ಡಿ.ಸಿ. ಕ್ಲಾಸ್ನ 39ನೇ ವಾರ್ಷಿಕೋತ್ಸವ
ಕ.ಪ್ರ.ವಾರ್ತೆ, ಭದ್ರಾವತಿ, ಜು.29
ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿಯೇ ನಡೆಯುವ ಡಿ.ಸಿ. ಕ್ಲಾಸ್ನ (ಚರ್ಚಾ ತರಗತಿಗಳು) 39ನೇ ವಾರ್ಷಿಕೋತ್ಸವ ಪಟ್ಟಣದ ಬಸವೇಶ್ವರ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಡಿ.ಸಿ. ಕ್ಲಾಸ್ನ ಕಿರಿಯ ವಿದ್ಯಾರ್ಥಿಗಳು ತರಗತಿಯ ಮಾರ್ಗದರ್ಶಿ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಶಿವಮೊಗ್ಗದ ಜೆ.ಎನ್.ಎನ್.ಸಿ.ಇ ಕಾಲೇಜಿನ ಪೂಜಾ ಬಾಡ, ಮೈಸೂರಿನ ಎನ್.ಐ.ಇ.ಯ ಜಯಲಕ್ಷ್ಮಿ, ಬೆಂಗಳೂರಿನ ಬಿ.ಎಂ.ಸಿ.ಯ ಗೌತಮ್, ಶಿವಮೊಗ್ಗದ ಜೆ.ಎನ್.ಎನ್.ಸಿ.ಇ. ಯ ಭಾರ್ಗವಿ ಮತ್ತು ಅಮೆರಿಕದ ಸಂಯುಕ್ತ ರಾಷ್ಟ್ರಗಳ ಎಂಬ್ರಿ ರಿಡ್ಲ್ ಏರೋನಾಟಿಕಲ್ ವಿವಿಯ ಅನೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಾಲನಾ ಪರವಾನಗಿ: ಬೆಂಗಳೂರಿನ ಪೆಸಿಟ್ನ ಮನೀಶ್ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತೀಕ್ ವಿಜಯ್ ಡ್ರೈವಿಂಗ್ ಶಾಲೆಯವರು ನೀಡಿದ ನಾಲ್ಕು ಚಕ್ರದ ವಾಹನದ ವಾಹನ ಚಾಲನಾ ಪರವಾನಗಿ ಪಡೆದರು.
ಡಿ.ಸಿ. ಕ್ಲಾಸ್ನ ರೂವಾರಿ ಜಿ. ಗೋಪಾಲಕೃಷ್ಣಮೂರ್ತಿ 39 ವರ್ಷದಿಂದ ಯಶಸ್ವಿಯಾಗಿ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಶೈಕ್ಷಣಿಕ ಗುರಿ ಸಾಧಿಸುವಲ್ಲಿ ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಪೋಷಕರು ಹೇರಬಾರದೆಂದು ಅವರು ಪೋಷಕರಿಗೆ ಕಿವಿಮಾತು ಹೇಳಿದರು.
ಸ್ಪರ್ಧಾತ್ಪಕ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದ ಹೇಗೆಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶನ ನೀಡಿದರು. ಡಿ.ಸಿ.ಕ್ಲಾಸ್ನ ಹಳೆಯ ವಿದ್ಯಾರ್ಥಿಗಳಾದ ಕೌಸಲ್ಯ, ದೀಪಿಕಾ, ಡಾ.ದೀಪಕ್ ಮತ್ತು ಸುಮಾ ಮಾತನಾಡಿದರು. ಪೂರ್ಣಪ್ರಜ್ಞಾ ಶಾಲೆಯ ಮಕ್ಕಳು ದ್ವಿತೀಯ ಸ್ಥಾನ ಪಡೆದರು. ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರು, ಪ್ರಾಂಶುಪಾಲರುಗಳು, ಬ್ಯಾಂಕ್ ಮತ್ತು ವಿಮಾ ಕಂಪನಿ ಅಧಿಕಾರಿಗಳು, ವಕೀಲರು, ವೈದ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

