ಸಾಮಾಜಿಕ ನ್ಯಾಯದ ಬಜೆಟ್: ಗುರುಮೂರ್ತಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.15
ಹತ್ತು ವರ್ಷಗಳ ನಂತರ, ಅನ್ನ, ಅಕ್ಷರ ಮತ್ತು ನೆರಳಿಲ್ಲದವರ ಪರವಾಗಿ ಕೊಟ್ಟಿರುವ ಸಾಮಾಜಿಕ ನ್ಯಾಯದ ಮೊದಲ ಬಜೆಟ್ ಇದಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮಂಡಿಸಿದ ಬಜೆಟ್ಗಳೆಲ್ಲಾ ಆಸ್ತಿ, ಅಧಿಕಾರ, ಭೂಮಿ ಮತ್ತು ಬಂಡವಾಳ ಇದ್ದವರ ಪರವಾದ ಬಜೆಟ್ ಆಗಿರುತ್ತಿತ್ತು. ಬಲಾಢ್ಯ ಜಾತಿಗಳಿಗೆ, ಮಠಮಾನ್ಯಗಳಿಗೆ ಹೇರಳವಾಗಿ ಹಣವನ್ನು ನೀಡಿ ರಾಜ್ಯವನ್ನು ಆರ್ಥಿಕ ಅಧಃಪತನದತ್ತ ಕೊಂಡೊಯ್ದ ಹಿಂದಿನ ಸರ್ಕಾರಗಳ ನಡೆಗಳನ್ನು ಧಿಕ್ಕರಿಸಿರುವ ಸಿದ್ಧರಾಮಯ್ಯನವರು ಬಡವರ ಸಾಲವನ್ನ, ಅನ್ನಭಾಗ್ಯ, ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಮಕ್ಕಳಾಭಿವೃದ್ಧಿ, ಆರೋಗ್ಯ ಶಿಕ್ಷಣ, ವಸತಿ ಮುಂತಾದ ಯೋಜನೆಗಳಿಗೆ ಸಹಸ್ರಾರು ಕೋಟಿ ರುಪಾಯಿ ಹಣವನ್ನು ಮೀಸಲಾಗಿಟ್ಟು ಎಲ್ಲ ಸಮುದಾಯಗಳಿಗೂ ಆಯವ್ಯಯದಲ್ಲಿ ಪಾಲು ಹಂಚಿ ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆದಿದ್ದಾರೆಂಬುದಕ್ಕೆ ಅವರು ಮಂಡಿಸಿದ ಬಜೆಟ್ ಸಾಕ್ಷಿಯಾಗಿದೆ ಎಂದಿದ್ದಾರೆ.
ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಕುಸಿದುಹೋಗಿರುವ ರಾಜ್ಯದ ಅಭಿವೃದ್ಧಿಯನ್ನು ಸರಿದಾರಿಗೆ ತರುವ ಮಹತ್ವದ ಪ್ರಯತ್ನವಾಗಿದೆ ಎಂದು ಗುರುಮೂರ್ತಿ ಹೇಳಿದ್ದಾರೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

