'ದೌರ್ಜನ್ಯ ಖಂಡಿಸಿವ ಮನೋಭಾವ ಬೆಳೆಸಿಕೊಳ್ಳಿ'
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.12
ಶ್ರೀ ವಿದ್ಯಾಭಾರತಿ ಎಜುಕೇಷನ್ ಟ್ರಸ್ಟ್, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಸಮರಸ ಕೌಟುಂಬಿಕ ಸಲಹಾ ಕೇಂದ್ರದ ಆಶ್ರಯದಲ್ಲಿ ಮದ್ಯ ವ್ಯಸನ, ಕೌಟುಂಬಿಕ ಸಮಸ್ಯೆ ಮತ್ತು ಪರಿಸರ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಪಿಳ್ಳಂಗಿರಿಯ ಸಮುದಾಯ ಭವನದಲ್ಲಿ ಆಯೋಜಿಸಿತ್ತು.
ಈ ವೇಳೆ ಮಾತನಾಡಿದ ಗ್ರಾಹಕರ ನ್ಯಾಯಾಲಯದ ಸದಸ್ಯ ನ್ಯಾಯಾಧೀಶೆ ಇ. ಪ್ರೇಮಾ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತಿಳಿಸಿದರಲ್ಲದೇ, ಮಹಿಳೆಯರು ಮತ್ತು ಮಕ್ಕಳಿಗಿರುವ ಕಾನೂನುಗಳ ಕುರಿತು ಮಾಹಿತಿ ನೀಡಿದರು. ದಿನನಿತ್ಯದ ಜೀವನದಲ್ಲಿ ಮಹಿಳೆಯರಿಗೆ ಅವಶ್ಯಕವಿರುವ ಮಾಹಿತಿಗಳು ಮತ್ತು ಉಪಯುಕ್ತವಾದ ಕಾನೂನುಗಳನ್ನು ಪರಿಚಯಿಸಿದರು.
ಮಹಿಳಾ ಠಾಣೆ ಇನ್ಸ್ಪೆಕ್ಟರ್ ನಾಗಮ್ಮ ಮಾತನಾಡಿ, ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇದೆ. ದೌರ್ಜನ್ಯಕೊಳ್ಳಗಾದ ಮಹಿಳೆಯರು ನ್ಯಾಯಕ್ಕಾಗಿ ಠಾಣೆಯಲ್ಲಿ ದೂರು ದಾಖಲಿಸುವ ಧೈರ್ಯ ಮಾಡಬೇಕು. ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಚಿಕಿತ್ಸೆ ಬಗ್ಗೆ ಮಾಹಿತಿ: ಸುರಭಿ ಉಜ್ವಲ ಮದ್ಯಪಾನ ವ್ಯಸನ ಮುಕ್ತಿ ಕೇಂದ್ರದ ಪ್ರಾಂತೀಯ ಯೋಜನಾಧಿಕಾರಿ ವಿ.ವಿ. ಲತಾ ಮಾತನಾಡಿ, ಮಹಿಳೆಯರಿಗೆ ಮದ್ಯವ್ಯಸನಿಗಳಿಂದ ಆಗುತ್ತಿರುವ ತೊಂದರೆಯಿಂದ ಮಹಿಳೆ ಮಾನಸಿಕ, ದೈಹಿಕವಾಗಿ ಕುಗ್ಗಿದ್ದಾಳೆ. ಈ ಹಿನ್ನೆಲೆಯಲ್ಲಿ ಮದ್ಯವ್ಯಸನ ಮಾಡುವವರಿಗೆ ಕೇಂದ್ರದಲ್ಲಿ ದೊರೆಯಬಹುದಾದ ಪ್ರಯೋಜನಗಳು ಮತ್ತು ಚಿಕಿತ್ಸೆ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಳ್ಳಂಗಿರಿ ಗ್ರಾ.ಪಂ ಅಧ್ಯಕ್ಷೆ ಜಯಲಕ್ಷ್ಮೀ ವಹಿಸಿದ್ದರು. ಶ್ರೀ ವಿದ್ಯಾಭಾರತಿ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಭರದ್ವಾಜ್, ಸೋಮಶೇಖರ್, ಎಸ್ವಿಬಿಇಟಿ ಸದಸ್ಯ ಉಮೇಶ್, ಸಮರಸ ಕೌಟುಂಬಿಕ ಸಲಹಾ ಕೇಂದ್ರದ ಸಲಹೆಗಾರರಾದ ಮಾಲತಿ ಮತ್ತಿತರರು ಇದ್ದರು.
ನೂತನ ಪದಾಧಿಕಾರಿಗಳ ಆಯ್ಕೆ
ಭದ್ರಾವತಿ: ಪಟ್ಟಣದ ಜಂಬು ಮಹರ್ಷಿ ವಣ್ಣಿಯರ್ ಸಂಘಂ ಅಧ್ಯಕ್ಷರಾಗಿ ಎಂ. ಮೋಕ್ಷಾನಂದ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಎ. ವೆಂಕಟೇಶ್, ಉಪಾಧ್ಯಕ್ಷರಾಗಿ ವಿಜಯಕುಮಾರ್ ಹಾಗೂ ಯಲ್ಲಪ್ಪ, ಕಾರ್ಯದರ್ಶಿಯಾಗಿ ಶ್ರೀನಿವಾಸ್, ಸಹಕಾರ್ಯದರ್ಶಿಗಳಾಗಿ ಮಂಜುನಾಥ್ ಮತ್ತು ಭೀಮನ್ ಹಾಗೂ ಖಜಾಂಚಿಯಾಗಿ ನಾಗರಾಜ ಆಯ್ಕೆಯಾಗಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.
ಜಾತ್ರಾ ಮಹೋತ್ಸವ
ಶಿವಮೊಗ್ಗ: ಕರ್ನಾಟಕ ಸರ್ಕಾರದ ಹಿಂದೂ, ಧಾರ್ಮಿಕ ದತ್ತಿ ಇಲಾಖೆಯು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸೂರು ಕ್ಷೇತ್ರದ ಶ್ರೀ ಹೊಸೂರಮ್ಮ ದೇವಿ ಜಾತ್ರಾ ಮಹೋತ್ಸವವು ಜೂನ್ 9ರಿಂದ 18ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹೊಸಪೇಟೆ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

