ಸಂತ್ರಸ್ತರ ನೆರವಿಗೆ ಆರ್ಎಸ್ಎಸ್ ಮನವಿ
ಶಿವಮೊಗ್ಗ: ಉತ್ತರಾಖಂಡದಲ್ಲಿ ಸಂತ್ರಸ್ತರಾದವರ ನೆರವಿಗೆ ಸಹಕರಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಉತ್ತರಾಖಂಡದ ಮಹಾ ಜಲಪ್ರಳಯದಿಂದಾಗಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ಸಾವಿರಾರು ಮನೆಗಳು, ವಿದ್ಯಾಲಯಗಳು, ಛತ್ರಗಳು, ಧಾರ್ಮಿಕ ಕಟ್ಟಡಗಳು, ದೇವಸ್ಥಾನಗಳು ನಾಶವಾಗಿವೆ. ನಮ್ಮ ಸ್ವಯಂ ಸೇವಕರು ನೆರೆ ಪೀಡಿತ ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳನ್ನು ಆರಂಭಿಸಿದ್ದಾರೆ. ತುರ್ತು ಅವಶ್ಯಕತೆಗನುಗುಣವಾಗಿ ಊಟ, ಔಷದಿ, ಬಟ್ಟೆ ಒದಗಿಸುವುದರ ಜೊತೆಗೆ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆಯನ್ನು ಸ್ವಯಂ ಸೇವಕರು ಮಾಡುತ್ತಿದ್ದಾರೆ.
ಈ ಸಂತ್ರಸ್ತರಿಗೆ ಈಗ ಮಾನವೀಯ ನೆರವು ಬೇಕಾಗಿದ್ದು, ಇದಕ್ಕಾಗಿ ಆರ್ಥಿಕ ನೆರವಿನ ಅಗತ್ಯವಿದೆ. ಅದಕ್ಕಾಗಿ ಪರಿಹಾರ ನಿಧಿ ದೇಣಿಗೆ ನೀಡುವಂತೆ ಕೋರಿದೆ. ನಗರದಲ್ಲಿ ಸ್ವಯಂಸೇವಕರು ಜೂ.25ರಂದು ಸಂಜೆ 4.30ಕ್ಕೆ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ನಲ್ಲಿ ನಿಧಿ ಸಂಗ್ರಹ ಮಾಡಲಿದ್ದಾರೆ. ಪರಿಹಾರನಿಧಿಯನ್ನು ಸ್ವೀಕರಿಸಲು ಎರಡು ಕೇಂದ್ರ ಸಹ ಆರಂಭಿಸಲಾಗಿದೆ. ಪಂಚವಟಿ ಕಾಲೋನಿಯಲ್ಲಿರುವ ಸಂಘ ಕಾರ್ಯಾಲಯ ಮಧುಕೃಪ ಅಥವಾ ನೆಹರೂ ರಸ್ತೆಯಲ್ಲಿರುವ ಸಾಧನಾ ಟ್ರೇಡಿಂಗ್ ಕಂಪನಿಯಲ್ಲಿ ಸಾರ್ವಜನಿಕರು ದೇಣಿಗೆ ನೀಡಬಹುದೆಂದು ಶಿವಮೊಗ್ಗ ನಗರ ಕಾರ್ಯವಾಹ ಪೂನಂ ರವೀಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

