ಶಿವಮೊಗ್ಗ

ಎಲ್‌ಐಸಿ ಕಚೇರಿ ಪ್ರಾರಂಭ

Published On :

ಜೋಗ್‌ಫಾಲ್ಸ್: ದೇಶದ ಪ್ರತಿಯೊಬ್ಬ ಪ್ರಜೆಯ ಬದುಕಿನ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೀವ ವಿಮಾ ನಿಗಮ ಜನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಿವಮೊಗ್ಗ ವಿಭಾಗದ ವ್ಯವಸ್ಥಾಪಕ ಬಾಲಯೋಗಿ ತಿಳಿಸಿದರು.
ಕಾರ್ಗಲ್‌ನ ಎಲ್‌ಐಸಿ ಪ್ರೀಮಿಯಂ ಕೌಂಟರ್‌ನಲ್ಲಿ ನೂತನವಾಗಿ ಆರಂಭಗೊಂಡ ಎಲ್‌ಐಸಿ ಮಿನಿ ಕಚೇರಿ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ತೀರ್ಮಾನದಂತೆ ದೇಶಾದ್ಯಂತ 10 ಸಾವಿರ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಮಿನಿ ಜೀವ ವಿಮಾ ನಿಗಮದ ಕಚೇರಿಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಮಾರುಕಟ್ಟೆ ಪ್ರಬಂಧಕ ಜಕ್ಕಣ್ಣ ಮಾತನಾಡಿ, ಗ್ರಾಹಕರಿಗೆ ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ನೂತನ ವಿಮಾ ಕಚೇರಿಯಲ್ಲಿ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸೇಲ್ ವಿಭಾಗದ ವ್ಯವಸ್ಥಾಪಕ ರವಿ, ಬ್ರಾಂಚ್ ಮ್ಯಾನೇಜರ್ ಕೃಷ್ಣಮೂರ್ತಿ, ಸಹಾಯಕ ಮ್ಯಾನೇಜರ್ ಗೋಪಾಲಕೃಷ್ಣ ಹಾಜರಿದ್ದರು. ಬಬಿತಾ ಪ್ರೇಂಕುಮಾರ್ ಪ್ರಾರ್ಥಿಸಿ, ಟಿ. ಸುರೇಶ್ ಸ್ವಾಗತಿಸಿದರು. ಸತೀಶ್ ಮಹಾಲೆ ವಂದಿಸಿದರು.

ರಾಹುಲ್ ಗಾಂಧಿ ಜನ್ಮದಿನ
ಶಿವಮೊಗ್ಗ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜನ್ಮದಿನಾಚರಣೆಯ ಪ್ರಯುಕ್ತ ಜೂ.19ರಂದು ಬೆಳಿಗ್ಗೆ 11 ಗಂಟೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು- ಬ್ರೆಡ್ ಹಂಚುವ ಕಾರ್ಯಕ್ರಮ ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದೆ ಎಂದು ಅಧ್ಯಕ್ಷ ರಂಗನಾಥ್ ಹೇಳಿದ್ದಾರೆ.

ವಾರ್ಷಿಕೋತ್ಸವ
ಶಿವಮೊಗ್ಗ: ಶ್ರೀ ಗಂಗಾಜಯಂತಿ ಹಾಗೂ ಗಂಗಾಪರಮೇಶ್ವರಿ ಅಮ್ಮನವರ 10ನೇ ವಾರ್ಷಿಕೋತ್ಸವನ್ನು ದೇವಸ್ಥಾನ ಸಮಿತಿಯು ಜೂ.19ರಂದು ಹಮ್ಮಿಕೊಂಡಿದೆ. ಹಿಂದಿನ ದಿನ 18ರಂದು ಸಂಜೆ 7 ಗಂಟೆಗೆ ಹೋಮ ಹವನಗಳನ್ನು ಏರ್ಪಡಿಸಲಾಗಿದೆ. 19ರಂದು ಬೆಳಿಗ್ಗೆ 10.30ಕ್ಕೆ ಭೀಮೇಶ್ವರ ದೇವಸ್ಥಾನದ ಬುಡದಲ್ಲಿರುವ ತುಂಗಾನದಿಯಿಂದ ಸುಮಂಗಲಿಯರು ಗಂಗೆಯನ್ನು ಹೊತ್ತು ಮೆರವಣಿಗೆ ಮುಖಾಂತರ ದೇವಸ್ಥಾನದ ಆವರಣಕ್ಕೆ ತರಲಾಗುವುದು ನಂತರ 12.30ಕ್ಕೆ ಮಹಾಮಂಗಳಾರತಿ ನಡೆಯುವುದು ಎಂದು ಸಂಚಾಲಕ ಎಸ್.ಬಿ. ಅಶೋಕ್ ಕುಮಾರ್ ಹೇಳಿದ್ದಾರೆ.

ಅರ್ಜಿ ಆಹ್ವಾನ
ಶಿವಮೊಗ್ಗ: ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಶ್ರಯದಲ್ಲಿ ನಿರುದ್ಯೋಗಿ ಎಂಜಿನಿಯರ್ ವಿದ್ಯಾರ್ಥಿಗಳಿಂದ ಇಂಟರ್‌ಷಿಪ್‌ಗಾಗಿ ಅರ್ಜಿ ಆಹ್ವಾನಿಸಿದ್ದು, ಕಾಲೇಜು ಆವರಣದಲ್ಲಿ ಜೂನ್ 20ರಂದು ಬೆಳಿಗ್ಗೆ 9.30ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. 2012-13ನೇ ಬ್ಯಾಚ್‌ನ ಎಂಜಿನಿಯರಿಂಗ್, ಎಂಟೆಕ್, ಎಂಸಿಎ ಹಾಗೂ ಎಂಎಸ್ಸಿ, ಐಟಿ, ಪದವಿಧರರಿಗೆ ಆಯ್ಕೆ ಮಾಡಲಾಗುವುದು. ಆಸಕ್ತರು ಅರ್ಜಿ ಮತ್ತು ಇತರೆ ಮಾಹಿತಿಗಳನ್ನು ಢಿಢಿಢಿ.್ಠ್ಝ್ಝ್ಝಡಿ.್ಛ್ಟಟ  ನಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಆಯ್ಕೆ ಸಮಯದಲ್ಲಿ ಹಾಜರು ಪಡಿಸಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಚಂದ್ರ ಮೋಹನ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-640768.

ಲಾರಿ ಪಾರ್ಕಿಂಗ್‌ಗೆ ಪರಿಹಾರ
ಶಿವಮೊಗ್ಗ: ನಗರದ ವಿನಾಯಕ ಚಿತ್ರಮಂದಿರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಿಲ್ಲುತ್ತಿದ್ದ ಲಾರಿಗಳಿಗೆ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಸಂಬಂಧ ನಗರಸಭೆ ಹಿರಿಯ ಅಧಿಕಾರಿಗಳು, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ಮತ್ತು ಸೂಕ್ತ ಸ್ಥಳ ಪರಿಶೀಲಿಸಿ, ಕೆಎಸ್‌ಆರ್‌ಟಿಸಿ
ಬಸ್ ಡಿಪೋ ಎದುರಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ತಿಳಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಲಾರಿ ನಿಲ್ಲಿಸುತ್ತಿರುವುದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಈ ಸಂಬಂಧ ಸ್ಥಳ ನಿಗದಿ ಮಾಡಲಾಗಿದೆ. ಈ ವೇಳೆ ನಗರಸಭೆ ಪ್ರಭಾರ ಆಯುಕ್ತ ಗಣೇಶ್ ಮೊದಲಾದವರು ಇದ್ದರು.

ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ಮಲೆನಾಡು ಮುದ್ರಕರ ಸಂಘದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಮಾಧವಚಾರ್, ಉಪಾಧ್ಯಕ್ಷರಾಗಿ ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಎ. ಹರೀಶ್ ಕುಮಾರ್, ಎನ್.ಎಚ್. ಕೃಷ್ಣ, ಐ.ಜೆ. ರಾಜು, ಎನ್.ಎಸ್. ರಮೇಶ್, ಬಿ.ಆರ್. ಚಂದ್ರಶೇಖರ್, ಶ್ರೀನಿವಾಸ್, ಪಿ. ನಾಗಭೂಷಣ್, ಶಿವಣ್ಣ, ಅಚ್ಚುಕೂಟ ಸಂಪಾದಕರಾಗಿ ಬಿ.ಎಸ್. ಗಣೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ. ಮಾಧವರಾವ ತಿಳಿಸಿದ್ದಾರೆ.

ಶಾಸಕರಿಗೆ ಸನ್ಮಾನ
ಶಿವಮೊಗ್ಗ: ಸರ್ ಎಂ. ವಿಶ್ವೇಶ್ವರಯ್ಯ ಕೋ- ಆಪರೇಟಿವ್ ಸೊಸೈಟಿ ಜೂನ್ 20ರಂದು ಸಂಜೆ 6.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದೆ. ಇದೇ ವೇಳೆ ನಗರಸಭೆ ಸದಸ್ಯೆ ಸುರೇಖಾ ಮುರಳೀಧರ್ ಅವರಿಗೆ ಅಭಿನಂದಿಸಲಾಗುವುದು. ಸಂಘದ ಉಪಾಧ್ಯಕ್ಷ ಎಸ್. ಅನಂತಶಾಸ್ತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಷ್ಣುನಾಯ್ಕ್ ಆಯ್ಕೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಕಿಸಾನ್ ಮತ್ತು ಕೃಷಿ ಕಾರ್ಮಿಕರ ವಿಭಾಗದ ಉಪಾಧ್ಯಕ್ಷರಾಗಿ ಎನ್. ವಿಷ್ಣುನಾಯ್ಕ ಹಾಗೂ ಭದ್ರಾವತಿ ಘಟಕದ ಅಧ್ಯಕ್ಷರಾಗಿ ಎಚ್.ಎಸ್. ಶಂಕರ್ ರಾವ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ನಗರದ ಮಹದೇವಪ್ಪ ತಿಳಿಸಿದ್ದಾರೆ.

ಮಹಾಮಂತ್ರ ಕಾರ್ಯಾಗಾರ ಉದ್ಘಾಟನೆ
ಸೊರಬ: ಧ್ಯಾನ, ಜಪ, ಪ್ರಾಣಾಯಾಮಗಳಿಂದ ಏಕಾಗ್ರತೆ, ಆನಂದ, ಆರೋಗ್ಯ ಹಾಗೂ ಚೈತನ್ಯ ಪಡೆಯಲು ಸಾಧ್ಯವಿದೆ ಎಂದು ವಾಸವಿ ಕ್ರೆಡಿಟ್ ಕೋ ಆಪರೇಟೀವ್ ಸೊಸೈಟಿ ನಿರ್ದೇಶಕಿ ಮಧುವಂತಿ ನಂದಕುಮಾರ್ ಹೇಲಿದರು.
ಆನವಟ್ಟಿ ವಾಸವಿ ಕಲ್ಯಾಣ ಮಂದಿರದಲ್ಲಿ ವಾಸವಿ ದೀಕ್ಷಾ ಹಾಗೂ ಮಹಾಮಂತ್ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಾಸವಿ ಮಹಾಮಂಡಲದ ಸದಸ್ಯೆ ಗೀತಾ ಗುಪ್ತ ಜಪಯಜ್ಞದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಎಂ. ಸ್ನೇಹಪ್ರಭ ಅಧ್ಯಕ್ಷತೆ ವಹಿಸಿದ್ದರು. ಎಂ.ಎಸ್. ವಿರೂಪಾಕ್ಷಪ್ಪ, ಕಾರ್ತಿಕ್ ಮೊದಲಾದವರು ಇದ್ದರು. ಕಾರ್ಯಾಗಾರದ ಪ್ರಯೋಜನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.