ಶಿವಮೊಗ್ಗ

ವೈನ್ಶಾಪ್, ಬಾರ್ ಅನುಮತಿ ನಿರ್ಧಾರಕ್ಕೆ ಖಂಡನೆ

Published On :

ಕ.ಪ್ರ.ವಾರ್ತೆ  ಶಿಕಾರಿಪುರ  ಜೂ.29 ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಾಜ್ಯಾದ್ಯಂತ ಮದ್ಯಪಾನ ಮುಕ್ತ ಸಮಾಜಕ್ಕೆ ಹಲವು ಯೋಜನೆ ಮೂಲಕ ಶ್ರಮಿಸುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇದೀಗ ಪುನಃ ವೈನ್ ಶಾಪ್ ಹಾಗೂ ಬಾರ್ಗಳಿಗೆ ಅನುಮತಿ ನೀಡಿ ಧ.ಗ್ರಾ.ಯೋಜನೆಯ ಮೂಲ ಆಶಯಕ್ಕೆ ದಕ್ಕೆ ತರುವ ಸಂಚು ರೂಪಿಸುತ್ತಿದೆ ಎಂದು ಯೋಜನೆ ತಾಲೂಕು ಯೋಜನಾಧಿಕಾರಿ ಸುರೇಶ್ ಎಂ.  ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ರಾಜ್ಯ ಸರ್ಕಾರದ ನೂತನ ವೈನ್ಶಾಪ್, ಬಾರ್ ಅನುಮತಿ ಆರಂಭದ ನಿರ್ಧಾರ ಖಂಡಿಸಿ ಅವರು ಮಾತನಾಡಿದರು.
ಕಳವಳಕಾರಿ: ಹಿಂದಿನ ಸರ್ಕಾರ ಸಾರಾಯಿ ನಿಷೇಧದಿಂದ ಬಡವರಿಗೆ ದುಬಾರಿ ಬೆಲೆಯ ವಿದೇಶೀ ಮದ್ಯದ ದಾಸರಾಗಿದ್ದು, ಅತ್ಯಂತ ಕಳವಳಕಾರಿ ಎಂದವರು ಹೇಳಿದರು.
ಇದಕ್ಕೆ ಪೂರಕವಾಗಿ ಕಳೆದ ವರ್ಷದಲ್ಲಿ ಸರ್ಕಾರ ತನ್ನ ಅಧಿಕೃತ ಮದ್ಯ ಮಾರಾಟ ಮಳಿಗೆ ಎಂ.ಎಸ್.ಐ.ಎಲ್ ಮೂಲಕ ಮದ್ಯದಂಗಡಿಗಳನ್ನು ವಿಸ್ತರಿಸುತ್ತಿದ್ದು, ಇಲ್ಲಿಯವರೆಗೆ 9 ಸಾವಿರ ವೈನ್ ಶಾಪ್, 140 ಎಂ.ಎಸ್.ಐ.ಎಲ್. ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಸಂಪೂರ್ಣ ಅಬಕಾರಿ ನೀತಿಯನ್ನು ಪುನರ್ವಿಮರ್ಶಿಸುವುದು, ನೂತನ ವೈನ್ಶಾಪ್, ಬಾರ್ ಆರಂಭಿಸುವ ನಿರ್ಧಾರ ತಕ್ಷಣ ಕೈಬಿಡುವುದು, ಈಗಾಗಲೇ ನೀಡಿದ ಪರವಾನಗಿ ಕಡಿತಗೊಳಿಸಿ ಪಾನ ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ, ಪಟ್ಟಣದ ವೈನ್ಶಾಪ್ಗಳನ್ನು ಗ್ರಾಮೀಣ ಭಾಗಕ್ಕೆ ಸ್ಥಳಾಂತರಗೊಳಿಸುವುದನ್ನು ಸ್ಥಗಿತಗೊಳಿಸುವುದು ಸೇರಿದಂತೆ ಸರ್ಕಾರ ಆದ್ಯತೆಯ ಮೇರೆಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಹಕ್ಕೊತ್ತಾಯ  ಮಂಡಿಸಲಾಯಿತು.
ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಸದಸ್ಯ ಪ್ರೇಮ್ ಕುಮಾರ್ ಗೌಡ,  ಶಿವಮೂರ್ತಿ, ಯೋಜನೆ ಮೇಲ್ಪಿಚಾರಕ ರವಿ, ರವಿಪ್ರಸಾದ್, ರಮೇಶ್,ಅಣ್ಣೇಗೌಡ ಮತ್ತಿತರರಿದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.