ಶಿವಮೊಗ್ಗ

ರುದ್ರಾಭಿಷೇಕ

Published On :

ಶಿವಮೊಗ್ಗ: ಬಸವನಗುಡಿ ಶ್ರೀ ಬಸವೇಶ್ವರ ಸೇವಾ ಸಮಿತಿ 10ರಂದು ಬೆಳಿಗ್ಗೆ 7ರಿಂದ ರಾತ್ರಿ 12ರವರೆಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಇಲ್ಲಿನ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಗೆ ಮತ್ತು ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ಏಕವಾರ ರುದ್ರಾಭಿಷೇಕ ಏರ್ಪಡಿಸಿದೆ. ಅಷ್ಟೋತ್ತರ, ಮಹಾಮಂಗಳರಾತಿ, ಪ್ರಸಾದ ವಿನಿಯೋಗ ಇರುತ್ತದೆ. ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಭಾಗವಹಿಸುವಂತೆ ಸೇವಾ ಸಮಿತಿ ಕಾರ್ಯದರ್ಶಿ ಎನ್. ಜಯದೇವಯ್ಯ ತಿಳಿಸಿದ್ದಾರೆ.
ಚರ್ಚಾ ಗೋಷ್ಠಿ
ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ 9ರಂದು ಸಂಜೆ 4.30ಕ್ಕೆ ಸಂಘದ ಆವರಣದಲ್ಲಿ 2013 ರಾಜ್ಯ ಮತ್ತು ಕೇಂದ್ರ ಬಜೆಟ್ ಅವಲೋಕನ ಬಗ್ಗೆ ಚರ್ಚಾ ಗೋಷ್ಠಿ ಹಮ್ಮಿಕೊಂಡಿದೆ. ಸೇವಾ ತೆರಿಗೆ ವಿಷಯದಲ್ಲಿ ಸಿ.ಎ.ಜಿ.ಎಂ. ಚೆನ್ನಪ್ಪ ಶೆಟ್ಟಿ, ಆದಾಯ ತೆರಿಗೆ ವಿಷಯದಲ್ಲಿ ಸಿ.ಎ. ಶರತ್ ಹಾಗೂ ಮೌಲ್ಯವರ್ಧಿತ ತೆರಿಗೆ ವಿಷಯದಲ್ಲಿ ವಿಶ್ರಾಂತ ವಾಣಿಜ್ಯ ತೆರಿಗೆ ಸಹಾಯಕ ಉಪ ಆಯುಕ್ತ ಜಿ.ಬಿ. ಮಂಜಪ್ಪ ಮಾಹಿತಿ ನೀಡಲಿದ್ದಾರೆ. ಗೋಷ್ಠಿಯಲ್ಲಿ ಸಂಘದ ಸರ್ವ ಸದಸ್ಯರು ಪಾಲ್ಗೊಳ್ಳುವಂತೆ ಸಂಘದ ತೆರಿಗೆ ಸಲಹಾ ಸಮಿತಿ ಅಧ್ಯಕ್ಷ ಯು.ಮಧುಸೂಧನ ಐತಾಳ್ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಶಿವಮೊಗ್ಗ: ವಿನೋಬನಗರದ ರಿಯಲ್ ಎಸ್ಟೇಟ್ ಏಜೆಂಟರ ಸಂಘದ ಸರ್ವ ಸದಸ್ಯರ ಕಾರ್ಯಕಾರಿ ಸಮಿತಿ ರಚನೆಗೊಂಡಿದೆ. ಅಧ್ಯಕ್ಷರಾಗಿ ಮಧು, ಉಪಾಧ್ಯಕ್ಷರಾಗಿ ಮಂಜಪ್ಪ ಮತ್ತು ಎಂ. ರಂಗನಾಥ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಆರ್.ಕೆ. ದೇವದಾಸ್, ಸಹ ಕಾರ್ಯದರ್ಶಿ ಎಂ.ಎಚ್. ಶಿವಯ್ಯ, ಅರುಣ ಐತಾಳ್, ಖಜಾಂಚಿ ಧರ್ಮರಾಜ್, ಸಂಘಟನಾ ಕಾರ್ಯದರ್ಶಿ ಆರ್. ರಂಗನಾಥ, ವಿಜಯಕುಮಾರ್, ನಿರ್ದೇಶಕರಾಗಿ ನಾರಾಜಯ್ಯ, ಭೀಮಣ್ಣ, ರಾಮಚಂದ್ರ ಪಟಗಾರ್, ಕೆ.ಡಿ. ಯೋಗೇಶ್, ವಿಜಯಕುಮಾರ್ ಕೀರ್ತಿನಗರ, ತಿಪ್ಪೇಶ್, ಕೆ. ವೆಂಕಟೇಶ್‌ರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ನಾಳೆ ಮಹಿಳಾ ಕವಿಗೋಷ್ಠಿ
ಶಿವಮೊಗ್ಗ: ಕರ್ನಾಟಕ ಸಂಘದಲ್ಲಿ 8ರಂದು ಸಂಜೆ 5.30ಕ್ಕೆ ಮಹಿಳಾ ಕವಿಗೋಷ್ಠಿ ಏರ್ಪಡಿಸಲಾಗಿದೆ. ಗೋಷ್ಠಿಯಲ್ಲಿ ಸ. ಉಷಾ, ಸವಿತಾ ನಾಗಭೂಷಣ, ಡಾ.ಕೆ. ಷರಿಫಾ, ಅಕ್ಷತಾ ಪಾಲ್ಗೊಳ್ಳಲಿದ್ದು, ಡಾ.ಎಚ್.ಎಸ್. ವೆಂಕಟೇಶ್‌ಮೂರ್ತಿ, ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಉಪಸ್ಥಿತರಿರುವರು ಎಂದು ಸಂಘದ ಗೌರವ ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.