿಕೆ ಜುಲೈ 15ರಂದು ಸಂಜೆ 5.30ಕ್ಕೆ ನಗರದ ಆಚಾರ್ಯ ತುಳಸಿ ಕಾಲೇಜಿನ ಚಂದನ ಸಭಾಂಗಣದಲ್ಲಿ ನೆಟ್ ಮತ್ತು ಸ್ಲೇಟ್ ಬಗ್ಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಿದೆ. ಮುಖ್ಯಅತಿಥಿಯಾಗಿ ಕುವೆಂಪು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಜೆ. ಮಾದೇಗೌಡ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಪ್ರೊ.ಕೆ.ವಿ. ಸಜ್ಜನ್ ಶೆಟ್ಟರ್ ವಹಿಸುವರು ಎಂದು ವೇದಿಕೆ ತಿಳಿಸಿದೆ.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಾಪಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಗೌರವಾಧ್ಯಕ್ಷರಾಗಿ ಸಮಾಜಶಾಸ್ತ್ರ ವಿಭಾಗದ ಡಾ.ಎ. ಚಂದ್ರಶೇಖರ್, ಸಾಗರದ ಇಂದಿರಾ ಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಪಿ. ಉಮೇಶ್, ಉಪಾಧ್ಯಾಕ್ಷರಾಗಿ ಸಹ್ಯಾದ್ರಿ ಕಾಲೇಜಿನ ಡಾ.ಎಚ್.ಎಸ್. ಕೃಪಾಲಿನಿ, ಕಾರ್ಯದರ್ಶಿಯಾಗಿ ಎಸ್ಎಂಆರ್ ಪ್ರದ ಕಾಲೇಜಿನ ಪ್ರೊ.ಎಂ.ಸಿ. ಲೋಕೇಶ್ವರಪ್ಪ, ಸಹ ಕಾರ್ಯದರ್ಶಿಯಾಗಿ ರಿಪ್ಪನ್ಪೇಟೆಯ ಸಪ್ರದ ಕಾಲೇಜಿನ ಡಾ.ಎಚ್.ಎಸ್. ಮೋಹನ, ಸಂಘಟನಾ ಕಾರ್ಯದರ್ಶಿಯಾಗಿ ಭದ್ರಾವತಿಯ ಸರ್.ಎಂ.ವಿ. ಕಾಲೇಜಿನ ಡಾ. ಸಕ್ರೀನಾಯ್ಕ್, ಶಿವಮೊಗ್ಗದ ಸಪ್ರದ ಕಾಲೇಜಿನ ರೇಷ್ಮ, ಕಡೂರು ಕಾಲೇಜಿನ ವೆಂಕಟನರಸಯ್ಯ ಅವರು ನೇಮಕಗೊಂಡಿದ್ದಾರೆ.
17ರಂದು ಹಾಲಿನ ಅಭಿಷೇಕ
ಶಿವಮೊಗ್ಗ ಗಾಂಧಿಬಜಾರ್ನ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ಜುಲೈ 17ರಂದು ಬೆಳಿಗ್ಗೆ 10.30ರಿಂದ 12.30ರವರೆಗೆ ಶ್ರೀ ದೇವಿಗೆ ಹಾಲಿನ ಅಭಿಷೇಕವನ್ನು ಏರ್ಪಡಿಸಿದೆ. ಈ ಹಿನ್ನೆಲೆಯಲ್ಲಿ ಹಾಲಿನ ಅಭಿಷೇಕ ಮಾಡಿಸುವ ಭಕ್ತಾಧಿಗಳು ಸೇವಾ ಶುಲ್ಕ ಪಾವತಿಸಿ, ರಶೀದಿ ಪಡೆಯಬಹುದು ಎಂದು ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.
ಪುಸ್ತಕ ಬಿಡುಗಡೆ
ಶಿವಮೊಗ್ಗ: ನಗರದ ಕಮಲಾ ನೆಹರೂ ರಾಷ್ಟ್ರೀಯ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ. ನರೇಂದ್ರನಾಯಕ್ ಬರೆದಿರುವ ಲಂಬಾಣಿಗಳ ಸಾಮಾಜಿಕ ಅಧ್ಯಯನ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜು.16ರ ಮಂಗಳವಾರ ಸಂಜೆ 4 ಗಂಟೆಗೆ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನೆರವೇರಲಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದ ಕನ್ನಡ ಭಾರತಿ ಜ್ಞಾನ ಸಹ್ಯಾದ್ರಿ ಕುವೆಂಪು ವಿಶ್ವವಿದ್ಯಾನಿಯಲದ ಪ್ರೊ. ಸಣ್ಣರಾಮ ಪುಸ್ತಕ ಕುರಿತು ಮಾತನಾಡಲಿದ್ದಾರೆ.
ಪಾರದರ್ಶಕ ಬಜೆಟ್: ವಿಜಯಲಕ್ಷ್ಮಿ ಶ್ಲಾಘನೆ
ಶಿಕಾರಿಪುರ: ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಮಂಡಿಸಿದ ಚೊಚ್ಚಲ ಬಜೆಟ್ ಪಾರದರ್ಶಕವಾಗಿದ್ದು, ಎಲ್ಲಾ ವರ್ಗದವರ ಆಶಾಕಿರಣವಾಗಿ ಹೊರಹೊಮ್ಮಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ವಿಜಯಲಕ್ಷ್ಮಿ ಕಂಚುಗಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆಯಲ್ಲಿ ಈ ಬಗ್ಗೆ ತಿಳಿಸಿರುವ ಅವರು, ಸಮಾಜದಲ್ಲಿ ಮಂಗಳಮುಖಿಯರ ಸ್ಥಿತಿ ಅತ್ಯಂತ ಹೀನಾಯವಾಗಿದ್ದು, ಮಂಗಳಮುಖಿಯರಿಗೆ ಮಾಸಾಶನ ನೀಡುವ ಬಗ್ಗೆ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಜತೆ ಕೆಲದಿನದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಮಂಗಳಮುಖಿಯರಿಗೆ ರು. 500 ಮಾಸಾಶನವನ್ನು ಬಜೆಟ್ನಲ್ಲಿ ಘೋಷಿಸುವ ಮೂಲಕ ಸಕಾರಾತ್ಮವಾಗಿ ಮನವಿಗೆ ಶೀಘ್ರ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿರುವ ಅವರು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬಡವರ, ಕೂಲಿ ಕಾರ್ಮಿಕರ, ಅಲ್ಪಸಂಖ್ಯಾತರ ಎಲ್ಲಾ ವರ್ಗದ ಜನತೆಯ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಅತ್ಯುತ್ತಮ ಸರ್ಕಾರ ಎಂಬ ಪ್ರಶಸ್ತಿಗೆ ಬಾಜನವಾಗಲಿ ಎಂದು ಅವರು ಹಾರೈಸಿದ್ದಾರೆ.
ಪಾನ್ ಕಾರ್ಡ್ ಅಭಿಯಾನ
ಶಿಕಾರಿಪುರ: ಜೇಸಿಐ ಶಿಕಾರಿಪುರ ಚಂದನ್ ಅವರಿಂದ ಜು.14ರ ಭಾನುವಾರ ಬೆಳಗ್ಗೆ 9.30 ಕ್ಕೆ ಪಟ್ಟಣದ ಶಿಶು ವಿಹಾರದಲ್ಲಿ ಪಾನ್ ಕಾರ್ಡ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಪಾನ್ ಕಾರ್ಡ್ ಮಹತ್ವ, ಹೊಂದುವ ಬಗ್ಗೆ ಹಾಗೂ ಪಾನ್ ಕಾರ್ಡ್ ಬಗೆಗಿನ ಎಲ್ಲಾ ಸಮಸ್ಯೆಗೆ ತಜ್ಞರಿಂದ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜೇಸಿಐ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಸಾಗರ: ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ 2013-14ನೇ ಸಾಲಿಗೆ ಎಂಕಾಂ, ಎಂಎ, (ಇಂಗ್ಲಿಷ್) ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು 13ರಿಂದ ಕಾಲೇಜಿನಲ್ಲಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜು. 22ರೊಳಗೆ ಕಚೇರಿಗೆ ತಲುಪಿಸತಕ್ಕದ್ದು. ಜು. 24ರಂದು ಅಂಕಗಳ ಜೇಷ್ಠತೆ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆಪಟ್ಟಿಯನ್ನು ಕಾಲೇಜಿನ ಸೂಚನಾಫಲಕದಲ್ಲಿ ಪ್ರಕಟಿಸಲಾಗುವುದು. ದಾಖಲಾತಿ ಸಮಯದಲ್ಲಿ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಅಂಕಪಟ್ಟಿ, ಪದವಿಯ ಎಲ್ಲ ಸೆಮಿಸ್ಟರ್ ಅಂಕಪಟ್ಟಿಗಳು, ಸೆಟ್ ನಕಲು ಪ್ರತಿಗಳು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಹಾಜರಾಗಲು ಪ್ರಾಚಾರ್ಯ ಡಾ. ಅಶೋಕ ಡಿ. ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

