ನಗರದಲ್ಲಿ ಫೆನ್ನೆಸ್ಟಾ ನೂತನ ಶಾಖೆ ಪ್ರಾರಂಭ
ಶಿವಮೊಗ್ಗ: ಅತ್ಯಾಧುನಿಕ ಕಿಟಕಿಗಳ ತಯಾರಿಕ ಕಂಪನಿ ಫೆನ್ನೆಸ್ಟಾ ಯುಪಿವಿಸಿ ವಿಂಡೋಸ್ ಸಂಸ್ಥೆ ತನ್ನ ರಿಟೇಲ್ ಜಾಲವನ್ನು ವಿಸ್ತರಿಸುತ್ತಿದ್ದು, ನಗರದಲ್ಲಿ ನೂತನ ಶಾಖೆಯನ್ನು ತೆರೆದಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂಪನಿಯ ಮುಖ್ಯಸ್ಥ ಸುಮಿತ್ ಕೌರ್, ಯುಪಿವಿಸಿ ವಿಂಡೋಸ್ ಸಂಸ್ಥೆ ನಗರದ ಕುವೆಂಪು ರಸ್ತೆಯಲ್ಲಿರುವ ವಾಸನ್ ಆ ಕೇರ್ ಕಟ್ಟಡದ ಕೆಳಗೆ ಎಸ್.ಎಸ್. ಅಸೋಸಿಯೇಟ್ಸ್ನೊಂದಿಗೆ ತನ್ನ ವ್ಯವಹಾರವನ್ನು ನಡೆಸಲಿದ್ದು, ಉತ್ತಮ ಸೇವೆಯನ್ನೂ ಗ್ರಾಹಕರಿಗೆ ಒದಗಿಸಲಿದೆ ಎಂದರು.
ವಿಶಿಷ್ಟ ವಿನ್ಯಾಸ: ಫೆನ್ನೆಸ್ಟಾ ಉತ್ಪನ್ನಗಳು ವ್ಯಾಪಕವಾದ ವಿನ್ಯಾಸದ ಜೊತೆಗೆ ಇಂಟಿರಿಯಲ್ ವಸ್ತುಗಳ ವಿನ್ಯಾಸಗಳನ್ನು ಹೊಂದಿದೆ. ತಾಂತ್ರಿಕ ನೆರವಿನ ಜೊತೆಯಲ್ಲಿ ಸುಂದರವಾದ ಮನ ಸೆಳೆಯುವಂತಹ ಡಿಸ್ಪ್ಲೆಗಳೊಂದಿಗೆ ವಿಭಿನ್ನ ಮಾದರಿಯ ಉತ್ಪನ್ನಗಳು ಲಭ್ಯವಿರುತ್ತದೆ. ಫೆನ್ನಾಸ್ಟಾದ ಎಲ್ಲಾ ಉತ್ಪನ್ನಗಳು ಗ್ರಾಹಕರ ವಿಶಿಷ್ಟ ಅಗತ್ಯಗಳಿಗೆ ಸರಿ ಹೊಂದುವಂತೆ ವಿನ್ಯಾಸಗೊಳಿಸಲಾಗುವುದು ಎಂದು ತಿಳಿಸಿದರು.
ಸಂಸ್ಥೆ ದೇಶಾದ್ಯಂತ ಸುಮಾರು 100ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಕಳೆದ ಐದು ವರ್ಷಗಳಲ್ಲಿ ಪರಾಂಪರಿಕ ಕಿಟಕಿಯ ವಿನ್ಯಾಸಗಳನ್ನು ಹೊಂದಿದೆ. ತೇಗ, ಮಹಾಗನಿ, ವಾಲ್ನಟ್, ಪ್ರಿಸ್ಟೈಲ್, ವೈಟ್ನೊಂದಿಗೆ ಲಭ್ಯವಿದೆ ಎಂದ ಅವರು, ಫೆನ್ನೆಸ್ಟಾ ಕಿಟಕಿಗಳು ಮಂಜೀರಾ, ಟ್ರೆಂಡ್ಸೆಟ್, ರಾಮ್ಕೀ, ಕಾನ್ಸೆಪ್ಟ್, ಆದಿತ್ಯಾ ಹೋಮ್ಸ್, ಅಶೋಕಾ, ಡಿಎಲ್ಎಫ್, ಬ್ರಿಗೇಡ್, ಓಮಾಕ್ಸೇ, ರಹೇಜಾ ಹಾಗೂ ಪ್ರೆಸ್ಟೀಜ್ ಹಲವಾರು ಪ್ರಮುಖ ಬ್ರಾಂಡ್ನೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ದಿನೇಶ್, ಫೆನೆಸ್ಟಾ ಸಂಸ್ಥೆಯ ಮಿರ್ಜಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

