ಶಿವಮೊಗ್ಗ

ಸರಗಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಶಿವಮೊಗ್ಗ: ನಗರದಲ್ಲಿ ಸರಗಳ್ಳರು ಹೆಚ್ಚಾಗಿದ್ದು, ರಕ್ಷಣಾ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿನೋಬನಗರ ಬಡಾವಣೆಯ ಮಾತಾ ಮಹಿಳಾ ಸಂಘದ ಸದಸ್ಯರು ಎಸ್ಪಿ ಕೌಶಲೇಂದ್ರ ಕುಮಾರ್‌ಗೆ ಬುಧವಾರ ಮನವಿ ಸಲ್ಲಿಸಿದರು.
 ದಿನದಿಂದ ದಿನಕ್ಕೆ ಸರಗಳ್ಳತನ ಹೆಚ್ಚಾಗುತ್ತಿದ್ದು, ಮಹಿಳೆಯರು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ. ಅದರಲ್ಲಿಯೂ ವಿನೋಬನಗರ ಬಡಾವಣೆಯಲ್ಲಿ ಸರಗಳ್ಳತನ, ವಾಹನಗಳಲ್ಲಿನ ಪೆಟ್ರೋಲ್- ಡೀಸಲ್ ಕಳವು, ದ್ವಿಚಕ್ರ ವಾಹನ ಕಳವು ಪ್ರಕರಣಗಳು ವಿಪರೀತವಾಗಿವೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಕೂಡ ಮಾಡಲಾಗಿತ್ತು. ಆದರೂ ಕಳ್ಳರ ಹಾವಳಿ ಕಡಿಮೆಯಾಗಿಲ್ಲ ಎಂದು ಸದಸ್ಯರು ದೂರಿದರು.
ಕಿಟಕಿ ಗಾಜಿಗೆ ಕಲ್ಲು: ಪೊಲೀಸ್ ಠಾಣೆಗೆ ದೂರು ನೀಡಿದರೆ ರಾತ್ರಿ ವೇಳೆ ಕಿಟಕಿ ಗಾಜುಗಳಿಗೆ ಕಲ್ಲಿನಿಂದ ಹೊಡೆಯುತ್ತಾರೆ. ಇದರಿಂದ ನಾಗರೀಕರು ಆತಂಕದಲ್ಲೇ ಜೀವನ ನಡೆಸಬೇಕಿದೆ ಎಂದ ಸದಸ್ಯರು, ಬಡಾವಣೆಯಲ್ಲಿರುವ ನೆಹರು ಉದ್ಯಾನವನದಲ್ಲಿ ಯುವಕ- ಯುವತಿಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದರಿಂದ ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತದೆ. ಆದ್ದರಿಂದ ರಕ್ಷಣಾ ಇಲಾಖೆ ಸೂಕ್ತ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
 ಸರಗಳ್ಳರಿಗೆ ಪೊಲೀಸರು ಬೆಂಗಾವಲಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಅಂತಹ ಅಧಿಕಾರಿಗಳ ವಿರುದ್ಧವು ಕ್ರಮಕೈಗೊಳ್ಳಿ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.