ಶಿವಮೊಗ್ಗ

ದೇವಾಲಯಗಳ ರಕ್ಷಣೆ ಬಿಎಸ್‌ವೈ ಕನಸು

Published On :

ಶಿರಾಳಕೊಪ್ಪ: ಐತಿಹಾಸಿಕ ದೇವಾಲಯ ರಕ್ಷಣೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಕಾರದಿಂದ ಮೂರುವರೆ ಕೋಟಿ ರು. ವೆಚ್ಚದಲ್ಲಿ ದೇವಸ್ಥಾನಗಳ ಜೀಣೋದ್ಧಾರ ಕೈಗೊಳ್ಳಲಾಯಿತು. ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸಮೀಪದ ಐತಿಹಾಸಿಕ ಸ್ಥಳದಲ್ಲಿ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಪಾಂಡವರ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪಂಚಲಿಂಗಳಲ್ಲಿ ಒಂದಾದ  ನೀಲಖಂಠೇಶ್ವರ, ಪಂಚಲೀಂಗೇಶ್ವರ, ಆದಿಶೇಷ ಹಾಗೂ ಕಲ್ಲಪ್ಪದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ತಾಲೂಕಿನಲ್ಲಿ ಮತ್ತು ರಾಜ್ಯದಲ್ಲಿ ಹಲವಾರು ದೇವಸ್ಥಾನಗಳ ನಿರ್ಮಾಣ ಹಾಗೂ ಜಿರ್ಣೋದ್ಧಾರಗಳನ್ನು ಯಡಿಯೂರಪ್ಪನವರು ಮುಖ್ಯ ಮಂತ್ರಿ ಆದಾಗ ಕೈಗೊಳ್ಳ ಲಾಯಿತು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೋಣಂದೂರು ಬ್ರಹನ್ಮಠದ ಶಿವಲಿಂಗೇಶ್ವರ ಸ್ವಾಮಿ ಮಾತನಾಡಿ, ಭಕ್ತರ ಬಾಳು ಹಸನವಾಗಬೇಕು ಎಂಬುದು ಧರ್ಮದ ಉದ್ದೇಶ, ಧರ್ಮಕಾರ್ಯಗಳನ್ನು ನಾವು ಕೈಗೊಂಡಾಗ ಬಕ್ತರಿಗೆ ಒಳ್ಳೆಯದಾಗುತ್ತದೆ ಎಂದರು. ಬಳ್ಳಿಗಾವಿಯಂತಹ ಐತಿಹಾಸಿಕ ಕ್ಷೇತ್ರದಲ್ಲಿ ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಕಾರ್ಯವನ್ನು ಈ ಭಾಗದ ಭಕ್ತರು ಮುಂದುವರೆಸಿಕೊಂಡು ಹೋಗಬೇಕು ಎಂದರು. ಕಣಸೋಗಿ ಹೊಂಡದ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಣ್ಣ ಹನುಮಂತಪ್ಪ, ಮಲ್ಲಣ್ಣ, ಶಿವಾನಂದಸ್ವಾಮಿ,ನಾಗರಾಜ್, ಚಂದ್ರಶೇಖರ, ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.