ಕೀರ್ತನೆಗಿದೆ ಆಧ್ಯಾತ್ಮಿಕ ಶಕ್ತಿ
ಶಿವಮೊಗ್ಗ: ಹರಿಕಥಾ ಕೀರ್ತನಾ ಕಲೆಯ ಮೂಲಕ ಕಲಾವಿದರು ತಾವು ಅಧ್ಯಾತ್ಮ ವಿಚಾರ ಪ್ರಸ್ತುತಪಡಿಸುವುದರೊಂದಿಗೆ ಜನರೂ ಆಧ್ಯಾತ್ಮ ಭಾವನೆಯಲ್ಲಿ ಲೀನವಾಗುವಂತೆ ಮಾಡುವ ಅದ್ಭುತವಾದ ಶಕ್ತಿ ಹೊಂದಿರುತ್ತಾರೆ ಎಂದು ಮಾಧವ ನೆಲೆ ಸಂಯೋಜಕ ಎ.ಮೈಲಾರಿ ತಿಳಿಸಿದರು.
ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಬಾಲ ಪ್ರತಿಭೆ ಕೀರ್ತನ ಕಿಶೋರಿ ಎಸ್. ತುಷಾರ ಗೌರಿ ಯವರ 51ನೇ ಕೀರ್ತನ ಕಾರ್ಯಕ್ರಮ ಹಾಗೂ ಗುರುವಂದನೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉತ್ತಮ ಸಾಧನೆ: ಹರಿಕಥೆ ಕ್ಷೇತ್ರ ಆಯ್ದುಕೊಂಡು, ಇತರೆ ಕುಟುಂಬಗಳಿಗೆ ಮಾದರಿಯಾಗಿರುವ ತುಷಾರ ಗೌರಿ, ಎಳೆ ವಯಸ್ಸಿನಲ್ಲಿಯೇ ಉತ್ತಮ ಸಾಧನೆ ತೋರಿದ್ದಾಳೆ ಎಂದು ಶ್ಲಾಘಿಸಿದ ಅವರು, ಬಾಲ ಪ್ರತಿಭೆಗೆ ಅತ್ಯುನ್ನತ ಕೀರ್ತಿ ಹಾಗೂ ಸ್ಥಾನಮಾನ ದೊರೆಯಲಿ ಎಂದು ಹಾರೈಸಿದರು.
ವಿದ್ವಾನ್ ಜಿ. ಆರ್. ಕೇಶವಮೂರ್ತಿಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಎಸ್. ತುಷಾರ ಗೌರಿಯವರಿಗೆ ಪ್ರಸನ್ನ ಗಣಪತಿ ದೇವಸ್ಥಾನದ ಅರ್ಚಕ ವೃಂದದ ವತಿಯಿಂದ ಕೀರ್ತನಾ ಚತುರೆ ಬಿರುದು ನೀಡಿ ಗೌರವಿಸಲಾಯಿತು. ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ಅಭಿನಂದಿಸಿದರು.
ಎಸ್.ನಾರಾಯಣ ಭಟ್, ನಗರಸಭಾ ಸದಸ್ಯ ಸಿ.ಎಚ್. ಮಾಲತೇಶ್, ಅರ್ಚಕ ಅ.ಪ. ರಾಮಭಟ್ಟ, ಪತ್ರಕರ್ತ ಕೃಷ್ಣ ಬನಾರಿ, ಪಾರ್ವತಿ ಭಟ್ ಮೊದಲಾದವರು ಉಪಸ್ಥಿತರಿದ್ದರು. ನಂತರ ತುಷಾರ ಗೌರಿಯವರಿಂದ ಜಿ.ಆರ್. ಕೇಶವಮೂರ್ತಿ ಹಾಗೂ ಕುರುವ ರುದ್ರೇಶ್ ಸಹಕಾರದೊಂದಿಗೆ ಹನುಮದ್ವಿಲಾಸ ಕೀರ್ತನ ಕಾರ್ಯಕ್ರಮ ನಡೆಯಿತು.
ನಾಳೆ ಪತ್ರಿಕಾ ದಿನಾಚರಣೆ
ಸಾಗರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಜು. 27ರ ಶನಿವಾರ ಬೆಳಗ್ಗೆ 10-30 ಕ್ಕೆ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿದೆ. ಪಟ್ಟಣದ ಅಣಲೆಕೊಪ್ಪದಲ್ಲಿರುವ ಪತ್ರಿಕಾ ಭವನದಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ಪತ್ರಕರ್ತ ರವೀಂದ್ರ ಭಟ್ ಐನಕೈ ಮಾಧ್ಯಮದ ಕ್ರಿಯಾಶೀಲತೆ ಅತಿಯಾಗಿದೆಯೇ ವಿಷಯ ಕುರಿತು ಮಾತನಾಡಲಿದ್ದಾರೆ. ಪತ್ರಕರ್ಥ ರಾಘವೇಂದ್ರರನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಸಂಘದ ಕಾರ್ಯದರ್ಶಿ ರವಿ ನಾಯ್ಡು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

