ಶಿವಮೊಗ್ಗ

ನರ್ಸಿಂಗ್ ಹೋಂಗಳಲ್ಲಿ ದರಪಟ್ಟಿ ಕಡ್ಡಾಯಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಜೂ.25
ಖಾಸಗಿ ಆಸ್ಪತ್ರೆ- ನರ್ಸಿಂಗ್ ಹೋಂಗಳಲ್ಲಿ ಸೇವಾ ವಿವರ ಹಾಗೂ ದರಪಟ್ಟಿ ಫಲಕ ಪ್ರಕಟಣೆಯನ್ನು ಕಡ್ಡಾಯಗೊಳಿಸುವಂತೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳು ಹೆಚ್ಚುತ್ತಿವೆ. ಇದರಲ್ಲಿ ಹಲವಾರು ನರ್ಸಿಂಗ್ ಹೋಂಗಳು ಸೇವಾ ಮನೋಭಾವನೆ ಹೊಂದಿದ್ದು, ಮತ್ತೆ ಕೆಲವು ಪೈಪೋಟಿ ಮೇಲೆ ಹಣ ಮಾಡುವ ಕೇಂದ್ರಗಳಾಗಿವೆ ಎಂದು ಪ್ರತಿಭಟನಾಕಾರರು ದೂರಿದರು.
ಕ್ರಮಕ್ಕೆ ಆಗ್ರಹ: ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ನಿಗದಿತ ದರ ಪಡೆಯದೆ ಮನಬಂದಂತೆ ರೋಗಿಗಳಿಂದ ಹಣ ಸುಲಿಗೆ ಮಾಡುವ ಕಾರ್ಯ ನಡೆದಿದೆ. ಕೆಲವು ಹೈಟೆಕ್ ಆಸ್ಪತ್ರೆಗಳಲ್ಲಿ ರೋಗಿಯ ಜೀವ ಹೋದ ನಂತರವೂ ಕೃತಕ ಉಸಿರಾಟದಲ್ಲಿ ಇರಿಸಿ ನಂತರ ಹೆಚ್ಚು ಬಿಲ್ ಪಡೆದಿರುವ ಉದಾಹರಣೆಗಳಿವೆ ಎಂದು ಆರೋಪಿಸಿದ ವೇದಿಕೆಯ ಪ್ರಮುಖರು, ತಕ್ಷಣವೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತೆರಿಗೆ ವಂಚನೆ: ಹಲವು ನರ್ಸಿಂಗ್ಹೋಂಗಳಲ್ಲಿ ದರಪಟ್ಟಿ ವಿವರಗಳನ್ನು ಪ್ರಕಟಿಸಿಲ್ಲ.
ಹೀಗಾಗಿ ಬಡ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿ ನಂತರ ಹೊರಬರುವಾಗ ನರ್ಸಿಂಗ್ ಹೋಂನವರು ಹೇಳಿದಷ್ಟು ಬಿಲ್ ತೆತ್ತುಬರಬೇಕಾಗಿದೆ.
ಈ ರೀತಿ ನಿರ್ದಿಷ್ಟ ದರಪಟ್ಟಿಗಳು ಪ್ರಕಟಿಸದ ಕಾರಣ ಸರ್ಕಾರಕ್ಕೂ ತೆರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ನಗರಾಧ್ಯಕ್ಷ ಮಂಜುನಾಥ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ರೀಟಮ್ಮ, ಶಿವಕುಮಾರ್, ರಾಜುನಾಯ್ಕ, ಸತೀಶ, ನರಸಿಂಹ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.