ದೈಹಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ಅಗತ್ಯ
ಸೊರಬ: ಆಧುನಿಕ ಜೀವನದ ಅಳವಡಿಕೆ ಭರಾಟೆಯಲ್ಲಿ ನಮ್ಮ ದೈಹಿಕ ಸ್ವಾಸ್ಥ್ಯದ ಬಗ್ಗೆ ನಿಷ್ಕಾಳಜಿ ಇರಬಾರದು ಎಂದು ಶಿಕ್ಷಕ ಎಸ್. ರಾಜೇಂದ್ರ ತಿಳಿಸಿದರು.
ತಾಲೂಕು ಗಿಣಿವಾಲದ ಸಹಿಪ್ರಾ ಶಾಲೆಯಲ್ಲಿ ಸೊರಬ ಸ್ಕೋಡ್ ವೇಸ್ ಸಂಚಾರಿ ಆರೋಗ್ಯ ಘಟಕದವರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಹಮ್ಮಿಕೊಂಡಿದ್ದ ಡೆಂಘೀ ಜ್ವರ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡೆಂಘೀ ನಿಯಂತ್ರಣ ಕುರಿತು ಮಾಹಿತಿ ನೀಡಿದ ಅವರು, ನಮಗೆ ದೊರಕುವ ಶಿಕ್ಷಣ ನಮ್ಮ ಸುತ್ತಲ ಪರಿಸರದ ಕುರಿತು ಕಾಳಜಿ ವಹಿಸುವಂತಿದ್ದರೆ, ಶಿಕ್ಷಣ ಸಾರ್ಥಕವಾಗುತ್ತದೆ, ನಾವು ಸ್ವಚ್ಛ ಇದ್ದು, ಸಮಾಜಕ್ಕೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು ಎಂದರು.
ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಸಿ.ಬಸವಣ್ಯಪ್ಪ, ಸಿಬ್ಬಂದಿ ಸಂತೋಷ್ ಎಸ್. ಕಡೂರ್, ಮನೋಜ್ ಕುಮಾರ್, ಬಿ.ಸಿ. ಲತಾ, ನಿರ್ಮಲ ಹಾಗೂ ಶಾಲಾ ಶಿಕ್ಷಕ ಎನ್. ಶಿವಪ್ಪ ಇದ್ದರು.
ಪ್ರತಿಭಾ ಪುರಸ್ಕಾರ
ಶಿವಮೊಗ್ಗ: ಬಬ್ಬೂರುಕಮ್ಮೆ ಸೇವಾ ಸಮಿತಿಯು ಜೂ. 23ರಂದು ಸಂಜೆ 6 ಗಂಟೆಗೆ ಗಾಯತ್ರಿ ದೇವಸ್ಥಾನದಲ್ಲಿ ಪ್ರತಿಭಾಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಕೃಷಿ ಅಧಿಕಾರಿ ಕೆ.ಜಿ.ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹಾಗೂ ನಗರಸಭಾ ಸದಸ್ಯ ಸುರೇಖಾ ಮುರಳೀಧರ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಗುತ್ತದೆ. ಮುಖ್ಯ ಅತಿಥಿಯಾಗಿ ಉಪನ್ಯಾಸಕ ಕೆ.ಅರವಿಂದಕುಮಾರ್, ಸಂಘದ ಗೌರವಾಧ್ಯಕ್ಷ ಎಸ್.ಎಸ್.ನಂಜುಂಡಸ್ವಾಮಿ, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಉಪಸ್ಥಿತರಿರುವರು. ಸಂಘದ ಅಧ್ಯಕ್ಷ ಕಾರಕೊಡ್ಲು ಗುರುಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಗಮಕ ಸಪ್ತಾಹ
ಶಿವಮೊಗ್ಗ: ಹೊಸಹಳ್ಳಿಯ ಗಮಕ ಕಲಾ ಪರಿಷತ್ ಜೂನ್ 23ರಿಂದ 30ರವರೆಗೆ 35ನೇ ವಾರ್ಷಿಕ ಗಮಕ ಸಪ್ತಾಹ ಕಾರ್ಯಕ್ರಮವನ್ನು ಗಮಕ ಭವನದಲ್ಲಿ ಹಮ್ಮಿಕೊಂಡಿದೆ. 23ರಂದು ಸಂಜೆ 6.30ಕ್ಕೆ ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಸಪ್ತಾಹ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಪಾಲ್ಗೊಳ್ಳುವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಎಚ್.ಕೆ.ವೆಂಕಟರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿ ದಿನ ಸಂಜೆ 6.30ಕ್ಕೆರಿಂದ ಮತ್ತೂರು, ಹೊಸಹಳ್ಳಿ, ಉಡುಪಿಯ ಗಮಕಿಗಳು ಕಾರ್ಯಕ್ರಮ ನಡೆಸಿಕೊಡುವರು. 30ರಂದು ಸಂಜೆ 6ಕ್ಕೆ ಸಮಾರೋಪ ನಡೆಯಲಿದ್ದು, ಶಾಸಕ ವೈ.ಎಸ್.ವಿ.ದತ್ತ ಪಾಲ್ಗೊಳ್ಳುವರು. ವೇಣಮಾರ್ಕಂಡೇಯ ಅವಧಾನಿಯವರು ಅಧ್ಯಕ್ಷತೆ ವಹಿಸಲಿದ್ದಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

