ಶಿವಮೊಗ್ಗ

ಸೇತುವೆ ಕಾಮಗಾರಿ ಸದ್ಯದಲ್ಲೇ ಪ್ರಾರಂಭ

Published On :

ಶಿವಮೊಗ್ಗ: ತುಂಗಾ- ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಯು ಸದ್ಯದಲ್ಲೇ ಆರಂಭಿಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ನಿಗಮ ತಿಳಿಸಿದೆ ಎಂದು ಹೊಳಲೂರು ಗ್ರಾಪಂ ಸದಸ್ಯ ಕೆ.ಜಿ. ನಿಂಗಪ್ಪ ತಿಳಿಸಿದ್ದಾರೆ.
ಸ್ಥಳೀಯ ಹೊಳಲೂರು ಸನ್ಯಾಸಿ ಕೋಡೆ ಮಗ್ಗೆ ಮಧ್ಯೆ ತುಂಗಾ- ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಹಲವಾರು ಬಾರಿ ಕೇಂದ್ರ, ರಾಜ್ಯ ಸಚಿವರಿಗೆ, ಮುಖ್ಯಮಂತ್ರಿಗೆ ಹೊಳಲೂರು ಗ್ರಾಪಂನಿಂದ ನಿಯೋಗ ಹೋಗಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 34 ಕೋಟಿ ಅಂದಾಜಿಗೆ ಆಡಳಿತ್ಮಾಕವಾಗಿ 2011-12ನೇ ಸಾಲಿನಲ್ಲಿ ಒದಗಿಸಿರುವ ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಕ್ಕೆ ಸರ್ಕಾರ ಸೂಚಿಸಿದ್ದು, ಶಾರದ ಕಸ್ಟ್ರಕ್ಷನ್ ಅವರಿಗೆ ಕಾಮಗಾರಿ ಟೆಂಡರ್ ನೀಡಿದೆ. ಆಗಸ್ಟ್ನಲ್ಲಿ ಕಾಮಗಾರಿ ಪ್ರಾರಂಭಿಸಲಿದೆ ಎಂದು ತಿಳಿಸಿದ್ದಾರೆ.
ಮಾರ್ಗದರ್ಶನ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿ ಮತ್ತು ವರ್ಗಗಳ ಒಕ್ಕೂಟ ಆ.4ರಂದು ಬೆಳಗ್ಗೆ 10ಗಂಟೆಗೆ ಬಾಪೂಜಿ ನಗರದ ಟ್ಯಾಂಕ್ಮೊಹಲ್ಲಾದಲ್ಲಿರುವ ದೇವಾಂಗ ವಿದ್ಯಾರ್ಥಿನಿಲಯದಲ್ಲಿ ಐಪಿಬಿಎಸ್ ಪರೀಕ್ಷೆಯ ಪೂರ್ವಭಾವಿಯಾಗಿ ಉಚಿತ ಮಾರ್ಗದರ್ಶನ ಏರ್ಪಡಿಸಿದೆ. ಹಿಂದುಳಿದ ಜಾತಿ, ವರ್ಗಕ್ಕೆ ಸೇರಿದ ಆಸಕ್ತ ಪದವೀಧರರು ಪಾಲ್ಗೊಳ್ಳಬಹುದು ಎಂದು ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್ರಾವ್ ತಿಳಿಸಿದ್ದಾರೆ. ಮಾಹಿತಿಗೆ- 9449045995.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.