ರಂಗಾಯಣ ನಿರ್ದೇಶಕ ಹೊ.ನ. ಸತ್ಯ ರಾಜಿನಾಮೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.15
ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ಅವರು ಸೋಮವಾರ ಸಂಜೆ ರಾಜಿನಾಮೆ ಪತ್ರವನ್ನು ಆಡಳಿತಾಧಿಕಾರಿಯವರಿಗೆ ನೀಡಿದ್ದು, ಆಯುಕ್ತರಿಗೆ ಫ್ಯಾಕ್ಸ್ ಮೂಲಕ ಸಲ್ಲಿಸಿದ್ದಾರೆ.
2011ರ ಅಕ್ಟೋಬರ್ 12ರಂದು ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ರಂಗಾಯಣದ ಪ್ರಥಮ ನಿರ್ದೇಶಕರಾಗಿದ್ದ ಇವರ ಅಧಿಕಾರಾವಧಿ ಮೂರು ವರ್ಷವಿದ್ದು, ಅದಕ್ಕಿಂತ ಮುನ್ನವೇ ರಾಜಿನಾಮೆ ನೀಡಿದ್ದಾರೆ.
ಈ ಎರಡು ವರ್ಷದ ಅವಧಿಯಲ್ಲಿ ರಂಗಾಯಣಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಿಸುವ, ಕಲಾವಿದರ ಆಯ್ಕೆ ಮಾಡುವ ಪ್ರಕ್ರಿಯೆಗೆ ಸರ್ಕಾರದ ಅನುಮತಿ ಸಿಗಲೇ ಇಲ್ಲ. ಈ ಕಾರಣದಿಂದ ಶಿವಮೊಗ್ಗ ರಂಗಾಯಣವು ಹವ್ಯಾಸಿ ತಂಡಗಳ ಹಲವು ರಂಗೋತ್ಸವಗಳನ್ನು ಆಯೋಜಿಸಿತ್ತು. ಇವರ ಅವಧಿಯಲ್ಲಿಯೇ ನಗರದ ಸುವರ್ಣ ಸಂಸ್ಕೃತಿ ಭವನವು ರಂಗಾಯಣದ ಸುಪರ್ದಿಗೆ ಬಂದಿದ್ದು, ಅದನ್ನು ಸುಸಜ್ಜಿತಗೊಳಿಸಲಾಗಿದೆ.
ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲಾ ರಂಗತಂಡಗಳು, ರಂಗಕಲಾವಿದರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ರೆಪರ್ಟರಿ ಕಟ್ಟುವ, ರಂಗಸಹಸ್ರ ಕಾರ್ಯಕ್ರಮ ಮಾಡುವ, ಕೆ.ವಿ. ಸುಬ್ಬಣ್ಣ ಅವರ ಸ್ಮರಣೆಯಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಸುವುದೂ ಸೇರಿದಂತೆ ಹಲವು ಯೋಜನೆಗಳು ಈಗ ಇವರ ರಾಜಿನಾಮೆಯಿಂದ ತಡೆ ಬಿದ್ದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

