ನಾಳೆ ಉಪನ್ಯಾಸ
ಶಿವಮೊಗ್ಗ: ಶಿವಮೊಗ್ಗ ಸ್ಟೂಡೆಂಟ್ಸ್ ಸೈನ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆ.1ರಂದು ಶಾಂತಿನಗರದ ಸೇಂಟ್ ಆಂಥೋಣಿ ಶಾಲೆಯಲ್ಲಿ ಡೆಂಘೀ ಜ್ವರ ನಿಯಂತ್ರಣ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಶಿವಣ್ಣ ರೆಡ್ಡಿ, ವಾತ್ಸಲ್ಯ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ, ನಗರಸಭೆ ಸದಸ್ಯ ಬಳ್ಳೇಕೆರೆ ಸಂತೋಷ್, ರೆವರೆಂಟ್ ಫಾದರ್ ಪೌಲ್ ಡಿಸೋಜ ಪಾಲ್ಗೊಳ್ಳುವರು ಎಂದು ಬಳ್ಳೇಕೆರೆ ಸಂತೋಷ್ ತಿಳಿಸಿದ್ದಾರೆ.
ಸೆಮಿಸ್ಟರ್ ಪ್ರವೇಶ
ಅವಧಿ ವಿಸ್ತರಣೆ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸಾಮಾನ್ಯ ಸ್ನಾತಕ ಪದವಿ ಕೋರ್ಸ್ಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್ಗೆ ಪ್ರವೇಶ ಅವಧಿಯ ವಿಸ್ತರಿಸಲಾಗಿದೆ. ಪ್ರವೇಶ ಪಡೆಯಲು ರು. 300 ದಂಡಶುಲ್ಕದೊಂದಿಗೆ ಪ್ರವೇಶ ಪಡೆಯಲು ಜು. 25ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಮನವಿಯ ಮೇರೆಗೆ ಸಂಲಗ್ನಗೊಂಡ ಕಾಲೇಜುಗಳ ಪ್ರಾಂಶುಪಾಲರು ಪ್ರವೇಶ ನೀಡಲು ಅನುಮತಿಗಾಗಿ ಕೋರಿರುವ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿಶೇಷ ತರಗತಿ ತೆಗೆದೊಕಂಡು ಹಾಜರಾತಿ ಕೊರತೆ ಸರಿದೂಗಿಸಿಕೊಳ್ಳುವ ಷರತ್ತಿಗೊಳಪಟ್ಟು ಆ.3ರವರೆಗೆ ಅವಧಿ ವಿಸ್ತರಿಸಲಾಗಿದೆ. ರೆಗ್ಯುಲರ್ ಪಿಯುಸಿ ಉತ್ತೀರ್ಣರಾಗಿದ್ದು, ತಡವಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ದಂಡಶುಲ್ಕ ರು. 500 ಹಾಗೂ ತೃತೀಯ ಮತ್ತು ಐದನೇ ಸೆಮಿಸ್ಟರ್ಗಳ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ದಂಡಶುಲ್ಕ ರು. 300 ರುಪಾಯಿ ನಿಗದಿಗೊಳಿಸಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕುಲಸಚಿವರು ತಿಳಿಸಿದ್ದಾರೆ.
ಲಲಿತಮ್ಮನವರಿಗೆ ಶ್ರೀಶ ವಿಠಲಾನುಗ್ರಹ ಪ್ರಶಸ್ತಿ ಪ್ರದಾನ
ಶಿವಮೊಗ್ಗ: ಹಾಸನದ ಶ್ರೀಶ ವಿಠಲ ಕೃಪಾಶ್ರಮ ಟ್ರಸ್ಟ್ ಸಂಸ್ಥೆ ಜು. 28ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಏರ್ಪಡಿಸಿದ್ದ ಕನಕ-ಪುರಂದರ ಹರಿದಾಸೋತ್ಸವ ಮತ್ತು ರಾಜ್ಯಮಟ್ಟದ ಕೀರ್ತನಕಾರರ ಸಮ್ಮೇಳನದಲ್ಲಿ ವಿದುಷಿ ಲಲಿತಮ್ಮನವರಿಗೆ ಹರಿಕಥೆ ಮತ್ತು ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಶ್ರೀ ಶ್ರೀಶವಿಠಲಾನುಗ್ರಹ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಲಿತಮ್ಮನವರು ಆಕಾಶವಾಣಿ ಪ್ರಥಮ ಶ್ರೇಣಿ ಕಲಾವಿದರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ಆಹ್ವಾನಿತ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

