ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳು
ಹೊಸನಗರ: ಗ್ರಾಮದ ಜನರ ನಡುವೆ ಪರಸ್ಪರ ಸಾಮರಸ್ಯ ಬೆಸೆಯುವ, ಧಾರ್ಮಿಕ ಮಹತ್ವ ತಿಳಿಸುವ ದೇಗುಲಗಳು ಆಯಾ ಭಾಗದ ಸಾಂಸ್ಕೃತಿಕ ಕೇಂದ್ರಗಳಂತಾಗಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರಂದರ ಪೂಜಾರಿ ಅಭಿಪ್ರಾಯಪಟ್ಟರು.
ತಾಲೂಕಿನ ನಗರ ಹೋಬಳಿ ಬ್ರಾಹ್ಮಡವಾಡ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಮತ್ತೂರು ವನದುರ್ಗಾ ಪರಮೇಶ್ವರಿ ದೇಗುಲದ ಜೀರ್ಣೋದ್ಧಾರಕ್ಕಾಗಿ ಶ್ರೀಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ನಿಂದ ಡಾ. ವೀರೇಂದ್ರ ಹೆಗ್ಗಡೆಯವರು ಕೊಡಮಾಡಿರುವ ರು. 2ಲಕ್ಷ ಚೆಕ್ ವಿತರಿಸಿ ಮಾತನಾಡಿದರು.
ಸುವ್ಯವಸ್ಥಿತ ದೇಗುಲ ಆ ಪ್ರದೇಶದ ಕ್ರಿಯಾಶೀಲತೆಯನ್ನು ಎತ್ತಿ ತೋರಿಸುತ್ತದೆ. ದೇಗುಲಗಳು ಸ್ವಚ್ಛ ಮತ್ತು ಸುಂದರವಾಗಿದ್ದಲ್ಲಿ ಗ್ರಾಮದ ವಾತಾವರಣ ಸುಂದರವಾಗಿರುತ್ತದೆ. ಎಲ್ಲಾ ದೇಗುಲಗಳು ತನ್ನದೆ ಧಾರ್ಮಿಕ ಮಹತ್ವವನ್ನು ಸಾರುತ್ತದೆ. ಇಂತಹ ದೇಗುಲಗಳನ್ನು ಹಾಳುಗೆಡವಬಾರದು. ಧಮಸ್ಥಳದ ಹೆಗ್ಗಡೆಯವರು ಇಂತರ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡುತ್ತಾ ಬಂದಿದ್ದಾರೆ ಎಂದರು.
ಮತ್ತೂರು ವನದುರ್ಗಾ ಪರಮೇಶ್ವರಿ ದೇಗುಲ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆಸರಮನೆ ರಾಮಚಂದ್ರರಾವ್, ಚಕ್ರಾನಗರದ ಸಮೃದ್ಧ ವನ್ಯಜೀವಿರಾಶಿಗಳ ಮದ್ಯೆ ಕಂಗೊಳಿಸುತ್ತಿರುವ ವನದುರ್ಗಾ ದೇವಸ್ಥಾನ ಸುಮಾರು 700ಕ್ಕು ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಹಿಂದಿನಿಂದಲು ಸುತ್ತಮುತ್ತಲಿನ ನಿವಾಸಿಗಳು ದೇವಿಯನ್ನು ಆರಾಧಿಸುತ್ತ ಬಂದಿದ್ದು ತದನಂತರ ಹಾಳು ಬಿದ್ದಿತ್ತು. ಮಹತ್ವದ ಇತಿಹಾಸ ಮತ್ತು ಧಾರ್ಮಿಕ ತಳಹದಿ ಹೊಂದಿರುವ ದೇವಿಯ ಸನ್ನಿಧಿಯನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಗ್ರಾಮದವರೆಲ್ಲರು ಒಟ್ಟಾಗಿ ಕೆಲಸ ಮಾಡಿದ್ದೇವೆ. ದೇಗುಲದ ಜೀರ್ಣೋದ್ಧಾರ ಮತ್ತು ಪ್ರಗತಿಗೆ ಒಟ್ಟು ರು. 40 ಲಕ್ಷ ವೆಚ್ಚ ಅಂದಾಜಿಸಲಾಗಿದ್ದು ಈಗಾಗಲೆ ರು. 20 ಲಕ್ಷ ಖರ್ಚು ಮಾಡಲಾಗಿದೆ.
ಈಗಾಗಲೆ ಮೊದಲ ಹಂತದಲ್ಲಿ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ನಿರ್ಮಾಣ ಮಾಡಲಾಗಿದ್ದು ಅಷ್ಟಬಂಧ ಕಾರ್ಯಕ್ರಮಗಳು ನೆರವೇರಿದೆ ಎಂದರು
ಜೀರ್ಣೋದ್ಧಾರಕ್ಕೆ ಸಹಕರಿಸುವಂತೆ ಧರ್ಮಸ್ಥಳ ಹೆಗ್ಗಡೆಯವರಲ್ಲಿ ದೇಗುಲದ ಇತಿಹಾಸದ ವಿವರ ನೀಡಿ ನಿವೇದನೆ ಮಾಡಲಾಗಿದ್ದು ಪೂರಕವಾಗಿ ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ದೇಗುಲದ ಕಾರ್ಯನಿರ್ವಾಹಕ ಟ್ರಸ್ಟಿ ಮೂರುನೀರಹಳ್ಳ ಜನಾರ್ಧನ್, ಯೋಜನೆ ಮೇಲ್ವಿಚಾರಕ ಅನಿಲಕುಮಾರ್, ಸೇವಾನಿರತೆ ಸವಿನಾ, ಒಕ್ಕೂಟದ ಅಧ್ಯಕ್ಷ ಮಂಜುನಾಥ, ಚಂದ್ರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

