ಲೋಕ ಅದಾಲತ್
ಶಿವಮೊಗ್ಗ: ಕಾನೂನು ಮತ್ತು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಪಂ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ಅರಣ್ಯ ಇಲಾಖೆ ಹಾಗೂ ವಾರ್ತಾ ಇಲಾಖೆಗಳ ಆಶ್ರಯದಲ್ಲಿ ಜುಲೈ 24 ರಿಂದ 26 ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆಯ ಮೂಲಕ ಸಂಚಾರಿ ಲೋಕ ಅದಾಲತ್ ಮತ್ತು ಕಾನೂನು ಸಾಕ್ಷರತೆ ಹಾಗೂ ನೆರವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಥಯಾತ್ರೆ
ಶಿವಮೊಗ್ಗ: 24 ರಂದು ಬೆಳಿಗ್ಗೆ 10.15ಕ್ಕೆ ಶಿವಮೊಗ್ಗದ ಕೋರ್ಟ್ ಆವರಣದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಎಂ. ಶೆಟ್ಟರ್ ಕಾನೂನು ಸಾಕ್ಷರತಾ ರಥಯಾತ್ರೆಗೆ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಮಾಚೇನಹಳ್ಳಿಯ ಅಂಗನವಾಡಿ ಕೇಂದ್ರದ ಸಭಾ ಭವನದಲ್ಲಿ ಎರಡನೇ ಹೆಚ್ಚುವರಿ ಸಿವಿಲ್‌ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ತಾಪಂ ಸದಸ್ಯ ಸೋಮಶೇಖರ್, ನಿಧಿಗೆ ಗ್ರಾಪಂ ಅಧ್ಯಕ್ಷ ಕರಿಬಸಪ್ಪ ಹಾಗೂ ಗ್ರಾಪಂ ಸದಸ್ಯ ಗುತ್ಯಪ್ಪ ಪಾಲ್ಗೊಳ್ಳುವರು ಹಾಗೂ ವಕೀಲರ ಸಂಘದ ಅಶೋಕ್ ಜಿ. ಭಟ್ ಅಧ್ಯಕ್ಷತೆ ವಹಿಸುವರು. ಕಾನೂನು ವಿಷಯವಾದ ಜನ ಸಾಮಾನ್ಯರಿಗಾಗಿ ಕಾನೂನು ಅಪರಾಧಿತ ಕಾನೂನುಗಳ ಬಗ್ಗೆ ವಕೀಲ ಎಂ.ಎಸ್. ಹಾಲಪ್ಪಗೌಡ ಹಾಗೂ ಎಂ.ಎಚ್. ಉದಯಕುಮಾರ್ ಮಾಹಿತಿ ನೀಡುವರು.
ಹತ್ಯೆಗೆ ಖಂಡನೆ
ಶಿವಮೊಗ್ಗ: ಇತ್ತೀಚೆಗೆ ಸೇಲಂನಲ್ಲಿ ತಮಿಳುನಾಡಿನ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ರಮೇಶ್‌ರನ್ನು ಇಸ್ಲಾಮಿಕ್ ತೀವ್ರವಾದಿಗಳು ಹತ್ಯೆಗೈದಿರುವುದನ್ನು ಖಂಡಿಸುವುದಾಗಿ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಎಸ್. ಜ್ಞಾನೇಶ್ವರ್ ಹೇಳಿದ್ದಾರೆ. ದೇಶಪ್ರೇಮಿ ನಾಯಕರನ್ನು ಹತೈಗೈಯುವುದರಿಂದ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಕೈ ಜೋಡಿಸುತ್ತಿರುವ ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷ ಸಂಘಟನೆಯ ಮೂಲಕ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

