ಆರಂಭ ಆಲಸ್ಯ, ಸಂಜೆ ಸಮಾಧಾನ
ಶಿವಮೊಗ್ಗ: ಗುರುವಾರ ನಡೆದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶೇ.28ರಷ್ಟು ಮತದಾರರು ಮತದಾನದಿಂದ ದೂರ ಉಳಿದರು. ವಿಶೇಷವೆಂದರೆ ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ಅಂದರೆ, ಶೇ.39ರಷ್ಟು ಮತದಾರರು ಮನೆ ಬಿಟ್ಟು ಬರಲೇ ಇಲ್ಲ. ಹೊಸನಗರದಲ್ಲಿ ಮಾತ್ರ ಅತಿ ಹೆಚ್ಚಿನ ಮತದಾನವಾಯಿತು. ಜಿಲ್ಲೆಯ ಒಟ್ಟು 176 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 4.13 ಲಕ್ಷ ಮಂದಿ ಮತದಾನಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಈ ಪೈಕಿ ಅಂದಾಜು 3.20 ಲಕ್ಷ ಹಕ್ಕನ್ನು ಚಲಾಯಿಸಿದರು.
ಆರಂಭ ಪೆಚ್ಚು: ಜಿಲ್ಲೆಯ 528 ಮತಗಟ್ಟೆಗಳಲ್ಲೂ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಆದರೆ, ಗಂಟೆಗಳು ಉರುಳುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರಲ್ಲಿ ತಳಮಳ ಆರಂಭವಾಯಿತು. ಮೊದಲ ಅವಧಿ, ಅಂದರೆ ಬೆಳಗ್ಗೆ 7ರಿಂದ 9 ಗಂಟೆ ಅವಧಿಯಲ್ಲಿ ಮತದಾನ ಬಹಳ ಪೆಚ್ಚಾಗಿತ್ತು. ಉತ್ತಮ ಆರಂಭದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಮತದಾರನ ನಡೆ ನಿಗೂಢವಾಗುತ್ತಾ ಹೋಯಿತು. ಇದು ಇಡೀ ಜಿಲ್ಲೆಯ ಬೆಳವಣಿಗೆ.
ಮಧ್ಯಾಹ್ನ ಸಮಾಧಾನ: 11 ಗಂಟೆಯ ವೇಳೆಗೆ ಮತದಾನ ಪ್ರಮಾಣ ಕೊಂಚ ಚೇತರಿಕೆ ಕಂಡು 23ರಷ್ಟು ಮತದಾನವಾಗಿತ್ತು. 1ಗಂಟೆಯ ಮಾಹಿತಿಯಂತೆ ಶಿವಮೊಗ್ಗ ಭದ್ರಾವತಿ ಹೊರತುಪಡಿಸಿ ಉಳಿದೆಲ್ಲ ಕಡೆ ಶೇ.45ರಿಂದ 50ರ ವರೆಗೆ ಮತದಾನವಾಗಿತ್ತು. 3ಗಂಟೆಯ ಬುಲೆಟಿನ್ನಂತೆ ಹೊಸನಗರ, ಸೊರಬ, ಶಿಕಾರಿಪುರ, ತೀರ್ಥಹಳ್ಳಿ, ಶಿಕಾರಿಪುರದಲ್ಲಿ ಶೇ.55ನ್ನೂ ಮೀರಿದ ಮತದಾನವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

