ಉಳಿಕೆ ಆಧಾರಿತ ಸಮಾಜ ರೂಪಿಸಿ: ವಿಫುಲ್ ಬನ್ಸಲ್
ಕ.ಪ್ರ. ವಾರ್ತೆ ಶಿವಮೊಗ್ಗ ಜೂ.6
ಇದೂವರೆಗೂ ಬಳಕೆ ಆಧಾರದ ಸಮಾಜದಲ್ಲಿ ನಾವಿದ್ದೆವು. ಇನ್ನು ಮುಂದೆ ಉಳಿಕೆ ಆಧಾರಿತ ಸಮಾಜವನ್ನು ರೂಪಿಸಬೇಕಾಗಿದೆ. ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದರು.
ನಗರದ ಜನಶಿಕ್ಷಣ ಸಂಸ್ಥೆಯು ಗುರುವಾರ ಆಯೋಜಿಸಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಸಸಿ ನೆಟ್ಟ ಅವರು ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಆಗಲಿ ಮಿತವಾಗಿ ಬಳಸಬೇಕು. ಅಗತ್ಯಕ್ಕಿಂತ ಹೆಚ್ಚು ಬಳಸಬಾರದು. ಆಹಾರ, ನೀರು ಎಲ್ಲದಕ್ಕೂ ಇದು ಅನ್ವಯವಾಗುತ್ತದೆ ಎಂದರು.
ಮುಂದಿನ ಪೀಳಿಗೆಗೂ ಇರಲಿ: ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ, ನಮಗಾಗಿ ಮೀಸಲಿರುವುದನ್ನು ಮಾತ್ರ ನಾವು ಬಳಸಬೇಕು. ಉಳಿದಿದ್ದನ್ನು ಮುಂದಿನ ಪೀಳಿಗೆಗೆ ಬಿಡಬೇಕು ಎಂದು ಹೇಳಿದರು.
ಪ್ರಕೃತಿಯೇ ಸೇಡು ತೀರಿಸಿಕೊಳ್ಳುತ್ತದೆ. ಪರಿಸರವನ್ನು ಹಾನಿ ಮಾಡಿದಷ್ಟೂ ಅದು ಮುನಿಯುತ್ತದೆ. ಈಗಾಗಲೇ ಆಗುತ್ತಿರುವ ಸುನಾಮಿ, ಭೂಕಂಪ ಇತ್ಯಾದಿ ಅವಘಡಗಳು ಅದನ್ನು ಸಾರಿ ಹೇಳುತ್ತಿವೆ ಎಂದು ತಿಳಿಸಿದರು.
ಪರಿಸರ ದಿನ ಗಿಡ ನೆಡವುದಕ್ಕಷ್ಟೇ ಸೀಮಿತವಾಗದೇ ಪ್ರತಿದಿನದ ಆಚರಣೆ ಆಗಬೇಕು. ಭಾಷಣಕ್ಕಷ್ಟೇ ಸೀಮಿತವಾಗಬಾರದು. ಸಾವಯವ ಕೃಷಿಗೆ ಒತ್ತು ನೀಡುವುದು ಸೂಕ್ತ. ಕಲಬೆರಕೆ ರಹಿತ ಆಹಾರ ಇದರಿಂದ ದೊರೆಯುತ್ತದೆ ಎಂದರು.
ಆಜ್ಞಾನ ಹೆಚ್ಚುತ್ತಿದೆ: ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ. ಅರುಣಾದೇವಿ, ಜಾಗೃತಿ ಎನ್ನುವುದು ವಿದ್ಯಾವಂತರಿಂದ ಸಾಮಾನ್ಯರತ್ತ ಹೋಗಬೇಕು.
ಆದರೆ ಈಗ ವಿದ್ಯಾವಂತರಲ್ಲಿಯೇ ಅಜ್ಞಾನ ಕಾಣುತ್ತಿದೆ. ಹೆಚ್ಚು ಪರಿಸರ ಹಾನಿ ಆಗುತ್ತಿರುವುದು ಇವರಿಂದಲೇ ಎಂದು ವಿಷಾದಿಸಿದ ಅವರು, ಪರಿಸರ ರಕ್ಷಣೆ ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಕರೆ ನೀಡಿದರು.
ಜನಶಿಕ್ಷಣ ಸಂಸ್ಥೆ ಸದಸ್ಯ ರಾಜು ಇದ್ದರು. ಇದೇ ಸಂದರ್ಭದಲ್ಲಿ ಮಾಹಿತಿ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಜೆಎಸ್ಎಸ್ ಸಹಕಾರ್ಯಕ್ರಮಾಧಿಕಾರಿ ಎಂ. ಸುಮನ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ಶ್ರೀಕಾಂತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

