ಶಿವಮೊಗ್ಗ

'ಪಪಂ ಚುನಾವಣೆಯಲ್ಲಿ ಅಭಿವೃದ್ಧಿಗೆ ಮನ್ನಣೆ'

Published On :

ಕ.ಪ್ರ.ವಾರ್ತೆ ಹೊಸನಗರ, ಮಾ.6
ಕಳೆದ ಬಾರಿ ಪಪಂ ಅಧಿಕಾರ ಹಿಡಿದಿದ್ದ ಜೆಡಿಎಸ್ ಅಭಿವೃದ್ಧಿಯಲ್ಲಿ ಹೊಸತನ ಸಾಧಿಸಿರುವುದಿಂದ ಚುನಾವಣೆಯಲ್ಲಿ ಮನ್ನಣೆ ಸಿಗಲಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಟೆಕ್  ನಿಲ್ದಾಣ ಮತ್ತು ಮುಖ್ಯರಸ್ತೆ ಪಕ್ಕದಲ್ಲಿ ಉದ್ಯಾನವನ ನಿರ್ಮಾಣ ಸೇರಿದಂತೆ ನಗರವನ್ನು ಸುಂದರವಾಗಿ ರೂಪಿಸಲಾಗಿದೆ.
  ಅಲ್ಲದೆ ಸಾಕಷ್ಟು ವರ್ಷಗಳಿಂದ ವಿವಾದದಿಂದ ನೆನಗುದಿಗೆ ಬಿದ್ದಿದ್ದ ಘನತ್ಯಾಜ್ಯ ವಿಲೇವಾರಿ ಘಟಕ ಸಮಸ್ಯೆ ಬಗೆಹರಿಸಿರುವುದು, ಉಚಿತ ಮುಕ್ತಿವಾಹಿನಿ ಸೇವೆ ಇತರ ಜನಹಿತಕ್ಕೆ ಪೂರಕವಾಗಿ ಸ್ಪಂದಿಸಿರುವುದರಿಂದ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
 ಅರುಣಕುಮಾರ್ ಅಧ್ಯಕ್ಷರಾಗಿದ್ದಾಗ ರಸ್ತೆ ಅಗಲೀಕರಣ, ಕಸ ವಿಲೇವಾರಿಗೆ ಬಕೆಟಟ್ನೀಡುವಲ್ಲಿ ಕ್ರಮ ಸೇರಿದಂತೆ ದಿಟ್ಟತನದ ಕ್ರಮ ಚುನಾವಣೆಯಲ್ಲಿ ನೆರವಾಗಲಿದ್ದು ಜೆಡಿಎಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಂ, ಪಟ್ಟಣದಲ್ಲಾಗಿರುವ ಅಭಿವೃದ್ಧಿ ಕೆಲಸಗಳು ತಮ್ಮ ಸಾಧನೆ ಎಂದು ವಿಪಕ್ಷಗಳು ಹೇಳಿಕೊಳ್ಳುತ್ತಿದ್ದು ಅಭಿವೃದ್ಧಿ ಆಗಿದೆ ಎಂದು ಸಾಕ್ಷೀಕರಿಸುತ್ತದೆ.
   ಅನುದಾನ ಎಲ್ಲಿಂದಲೆ ಬರಲಿ ಅದನ್ನು ಅನುಷ್ಠಾನ ಮಾಡುವ ಕೆಲಸ ಸ್ಥಳೀಯ ಆಡಳಿತಕ್ಕೆ ಸೇರಿದ್ದು ಹಾಗಾಗಿ ಅಭಿವೃದ್ಧಿಯ ಕ್ರೆಡಿಟ್ ಜೆಡಿಎಸ್‌ಗೆ ಸೇರಬೇಕು ಎಂದರು.
 ಈ ಸಂದರ್ಭದಲ್ಲಿ ಎಚ್.ಎನ್. ಶ್ರೀಪತಿರಾವ್, ಅರುಣಕುಮಾರ್, ಶುಭಕರ್. ಸಂಜೀವ ಸೇರಿದಂತೆ ಹಲವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.