ಶಿವಮೊಗ್ಗ

ಪರಿಸರ ನಾಶದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಅಗತ್ಯ

Published On :

ಕ.ಪ್ರ.ವಾರ್ತೆ  ಹೊಸನಗರ  ಜು.24 ಸುತ್ತಮುತ್ತಲಿನ ವಾತಾವರಣ ಸಮೃದ್ಧಿಯಾಗಿದ್ದರೆ ಮಾತ್ರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಪರಿಸರ ನಾಶದ ಬಗ್ಗೆ ಎಚ್ಚರ ವಹಿಸುವುದು ಅತೀ ಅಗತ್ಯ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ತಾಲೂಕಿನ ನಿಟ್ಟೂರು ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಧುನಿಕತೆಯ ಮೋಹ, ಅವೈಜ್ಞಾನಿಕವಾಗಿ ಮೈದಳೆದ ಕೈಗಾರಿಕೆಗಳು, ಕಾಡು ಕಡಿತಲೆ ಸೇರಿದಂತೆ ಒಂದಲ್ಲಾ ಒಂದು ರೀತಿ ಪರಿಸರ ನಾಶವಾಗುತ್ತಿರುವುದು ಅಪಾಯಕ್ಕೆ ರತ್ನಗಂಬಳಿ ಹಾಸಿದಂತಾಗಿದೆ ಎಂದು ವಿಷಾದಿಸಿದರು.
ಎಚ್ಚರಿಕೆ: ಉತ್ತರಾಖಂಡದಲ್ಲಿ ಉಂಟಾದ ಪ್ರಕೃತಿ ವಿಕೋಪ ಇದರ ಒಂದು ಭಾಗವಾಗಿದೆ. ಮಾತ್ರವಲ್ಲದೆ ಈ ಮೂಲಕ ಪೃಕೃತಿಯಿಂದ ಇಡೀ ಜಗತ್ತಿಗೆ ಎಚ್ಚರಿಕೆ ಬಂದಂತಾಗಿದೆ. ಸಮತೋಲದ ಮಳೆ ಸುರಿಯದಿದ್ದಲ್ಲಿ ಭೂಮಿ ತನ್ನ ಸಮತೋಲನ ಕಳೆದುಕೊಳ್ಳಲಿದೆ. ಇದರಿಂದಾಗಿ ಭೂಮಿಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಪರಿಸರ ಮೇಲಾಗುತ್ತಿರುವ ದೌರ್ಜನ್ಯ ಇದಕ್ಕೆ ಕಾರಣವಾಗುತ್ತಿದ್ದು, ಈ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಮಾತ್ರವಲ್ಲ ಶ್ರೀಸಾಮಾನ್ಯ ಕೂಡ ಜಾಗೃತರಾಗಬೇಕು. ಮಕ್ಕಳಿಗೆ ವಿದ್ಯಾರ್ಥಿ ದಿಸೆಯಲ್ಲೆ ಪರಿಸರದ ಮಹತ್ವದ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
 ಪ್ರಕೃತಿ ನಮಗೆಲ್ಲವನ್ನು ಕೊಡುತ್ತದೆ ಅದರೆ, ಪ್ರಕೃತಿಗೆ ನಾವು ಏನನ್ನು ಕೊಡುಗೆ ನೀಡಲು ಸಾಧ್ಯವಿಲ್ಲ. ಆದರು ದುರಾಸೆಗೆ ಬಲಿಯಾಗಿ ಅಗತ್ಯಕ್ಕಿಂತ ಹೆಚ್ಚಾದದ್ದನ್ನು ಪೃಕೃತಿಯಿಂದ ಪಡೆಯಲು ಮುಂದಾಗಿ ಹಾಳು ಮಾಡುತ್ತಿದ್ದೇವೆ. ಪರಿಸರದ ಸಂರಕ್ಷಣೆ ತುರ್ತು ಅಗತ್ಯವಾಗಿದ್ದು ಈಗಲು ಎಚ್ಚರಗೊಳ್ಳದಿದ್ದಲ್ಲಿ ನಮ್ಮ ಬದುಕನ್ನು ನಾವೆ ಕಳೆದುಕೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.
 ಶಿಕ್ಷಕಿ ಉಷಾ, ದೀಪಾ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.