ಶಿವಮೊಗ್ಗ

ರಾಜಕೀಯವಾಗಿ ಬೆತ್ತಲಾದ ಬಿಎಸ್‌ವೈ: ಆಯನೂರು

Published On :

ಕ.ಪ್ರ.ವಾರ್ತೆ ,  ಶಿವಮೊಗ್ಗ ,  ಜೂ.23
ಬಿಜೆಪಿಯ ಶರ್ಟ್ ಹರಿಯಲು ಹೋದ ಬಿ.ಎಸ್. ಯಡಿಯೂರಪ್ಪ ರಾಜಕೀಯವಾಗಿ ಬೆತ್ತಲಾಗಿದ್ದಾರೆ ಎಂದು ರಾಜ್ಯ ಸಭಾ ಆಯನೂರು ಮಂಜುನಾಥ ಬಿ.ಎಸ್. ಯಡಿಯೂರಪ್ಪ ಅವರನ್ನು ಛೇಡಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆ ಕುರಿತು ಕೇಳಿ ಬರುತ್ತಿರುವ ಹೇಳಿಕೆಗಳು ಅಸಂಬದ್ಧವಾಗಿವೆ. ಇದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನವನ್ನು ಕೆಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಧನಂಜಯ್ ಕುಮಾರ್ ಅವರ ಹೇಳಿಕೆಗಳು ಉದ್ಧಟತನದ ಹೇಳಿಕೆಗಳು. ಅವರ ಮಾತಿಗೆ ಅವರ ಪಕ್ಷದಲ್ಲಿಯೇ ಮನ್ನಣೆ ಇಲ್ಲ. ಹೀಗಿರುವಾಗ ಅವರ ಹೇಳಿಕೆಗಳನ್ನು ಕಾರ್ಯಕರ್ತರು ನಂಬುವ ಅಗತ್ಯವಿಲ್ಲ. ಅಕ್ಟೋಬರ್ ಅಥವಾ ನಂಬರ್ ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಕೆಜೆಪಿ ನಾಯಕರಿಗೆ ಪಕ್ಷವನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಅದರಿಂದಲೇ ಪ್ರತಿಯೊಂದು ಪಕ್ಷದ ಜತೆಗೆ ಮೈತ್ರಿ ಹೊಂದಲು ಬಯಸುತ್ತಿದ್ದು, ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಗೊಂದಲದಲ್ಲಿ ಬಿಎಸ್‌ವೈ: ಬಿಜೆಪಿಯನ್ನು ಮುಗಿಸುವುದಾಗಿ ಹೇಳುತ್ತಿದ್ದ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಈಗ ನಿತ್ಯ ಒಂದೊಂದು ಸುದ್ದಿ ಹರಿಯ ಬಿಡುತ್ತಿದ್ದಾರೆ. ಕೆಜೆಪಿ ನಾಯಕರು ಅತ್ಯಂತ ಗೊಂದಲದಲ್ಲಿದ್ದಾರೆ ಎಂದ ಅವರು, ಯಡಿಯೂರಪ್ಪ ಅವರ ಶಕ್ತಿ, ಸಾಮರ್ಥ್ಯ ಬಗ್ಗೆ ನಮಗೆ ಅಪಾರವಾದ ನಂಬಿಕೆ ಇದೆ ಎಂದರು.
ಸಾಕಷ್ಟು ನಷ್ಟವಾಗಿದೆ: ಸಂಘಟನೆ ಎಂಬ ಭದ್ರ ಕೋಟೆ ಇಲ್ಲದಿದ್ದರೆ ಎಂತಹ ಪರಿಸ್ಥಿತ ಬರುತ್ತದೆ ಎಂಬುದಕ್ಕೆ ಯಡಿಯೂರಪ್ಪ ಸಾಕ್ಷಿಯಾಗಿದ್ದಾರೆ. ಯಡಿಯೂರಪ್ಪ ಇಲ್ಲದಿರುವುದರಿಂದ ನಮಗೂ ಸಾಕಷ್ಟು ನಷ್ಟವಾಗಿದೆಯಾದರೂ, ಅವರಿಗೆಷ್ಟು ಲಾಭವಾಗಿದೆ ಎಂದು ಅವರೇ ವಿಶ್ಲೇಷಿಸಿಕೊಳ್ಳಬೇಕು.
ಬೂತ್‌ಮಟ್ಟದಲ್ಲಿ ಮುಂದಿನ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.