ಶಿಸ್ತುಕ್ರಮಕ್ಕೆ ಮನವಿ
ಹೊಸನಗರ: ಪಪಂ 2ನೇ ವಾರ್ಡ್ನಿಂದ ಬಂಡಾಯವಾಗಿ ಸ್ಪರ್ಧಿಸಿರುವ ಎಂ.ಪಿ. ಸುರೇಶ್ ವಿರುದ್ಧ ಶಿಸ್ತುಕ್ರಮ ಜರುಗಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಶಿಫಾರಸು ಮಾಡುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, 2ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಪಂ ಮಾಜಿ ಅಧ್ಯಕ್ಷ ರತ್ನಾಕರಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬಿಫಾರಂ ಕೂಡ ನೀಡಲಾಗಿದೆ. ಪಕ್ಷದ ನಿಯಮ ಮೀರಿ ಕಣದಲ್ಲಿ ಉಳಿದಿರುವ ಎಂ.ಪಿ. ಸುರೇಶ್ಗೆ ನಾಮಪತ್ರ ಹಿಂಪಡೆಯುವಂತೆ ಕೋರಲಾಗಿತ್ತು. ಹಿಂಪಡೆಯದ ಹಿನ್ನೆಲೆಯಲ್ಲಿ ಶಿಸ್ತುಕ್ರಮಕ್ಕೆ ಮನವಿ ಮಾಡಲಾಗುವುದು ಎಂದರು.
ಪ್ರಭಾಕರರಾವ್, ಬಾಬುಕಾಮತ್, ಮಹಾಬಲರಾವ್, ಕೋಡೂರು ಚಂದ್ರಮೌಳಿ, ನಾಗರಾಜ್ ಇದ್ದರು.
ಮೈಲಾರಪ್ಪ ಉಚ್ಛಾಟನೆ
ಭದ್ರಾವತಿ: ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ನಗರಸಭಾ ಸದಸ್ಯ ಮೈಲಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ಶಿವಾನಂದ ತಿಳಿಸಿದ್ದಾರೆ.
ಮೈಲಾರಪ್ಪನವರು ತಮಗೆ 6ನೇ ವಾರ್ಡಿನಿಂದ ಸ್ಪರ್ಧಿಸಲು ಪುನಃ ಶಾಸಕ ಸಂಗಮೇಶ್ವರ್ ಟಿಕೆಟ್ ನೀಡದೇ ವಂಚಿಸಿದ್ದಾರೆಂದು ಹೇಳಿಕೆ ನೀಡಿದ್ದರು. ಇದನ್ನು ಪಕ್ಷವಿರೋಧಿ ಚಟುವಟಿಕೆ ಎಂದು ಗಮನಿಸಿ ಶಾಸಕ ಬಿ.ಕೆ. ಸಂಗಮೇಶ್ವರ್ ಮತ್ತು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವೈ. ರೇಣುಕ ಮೈಲಾರಪ್ಪನವರ ಮೇಲೆ ಶಿಸ್ತಿನ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಒತ್ತಾಯಿಸಿದ ಮೇರೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವ್ಯವಸ್ಥೆ: ವಿಷಾದ
ತೀರ್ಥಹಳ್ಳಿ: ಹಿಂದೆ ಗುಣವಂತ ಮುಖಗಳು ಇದ್ದವು. ಬದುಕಿನಲ್ಲಿ ಹೊಸಮಾರ್ಗ ಇದೆ ಎಂದು ತೋರಿಸಿಕೊಡುವ ಮಹಿಮರಿದ್ದರು. ಆದರೆ ಈಗ ಒಳ್ಳೆಯ ಮುಖಗಳೇ ಸಿಗುತ್ತಿಲ್ಲ. ನಮ್ಮತನವನ್ನು ತಿದ್ದಿಕೊಳ್ಳುವ, ಸರಿಪಡಿಸಿಕೊಳ್ಳುವ ಅಗತ್ಯ ಇಂದು ಇದೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಕೋಣಂದೂರಿನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಶಿಕ್ಷರಿಗೆ ಸನ್ಮಾನ ಮಾಡಿ ಮಾತನಾಡಿದರು.
ವಿಪ ಸದಸ್ಯ ಗಣೇಶ್ ಕಾರ್ಣಿಕ್ ಮಾತನಾಡಿ, ಇಂದು ನಮ್ಮ ಮೌಲ್ಯಗಳು ಜಾಗೃತವಾಗಿದ್ದಿದ್ದರೆ ದುಷ್ಕೃತ್ಯಗಳು ಜರುಗುತ್ತಿರಲಿಲ ಎಂದರು. ಜಿ.ನಂಜುಂಡಪ್ಪ ಅಧ್ಯಕ್ಷತೆವಹಿಸಿದ್ದರು. ವಾಣಿಸುರೇಶ್, ಎಸ್.ವಿ.ತಿಮ್ಮಯ್ಯ, ಹೆಚ್.ಜಿ. ಗಿರಿರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

