ಸಂತ್ರಸ್ತರ ಪರಿಹಾರ ನಿಧಿಗೆ ಅನುದಾನ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.14
ಉತ್ತರಾಖಂಡದ ಹರಿದ್ವಾರ ಮತ್ತು ಕೇದಾರನಾಥದಲ್ಲಿ ಸಂಭವಿಸಿದ ಜಲಪ್ರಳಯ, ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರಿಗಾಗಿ ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲೆಯ ಹಲವು ಸಂಘ, ಸಂಸ್ಥೆಗಳು ಅನುದಾನ ನೀಡಿವೆ.
ಅನುದಾನಿತ ಶಿಕ್ಷಣ ಸಂಸ್ಥೆ ನೌಕರರ ಸಹಕಾರ ಸಂಘದ ಅಧ್ಯಕ್ಷ ಡಾ. ಕೆ.ಎಚ್. ಕುಮಾರಸ್ವಾಮಿ ನೇತೃತ್ವದಲ್ಲಿ 10 ಸಾವಿರ ರುಪಾಯಿಗಳ ದೇಣಿಗೆಯನ್ನು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಕೆ. ಮಂಜಪ್ಪ, ನಿರ್ದೇಶಕ ಟಿ.ಎಂ. ಕುಮಾರ್ ಮತ್ತು ಸಿ.ಆರ್. ಗಾಯಿತ್ರಿ ಇದ್ದರು.
ನಗರದ ಬ್ರಾಹ್ಮಣ ಸಮಾಜದ ಬಬ್ಬೂರುಕಮ್ಮೆ ಸೇವಾ ಸಮಿತಿ ಹಾಗೂ ಬ್ರಾಹ್ಮಣ ಸೇವಾ ಸಂಘ ಪ್ರಕೃತಿ ವಿಕೋಪದ ಸಂತ್ರಸ್ತರ ಪರಿಹಾರ ನಿಧಿಗೆ ತಲಾ 15 ಮತ್ತು 10 ಸಾವಿರ ರುಪಾಯಿಗಳನ್ನು ಸಂಗ್ರಹಿಸಿದ್ದು, ಚೆಕ್ ರೂಪದಲ್ಲಿ ಪರಿಹಾರ ನಿಧಿಗೆ ಜಿಲ್ಲಾಡಳಿತದ ಮೂಲಕ ಸಲ್ಲಿಸಿತು. ಈ ಸಂದರ್ಭದಲ್ಲಿ ಬಬ್ಬೂರುಕಮ್ಮೆ ಸಂಘದ ಅಧ್ಯಕ್ಷ ಕಾರಕೋಡ್ಲು ಗುರುಮೂರ್ತಿ, ಕಾರ್ಯದರ್ಶಿ ಎಸ್. ನಾಗೇಶ್, ಲಕ್ಷ್ಮೀಶ್ರೀಧರ್, ಖಜಾಂಚಿ ಕೆ.ಎಸ್. ನಾಗರಾಜಶಾಸ್ತ್ರಿ, ಎನ್.ಜಿ. ಅನಂತರಾಮ್, ಬ್ರಾಹ್ಮಣ ಸಂಘದ ಅಧ್ಯಕ್ಷ ಎಚ್. ರವಿಶಂಕರ್, ಉಪಾಧ್ಯಕ್ಷ ಎಸ್.ಜಿ. ಗೋಪಾಲ್, ಮಾಧವಮೂರ್ತಿ, ಕಾರ್ಯದರ್ಶಿ ಎಚ್.ಡಿ. ಚಂದ್ರಶೇಖರ್, ಸಹಕಾರ್ಯದರ್ಶಿ ಸೂರ್ಯನಾರಾಯಣರಾವ್ ಹಾಗೂ ಖಜಾಂಚಿ ವೆಂಕಟೇಶ್ ರಾವ್, ನಿರ್ದೇಶಕ ಗೋವಿಂದಸ್ವಾಮಿ, ಎಸ್. ಅನಂತಶಾಸ್ತ್ರಿ, ಸಂತೋಷ್ ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

