ಸಾಮಾಜಿಕ ಸ್ವಾಸ್ಥ್ಯಕ್ಕೆ ಸೌಹಾರ್ದತೆ ಮುಖ್ಯ
ಭದ್ರಾವತಿ: ಮಾನವ ಸಂಘಜೀವಿ. ಹುಟ್ಟಿನಿಂದ ಎಲ್ಲರೂ ಬೇರೆಬೇರೆ ಜಾತಿ-ಮತಗಳಿಂದ ಬಂದಿದ್ದರೂ ಸಾಮಾಜಿಕವಾಗಿ ಒಂದು ಕುಟುಂಬದ ಸದಸ್ಯರಿದ್ದಂತೆ ಎಂದು ಡಾ. ಸುಧೀಂದ್ರ ಹೇಳಿದರು.
ಪಟ್ಟಣದ ಬಸವೇಶ್ವರ ಸಭಾ ಭವನದಲ್ಲಿ ನಡೆದ ಸಿದ್ಧಾರೂಢ ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿ, ಸಾಮಾಜಿಕ ಸ್ವಾಸ್ಥ್ಯ ಚೆನ್ನಾಗಿರಲು ಸೌಹಾರ್ದತೆಯಿಂದ ಕೂಡಿದ ಜೀವನ ಅತಿಮುಖ್ಯವೆಂದರು.
ಪ್ರಾಮಾಣಿಕ ಯತ್ನ: ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ಜೆ. ಅಪ್ಪಾಜಿ, ನಗರಸಭೆಯಲ್ಲಿ ಕೆಲಸ ಮಾಡಿಸಿಕೊಳ್ಳಲು ಮಧ್ಯವರ್ತಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳು ತಮ್ಮ ಗಮನಕ್ಕೆ ಬಂದಿದ್ದು ಅದನ್ನು ಸಂಪೂರ್ಣವಾಗಿ ನಿವಾರಿಸಲು ತಾವು ಪ್ರಾಮಾಣಿಕವಾಗಿ ಯತ್ನಿಸುವುದಾಗಿ ತಿಳಿಸಿದರು.
ಹೆಚ್ಚಿನ ತೆರಿಗೆ, ಕಡಿಮೆ ಸೌಲಭ್ಯ: ತಮ್ಮ ಹೆಸರನ್ನು ಹೇಳಿಕೊಂಡು ಸಾರ್ವಜನಿಕರನ್ನು ಶೋಷಿಸುವವರ ಬಗ್ಗೆ ಎಚ್ಚರಿಕೆಯಿಂದಿರಲು ತಿಳಿಸಿದ ಶಾಸಕರು ತಮಗೆ ಇದರ ಬಗ್ಗೆ ಅರಿವು ಇದ್ದು ಇಂತಹವರಿಂದ ರಾಜಕಾರಣದಲ್ಲಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆಯೂ ಅವರು ವಿವರಣೆ ನೀಡಿದರು. ಸಂಘದ ಅಧ್ಯಕ್ಷ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿದ್ದಾರೂಢ ನಗರ ನಗರಸಭೆಗೆ ಹೆಚ್ಚಿನ ತೆರಿಗೆ ನೀಡುವ ಬಡಾವಣೆಯಾಗಿದ್ದರೂ ಇಲ್ಲಿಗೆ ನಗರಸಭೆ ಒದಗಿಸಿರುವ ಸೌಲಭ್ಯಗಳು ಕಡಮೆ ಎಂದು ವಿಷಾದಿಸಿದರು. ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಉದ್ಯಾನವನಕ್ಕಾಗಿ ಮೀಸಲಾಗಿರುವ ಸ್ಥಳವನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸಬಾರದೆಂದು ಒತ್ತಾಯಿಸಿದರು. ಬಡಾವಣೆಯ ಅಧಿಕಾರಿಗಳ ಸಂಘದ ಆವರಣ ಸರಿಯಾಗಿ ಬಳಕೆಯಾಗದಿರುವುದರಿಂದ ಅಲ್ಲಿ ಒಂದು ವ್ಯಾಯಾಮಶಾಲೆಯನ್ನು ಸ್ಥಾಪಿಸಬೇಕೆಂದು ಅವರು ಅಪ್ಪಾಜಿಯವರನ್ನು ಒತ್ತಾಯಿಸಿದರು.ಶಿವರಾಜ್ ಮತ್ತು ಯಶೋದ ವೀರಭದ್ರಪ್ಪ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸುಧೀರ್, ಮುಕ್ತಾ ಪ್ರಸಾದ್, ಪುಷ್ಪಲತಾ ಚಂದ್ರಯ್ಯ, ಶಾರದಾ ಶ್ರೀನಿವಾಸ್, ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

