ಮೂರು ದಿನದ ಕೃಷಿಮೇಳಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ ಮಾ. 1ಹೈನುಗಾರಿಕೆಯಲ್ಲಿನ ಲೋಪದೋಷ, ಮತ್ಸ್ಯ ಹಾಗೂ ಕುರಿ, ಕೋಳಿ ಸಾಕಾಣಿಕೆಯಲ್ಲಿನ ಸಂಕಷ್ಟಗಳಿಗೆ ಪರಿಹಾರ ನೀಡುವ ಉದ್ದೇಶ ಮತ್ತು ಅದಕ್ಕಿಂತ ಮುಖ್ಯವಾಗಿ ರೈತಾಪಿ ಕೆಲಸದಿಂದ ದೂರಾಗುತ್ತಿರುವ ರೈತನಲ್ಲಿ ಆತ್ಮವಿಶ್ವಾಸ ಮರುಸ್ಥಾಪಿಸುವ ಗುರಿಯೊಂದಿಗೆ 3 ದಿನಗಳ ಜಾನುವಾರು, ಕುಕ್ಕುಟ, ಮತ್ಸ್ಯ ಮತ್ತು ಕೃಷಿಮೇಳಕ್ಕೆ ಶುಕ್ರವಾರ ಚಾಲನೆ ದೊರೆತಿದೆ.
ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿವಿಧ ಕೃಷಿ ಸಂಬಂಧಿತ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಮೇಳ ಬಹುವಿಧದಲ್ಲಿ ಕೃಷಿ ಕ್ಷೇತ್ರಕ್ಕೆ ಉಪಯೋಗಿ. ಮೇಕೆ, ಪಕ್ಷಿ, ಗೋವು, ಕೋಳಿ ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿ ವೀಕ್ಷಣೆಗೆ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಹೊಸನಗರದ ರಾಮಚಂದ್ರಪುರ ಮಠದ ದೇಶೀ ಹಾಗೂ ವಿದೇಶೀ ತಳಿ ಹಸುಗಳು ಮೇಳದ ಪ್ರಧಾನ ಆಕರ್ಷಣೆ.
ಮಲೆನಾಡು ಗಿಡ್ಡ, ಗುಜರಾತ್ನ ಗಿರ್, ಪಂಜಾಬ್ ಮತ್ತು ಪಾಕಿಸ್ತಾನದ ಸಾಹಿವಾರು, ತಮಿಳುನಾಡಿನ ಕಂಗಾಯಮ್, ಆಂಧ್ರದ ಬಂಗೋರ, ಮಧ್ಯಪ್ರದೇಶದ ನಿಮಾರಿ, ಗುಜಾರಾತ್ನ ಕಾಂಕ್ರಿಜ್, ಎಮ್ಮೆ- ಜಾಫರ್ಬಾದಿ, ಮುರ್ರಾ, ಸೂರ್ತಿ, ಅಲ್ಲದೇ, ಆಸ್ಪ್ರೆಲಿಯದಿಂದ ಬಂದ ರ್ಯಾಹುಲೆಟ್ (ಕುರಿ), ಉಸ್ಮಾನ್ ಬಾದಿ, ಸಿರೋಜಿ ತಳಿಯ ಮೇಕೆಗಳು, ಲಾರ್ಜ್ ವೈಟ್ ತಳಿಯ ಹಂದಿಗಳು ಕಂಡು ಬಂದವು.
ಮತ್ಸ್ಯ, ಕೋಳಿ: ಸಿಂಗಾಪುರ, ಗಫ್ರಿ, ವೈಟ್ಮೋಲಿ, ಹೊಮ್ಮಿಮು, ಕೆಂಪು ಬಾಲದ ಮೀನು, ಕೆರೆಯ ಮೀನು, ಹಾವು ಆಕಾರದ ಮೀನುಗಳು, ಗಿರಿರಾಜಾ, ನಾಟಿ, ಸ್ವರ್ಣಭಾರ ತಳಿಯ ಕೋಳಿಗಳು ಅಲ್ಲದೇ, ಮೊಲ ಸಾಕುವ ವಿಧಾನಗಳನ್ನು ಇಲ್ಲಿ ತಿಳಿಸಲಾಯಿತು.
ಆನೆ ತೊಡೆಯ ಮೂಳೆ, ಹಸುವಿನ ತಲೆ ಬುರುಡೆ, ಮೆದುಳು, ಹೃದಯ ಹಾಗೂ ಎಮು ಪಕ್ಷಿಯ ಅಸ್ತಿ ಪಂಜರ, ಇದರ ಮೊಟ್ಟೆ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣಿಯವಾಗಿದ್ದವು. ಅಲ್ಲದೇ, ಕೆಲ ಜನರಿಗೆ ಎಮು ಪಕ್ಷಿಯ ಅಸ್ತಿಪಂಜರ ಹೊಸದಾಗಿ ನೋಡಿದ್ದರಿಂದ ಇದೇನು, ಇದು ಯಾವ ಪಕ್ಷಿ ಎಂಬ ಪ್ರಶ್ನೆಗಳು ಸಾಮಾನ್ಯವಾಗಿದ್ದವು. ಇದನ್ನು ವಿವರಿಸಲು ವಿದ್ಯಾಲಯದ ಒಬ್ಬ ಪ್ರಾಧ್ಯಾಪಕ ಹಾಗೂ 3 ಜನ ವಿದ್ಯಾರ್ಥಿನಿಯರನ್ನು ನೇಮಿಸಲಾಗಿತ್ತು.
ಮಳಿಗೆಗಳು: ಪಶುವಿನ ವಿವಿಧ ಬಗೆಯ ಆಹಾರ ಪದಾರ್ಥ, ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ರಾಮಚಂದ್ರಾಪುರ ಮಠದಲ್ಲಿ ತಯಾರಿಸಲಾಗುವ ಗೋ ಉತ್ಪನ್ನಗಳು, ಅಡಕೆ ಗೊನೆ ವಿಗಂಡಿಸುವ ಯಂತ್ರ, ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ಗಳು, ವಿವಿಧ ಬಗೆಯ ಗಿಡಮೂಲಿಕೆ ಔಷಧಿಗಳ ಮಳಿಗೆಗಳು ಅಲ್ಲಿದ್ದವು.
ಈ ಮೇಳದಲ್ಲಿ ರೈತ ಸಮುದಾಯಕ್ಕೆ ಬೇಕಾಗುವ ಹಲವಾರು ಕುರಿ, ಕೋಳಿ, ಹಸು, ಹಂದಿಯ ದೇಶಿ ಹಾಗೂ ವಿದೇಶಿ ತಳಿಗಳನ್ನು ಪ್ರದರ್ಶಿಸಲಾಗಿದೆ. ಮೇಳದ ಮುಖ್ಯ ಉದ್ದೇಶ ರೈತರಲ್ಲಿ ಕೃಷಿ ಚಟುವಟಿಕೆ ಬಗ್ಗೆ ಜಾಗೃತಿ ಮೂಡಿಸಿ, ಸರ್ಕಾರದಿಂದ ಸಿಗುವಂತಹ ಆರ್ಥಿಕ ನೆರವು, ಯೋಜನೆಗಳು ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಪಶುವಿದ್ಯಾಲಯದ ಪ್ರಾಧ್ಯಾಪಕ ಬಿರಾದರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

