ಶಿವಮೊಗ್ಗ

ಭದ್ರೆಯಲ್ಲಿ ಉಕ್ಕುತ್ತಿರುವ ಪ್ರವಾಹ

Published On :

ತಗ್ಗು ಪ್ರದೇಶದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ


ಕ.ಪ್ರ.ವಾರ್ತೆ ಟಿ ಭದ್ರಾವತಿ ಟಿ  ಜು.30
ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದರಿಂದ ಭದ್ರಾ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯುತ್ತಿದ್ದು, ಪಟ್ಟಣದಲ್ಲಿ ನದೀತೀರದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಸ್ ನಿಲ್ದಾಣದ ಬಳಿ ಇರುವ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಟ್ಟಕ್ಕೆ ನದಿ ನೀರು ಹರಿಯುತ್ತಿದ್ದು, ಈ ಸೇತುವೆ ಮೇಲೆ ವಾಹನ ಮತ್ತು ಜನಸಂಚಾರವನ್ನು ಭಾನುವಾರ ಸಂಜೆಯಿಂದ ರದ್ದುಪಡಿಸಲಾಗಿದೆ.
ನದಿಯ ಪ್ರವಾಹ ಕವಲುಗುಂದಿ, ಏಕೆಂಶಾ ಕಾಲೋನಿ, ಮೂಪಾ ಕಾಂಪೌಂಡ್ ಪ್ರದೇಶದಲ್ಲಿರುವ ಮನೆಗೆ ನುಗ್ಗಿ ಹಾನಿಯನ್ನುಂಟುಮಾಡಿದೆ. ಅಲ್ಲಿನ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ತಾಲೂಕು ಆಡಳಿತ ಮತ್ತು ನಗರಸಭೆ ಅಧಿಕಾರಿಗಳು ರವಾನಿಸಿದ್ದಾರೆ.
ಕವಲುಗುಂದಿ, ಅಪ್ಪರ್ ಹುತ್ತಾ, ಚಾಮೆಗೌಡ ಪ್ರದೇಶ, ಏಕೆಂಶಾ ಕಾಲೋನಿ ಮೊದಲಾದ ಪ್ರದೇಶಗಳಲ್ಲಿ ಗಂಜಿಕೇಂದ್ರಗಳನ್ನು ಸೋಮವಾರ ಸಂಜೆ ವೇಳೆಗೆ ಸ್ಥಾಪಿಸಲಾಗುವುದೆಂದು ಪೌರಾಯುಕ್ತರು ತಿಳಿಸಿದ್ದಾರೆ. ಪೌರಾಯುಕ್ತರು ಮತ್ತು ತಾಲೂಕು ಆಡಳಿತ ರಚಿಸಿರುವ ನಾಲ್ಕು ತಂಡಗಳು ಪ್ರವಾಸ ಸಂತ್ರಸ್ತರ ಮೇಲ್ವಿಚಾರಣೆಯನ್ನು ಗಮನಿಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.