ದೂರವಾಣಿ ಕಚೇರಿ ತಲುಪಲು ಗ್ರಾಹಕರ ಪರದಾಟ
ಹೊಸನಗರ: ಪಟ್ಟಣದಲ್ಲಿರುವ ದೂರವಾಣಿ ಬಿಲ್ ಪಾವತಿ ವಿಭಾಗಕ್ಕೆ ತಲುಪಲು ಗ್ರಾಹಕರು ಪರದಾಡುವ ಸ್ಥಿತಿ ಎಂಬಂತಾಗಿದೆ. ಕಚೇರಿ ಮುಂಭಾಗದಲ್ಲಿ ಕೆಸರುಗದ್ದೆಯಂತಾಗಿದ್ದು ಕೇಳುವವರು ಇಲ್ಲದಂತಾಗಿದೆ.
ಪಟ್ಟಣದ ಗಣಪತಿ ರಸ್ತೆಯ ಅಂಚೆ ಕಚೇರಿ ಹಿಂಭಾಗದಲ್ಲಿ ಬಿಎಸ್ಎನ್ಎಲ್ ಕಚೇರಿ ಇದೆ. ಮುಖ್ಯ ಕಚೇರಿಗೆ ಹೋಗಲು ಯಾವುದೆ ಅಡ್ಡಿ ಇಲ್ಲ. ಆದರೆ ಬಿಲ್ ಪಾವತಿ, ಮತ್ತು ಸಿಮ್ ಖರೀದಿಸಲು ಪ್ರತ್ಯೇಕ ವಿಭಾಗ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಅಂಚೆ ಕಚೇರಿಯ ಇನ್ನೊಂದು ಭಾಗದಿಂದ ಸುತ್ತಾಕಿ ಹೋಗಬೇಕು. ಆದರೆ ಹೋಗುವ ದಾರಿಯಲ್ಲಿ ನೀರು ನಿಂತು ಕೆಸರಾಗಿದ್ದು ನಡೆದು ಹೋಗಲು ಸಾಧ್ಯವಾಗದೆ ಗ್ರಾಹಕರಿಗೆ ಕಿರಿಕಿರಿಯುಂಟಾಗಿದೆ. ಮಾತ್ರವಲ್ಲ ಅಕ್ಕಪಕ್ಕದಲ್ಲೆ ಗಿಡಗಂಟಿಗಳೆ ತುಂಬಿ ಹೋಗಿದ್ದು ಇಲ್ಲಿಯ ಸ್ವಚ್ಛತೆ ಸಂಪೂರ್ಣ ಹಾಳಾಗಿದೆ.
ಈ ಬಗ್ಗೆ ಬಿಲ್ ಕಟ್ಟಲು ಬರುವ ಗ್ರಾಹಕರು ಬಿಲ್ ಪಾವತಿಸುವುದರ ಜೊತೆಗೆ ಹಾದಿ ಸರಿಪಡಿಸಿ ಎಂದು ಗೋಗೆರೆಯುತ್ತಲೆ ಇದ್ದರೂ ಈ ವರೆಗೆ ಪ್ರಯೋಜನವಾಗಿಲ್ಲ ಎಂದು ಗ್ರಾಹಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪಪಂಗೆ ಮನವಿ: ಈ ಬಗ್ಗೆ ಬಿಎಸ್ಎನ್ಎಲ್ನ ಎಸ್ಡಿಇ ಎಂ.ಜಿ. ಪಾಟೀಲ್ರನ್ನು ವಿಚಾರಿಸಿದಾಗ ದಾರಿಯ ಅವ್ಯವಸ್ಥೆ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯ್ತಿಗೆ ದೂರು ನೀಡಿ ಸರಿಪಡಿಸುವಂತೆ ಮನವಿ ಮಾಡಲಾಗಿದ್ದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸುಗಮವಾಗಿ ಬಿಲ್ ಪಾವತಿಸಲು ಅನುಕೂಲವಾಗುವಂತೆ ಕೂಡಲೆ ಹಾದಿಯನ್ನು ಸರಿಪಡಿಸುವಂತೆ ಗ್ರಾಹಕರು ಆಗ್ರಹಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

