ಶಿವಮೊಗ್ಗ

ಮಾನಸಿಕ ಸದೃಢತೆಗೆ ಚೆಸ್ ಸಹಕಾರಿ

Published On :

ಕಪ್ರ ವಾರ್ತೆ ,  ಶಿವಮೊಗ್ಗ ,  ಜೂ. 22
ಚೆಸ್ ಕ್ರೀಡೆ ಮಕ್ಕಳಲ್ಲಿ ಮಾನಸಿಕ ಸದೃಢತೆಗೆ ಬುನಾದಿ ಎಂದು ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತ ಎಚ್.ಡಿ. ರಮೇಶ್‌ಶಾಸ್ತ್ರಿ ಅಭಿಪ್ರಾಯಪಟ್ಟರು.
ಜಿಲ್ಲಾ ಚದುರಂಗ ಸಂಸ್ಥೆ ಹಾಗೂ ರೋವರ್ಸ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ 19 ವರ್ಷದೊಳಗಿನ ಮೂರು ದಿನ ರಾಜ್ಯಮಟ್ಟದ ಬಾಲಕರ ಹಾಗೂ ಬಾಲಕಿಯರ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಸದಾ ಒತ್ತಡದಿಂದ ಜೀವನ ನಡೆಸುತ್ತಿದ್ದು, ಹಾಗೆ ಓದಿನಲ್ಲೂ ಸದಾ ಗೊಂದಲಮಯವಾಗಿರುತ್ತಾರೆ. ಮಕ್ಕಳ ಮನಸ್ಸು ಮಾನಸಿಕವಾಗಿ ಸದೃಡತೆ ಹಾಗೂ ಲವಲವಿಕೆಯಿಂದರಲು ಚೆಸ್ ತುಂಬಾ ಪ್ರಾಮುಖ್ಯತೆ ಪಡೆದಿದೆ ಎಂದರು.
ಕಾಯಿಲೆ ಸಾಧ್ಯತೆ ಕಡಿಮೆ: ಭಾರತ ರಾಷ್ಟ್ರ ಚೆಸ್‌ನಲ್ಲಿ ಸಾಕಷ್ಟು ಹೆಸರುಗಳಿಸಿ ತನ್ನದೇ ಆದ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಇತ್ತೀಚಿನ ವೈಜ್ಞಾನಿಕ ವರದಿಗಳ ಪ್ರಕಾರ ಕರಕುಶಲ ಕೆಲಸಗಾರರು ಹಾಗೂ ಚೆಸ್ ಆಟಗಾರರಿಗೆ ಮೆದುಳಿನ ಕಾಯಿಲೆಗಳು ತುಂಬಾ ಕಡಿಮೆ ಬರುತ್ತದೆ ಎಂದು ಹೇಳಿದರು.
ಚೆಸ್ ಆಡುವುದರಿಂದ ಮೆದುಳಿಗೆ ಹೆಚ್ಚು ರಕ್ತ ಸಂಚಾರವಾಗುವುದರಿಂದ ಬುದ್ಧಿ ಚುರುಕಾಗಿರುತ್ತದೆ. ವಿದ್ಯಾಭ್ಯಾಸದ ಈ ಜೊತೆಗೆ ಕ್ರೀಡೆ ಮೈಗೂಡಿಸಿಕೊಂಡಲ್ಲಿ ಓದಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚದುರಂಗ ಸಂಸ್ಥೆಯ ಉಪಾಧ್ಯಕ್ಷ ನಟೇಶ್ ಕಾಸರವಳ್ಳಿ, ಈ ರಾಜ್ಯಮಟ್ಟದ ಕ್ರೀಡೆಗೆ ಈಗಾಗಲೇ ಮಂಗಳೂರು, ಮೈಸೂರು ಹಾಗೂ ಬೇರೆ ಬೇರೆ ಊರುಗಳಿಂದ ಸಾಕಷ್ಟು ಜನ ಕ್ರೀಡಾ ಅಭ್ಯರ್ಥಿಗಳು ಭಾಗವಹಿಸಿರುವುದು ವಿಶೇಷ ಎಂದರು.
ಹೆಮ್ಮೆಯ ವಿಷಯ: ರೋವರ್ಸ್ ಕ್ಲಬ್ ಕೇವಲ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಕ್ರೀಡೆಗೆ ಸಾಕಷ್ಟು ಉತ್ತೇಜನ ನೀಡಿ ರಾಜ್ಯಮಟ್ಟದ ಟೇಬಲ್ ಟೆನ್ನಿಸ್, ಶಟಲ್ ಬ್ಯಾಡ್‌ಮಿಂಟನ್ ಹಾಗೂ ಇತರೆ ಕ್ರೀಡೆಗಳಿಗೆ ಸಹಕಾರ ನೀಡುತ್ತಿರುವುದು ಶಿವಮೊಗ್ಗಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಆಗಮಿಸಿದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.  ವೇದಿಕೆಯಲ್ಲಿ ಜಿಲ್ಲಾ ಚದುರಂಗ ಸಂಸ್ಥೆಯ ನಿರ್ದೇಶಕ ನಾಗರಾಜ್‌ಪಾಟಕರ್, ಕಾರ್ಯದರ್ಶಿ ಎಂ. ಮಂಜುನಾಥ್, ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಜಿ. ವಿಜಯಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.