ರಸ್ತೆ ವಿಸ್ತರಣೆ: ಸ್ಥಳ ಪರೀಕ್ಷಿಸಿದ ಡಿಸಿ
ಕ.ಪ್ರ.ವಾರ್ತೆ ಟಿ ಸೊರಬ ಟಿ ಜೂ.29
ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಪಟ್ಟಣ ರಸ್ತೆ ವಿಸ್ತರಣೆ ಕುರಿತಂತೆ ಸ್ಥಳ, ಘನತ್ಯಾಜ್ಯ ವಿಲೇವರಿ ಘಟಕ ವೀಕ್ಷಿಸಿದರು.
ಬಳಿಕ ಪಪಂ ಸಭಾಂಗಣದಲ್ಲಿ ನಡೆದ ಅಧಿಕಾರಿ ಮಟ್ಟದ ಸಭೆಯಲ್ಲಿ ಅವರು ಭಾಗವಹಿಸಿದರು.
ಪಟ್ಟಣದಲ್ಲಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ ಎಂಬ ದೂರು ಬಂದಿದ್ದು, ಕೂಡಲೆ ಪ್ರತಿ ದಿನ ಕುಡಿಯುವ ನೀರು ಸರಬರಾಜು ಆಗಬೇಕು ಎಂದರು.
ಈ ವಿಷಯದ ಕುರಿತು ಸ್ಪಷ್ಟಪಡಿಸಿದ ಪಪಂ ಮುಖ್ಯಾಧಿಕಾರಿ ವೀರೇಶ್ ಕುಮಾರ್, ಪಟ್ಟಣದಲ್ಲಿ 11 ಸಾವಿರ ಜನಸಂಖ್ಯೆ ಇದೆ, ಬೇಸಿಗೆಯಲ್ಲಿ ನೀರಿನ ಕೊರತೆಯಾದ ಹಿನ್ನೆಲೆಯಲ್ಲಿ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು, ಈಗ ಉತ್ತಮ ಮಳೆ ಆಗಿರುವುದರಿಂದ ಪ್ರತಿ ದಿನ ನೀರು ಬಿಡಲಾಗುತ್ತಿದೆ ಎಂದರು.
ಇಲ್ಲಿನ ಸರ್ವೇ ನಂ.113ರಲ್ಲಿ 20- 25 ವರ್ಷಗಳಿಂದ ವಾಸ ಮಾಡುತ್ತಿರುವ ಸುಮಾರು 500 ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದರೂ ಕಂದಾಯ ವಸೂಲಿಗೆ ತಾಂತ್ರಿಕ ಅಡಚಣೆ ಇದೆ. ಹಾಗಾಗಿ ಈ ನಿವಾಸಿಗಳಿಂದ ಪಪಂಗೆ ಯಾವುದೆ ಆದಾಯವಿಲ್ಲ ಎಂದು ಪ್ರಸ್ತಾಪಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದ ಜಿಲ್ಲಾಧಿಕಾರಿಗಳು, ಪ್ರಸ್ತುತ ಅವರಿಂದ ತಾತ್ಕಾಲಿಕ ಕಂದಾಯ ವಸೂಲಿ ಮಾಡಿ, ಕಂದಾಯ ಕಟ್ಟದ ಮನೆಗಳಿಗೆ ಮೂಲಭೂತ ಸೌಕರ್ಯ ಕಡಿತಗೊಳಿಸಿ ಎಂದು ಸೂಚಿಸಿದರು.
ಇಲಾಖೆಯ ಬಜೆಟ್ಗಿಂತ ಹೆಚ್ಚಿನ ವ್ಯಯ ಮಾಡದೆ, ಫಲಾನುಭವಿಗಳಿಗೆ ಅನಕೂಲವಾಗುವ ವಸ್ತುಗಳನ್ನು ವಿತರಿಸಿ ಎಂದು ಸೂಚಿಸಿದರು.
ಯೋಜನಾ ನಿರ್ದೇಶಕ ರಾಜಪ್ಪ, ತಹಸೀಲ್ಗಾರ್ ತೇಜಸ್ ಕುಮಾರ್, ಪಪಂ ಅಧಿಕಾರಿ ರಮೇಶ್, ಸಂಗಮೇಶ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

