ಶಿವಮೊಗ್ಗ

ಹಳೆಸೊರಬ ವ್ಯವಸಾಯ ಸೇವಾ ಸಹಕರ ಸಂಘ ಲಾಭದಲ್ಲಿ

Published On :

ಸೊರಬ: ಕೃಷಿಕರ ಸೇವೆಗೆ ಆದ್ಯತೆ ನೀಡಿ, ಅವರ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವಲ್ಲಿ ಯಶಸ್ವಿಯಾಗಿರುವ ಹಳೆಸೊರಬ ವ್ಯವಸಾಯ ಸೇವಾ ಸಹಕರ ಸಂಘವೀಗ ಸತತ ಮೂರು ವರ್ಷಗಳಿಂದ ಲಾಭದಲ್ಲಿದೆ ಎಂದು ಸಂಘದ ಅಧ್ಯಕ್ಷ ಟಿ. ಬಂಗಾರಸ್ವಾಮಿ ತಿಳಿಸಿದರು.
ಸಂಘದ ಕಾರ್ಯಕಾರಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಚಾಲ್ತಿ ಸಾಲಿನಲ್ಲಿ 14.52 ಕೋಟಿ ವ್ಯವಹಾರ ನಡೆಸಿದ್ದು, ನಿವ್ವಳ 3.06 ಲಕ್ಷ ಲಾಭದಲ್ಲಿದೆ. ರೈತರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಗೊಬ್ಬರವನ್ನು ಖರೀದಿಸಲಾಗಿದೆ. ಈ ವರ್ಷ ಅಗತ್ಯ ಸಮಯದಲ್ಲಿ ಗೊಬ್ಬರ ಪೂರೈಕೆ ಮಾಡಿದ್ದು, ಒಟ್ಟು 29 ಲೋಡ್ ವಿತರಿಸಲಾಗಿದೆ. ಒಟ್ಟು 108 ಸ್ವಸಹಾಯ ಸಂಘಗಳಿಗೆ 96.50 ಲಕ್ಷ ಸಾಲ ನೀಡಲಾಗಿದೆ ಎಂದರು.
ಸಹಕಾರ ಸಂಘದ ಪ್ರಗತಿಗೆ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಇಲ್ಲಿನ ನಿರ್ದೇಶಕ ನಿಸರಾಣಿ ಶ್ರೀಪಾದರಾವ್ ಮತ್ತು ಸಿಬ್ಬಂದಿಯ ಸಂಪೂರ್ಣ ಸಹಕಾರ ಕಾರಣ ಎಂದು ಶ್ಲಾಘಿಸಿದರು.
 ಕಳೆದ ಸಾಲಿನ ಸಾಲ ಮನ್ನ ಘೋಷಣೆ ಆದ ಬಳಿಕ ಚುನಾವಣೆ ವೇಳೆಯವರೆಗಿನ ಬಾಬತ್ತು ಹಣ ಬಿಡುಗಡೆ ಆಗಿದ್ದು, ನಂತರದ ಬಾಬ್ತು ಬಂದಿಲ್ಲ, ಈ ಹಣ ಬಂದರೆ ರೈತರಿಗೆ ಅಗತ್ಯ ಸಂದರ್ಭದಲ್ಲಿ ಬೆಳೆಸಾಲ ನೀಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನೊಂದಿಗೆ ಉಳಿದ ಹಣ ಬಿಡುಗಡೆ ಕುರಿತು ಚರ್ಚಿಸಲಾಗಿದೆ.
ನಿರ್ದೇಸಕರಾದ ಕೆ. ನಿಂಗಪ್ಪ, ಯೂಸೂಫ್ ಸಾಬ್, ಶಾಂತಮ್ಮ, ಧರಣೆಪ್ಪ, ಬಿ. ವೀರಪ್ಪ, ಮೇಲ್ವಿಚಾರಕ ಮೃತ್ಯುಂಜಯ, ಕಾರ್ಯದರ್ಶಿ ಸುನೀಲ್ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.