ಭದ್ರಾವತಿ: ಶೇ. 62. 71 ಮತದಾನ
ಭದ್ರಾವತಿ: ಗುರುವಾರ ನಡೆದ ನಗರಸಭಾ ಚುನಾವಣೆಯಲ್ಲಿ ಶೇ.62.71ರಷ್ಟು ಮತದಾನ ನಡೆದಿದೆ. 12ನೇ ವಾರ್ಡಿಗೆ ಸಂಬಂಧಿಸಿದ ಮತಗಟ್ಟೆ 48 ರಲ್ಲಿ ಅತ್ಯಧಿಕ ಮತದಾನವಾಗಿದ್ದು (ಶೇ.85.69) 28ನೇ ವಾರ್ಡಿನ ಮತಗಟ್ಟೆ 105ರಲ್ಲಿ ಅತಿ ಕಡಮೆ ಮತದಾನವಾಗಿದೆ (ಶೇ.40.79). ಮತಪೆಟ್ಟಿಗೆಗಳನ್ನು ಪಟ್ಟಣದ ಸರ್.ಎಂ.ವಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಂರಕ್ಷಿಸಲಾಗಿದ್ದು, 11ರಂದು ಮತ ಎಣಿಕೆ ಕಾರ್ಯ ನಡೆಯುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಸಾಗರ: ಶೇ.72
ಸಾಗರ: ಗುರುವಾರ ಇಲ್ಲಿನ ನಗರಸಭೆಗೆ ನಡೆದ ಚುನಾವಣೆಯಲ್ಲಿ ಶೇ.71ಕ್ಕೂ ಹೆಚ್ಚು ಮತದಾನವಾಗಿದೆ. ನಗರದ ಎಲ್ಲಾ 31 ವಾರ್ಡ್ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಮತದಾನ ಶಾಂತವಾಗಿತ್ತು. ಬೆಳಿಗ್ಗೆ ಏಳು ಗಂಟೆಯಿಂದಲೇ ಮತದಾರರು ಮತಗಟ್ಟೆಗಳ ಬಳಿ ಸರತಿಯಲ್ಲಿ ನಿಂತಿದ್ದು ಕಂಡುಬಂದರೆ ಮಧ್ಯಾಹ್ನದ ವೇಳೆಗೆ ಬಹುತೇಕ ಮತಗಟ್ಟೆಗಳಲ್ಲಿ ಶೇ. 50ರಷ್ಟು ಮತದಾನ ನಡೆದಿತ್ತು. ಚುನಾವಣೆ ಆಯೋಗ ಈ ಬಾರಿ ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಗೊಳಿಸಿದ್ದರಿಂದ ಮತಗಟ್ಟೆ ಆಸುಪಾಸು ಷಾಮಿಯಾನಗಳೂ ಇರಲಿಲ್ಲ. ಇದರಿಂದ ರಾಜಕೀಯ ಪಕ್ಷಗಳ ಬೆಂಬಲಿಗರು, ಅಭ್ಯರ್ಥಿಗಳು ಬಿಸಿಲಿನಲ್ಲಿ ರಸ್ತೆಬದಿ ನಿಂತು ಮತಯಾಚನೆ ಮಾಡುತ್ತಿದ್ದ ದೃಶ್ಯ ಎಲ್ಲಡೆ ಸಾಮಾನ್ಯವಾಗಿತ್ತು. ನಗರಸಭೆ ವ್ಯಾಪ್ತಿಯ ಕೆಲವು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಬಂದೋಬಸ್ತುಗಾಗಿ ನೇಮಕ ಮಾಡಲಾಗಿತ್ತು. ಚುನಾವಣಾ ವೀಕ್ಷಕರ ವಾಹನ ಗಸ್ತು ತಿರುಗುತ್ತಾ, ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿತ್ತು.
ಕಷ್ಟದಿಂದ ಪಾರಾಗಲು ಭಗವಂತನ ಸ್ಮರಿಸಿ
ಚಿತ್ರದುರ್ಗ: ಭಗವಂತನ ಸ್ಮರಣೆಯಿಂದ ಮಾತ್ರ ಕಾಲ, ಕರ್ಮ ಹಾಗೂ ಮಾಯೆಯಿಂದ ಪಾರಾಗಲು ಸಾಧ್ಯ ಎಂದು ಹುಬ್ಬಳ್ಳಿಯ ಶ್ರೀ ಸಿದ್ದರೂಢಾಶ್ರಮದ ಶ್ರೀರಮಾನಂದ ಸ್ವಾಮೀಜಿ ಹೇಳಿದರು. ನಗರದ ಶ್ರೀಕಬೀರಾನಂದ ಮಠದಲ್ಲಿ ಹಮ್ಮಿಕೊಂಡಿರುವ 83ನೇ ಮಹಾ ಶಿವರಾತ್ರಿ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲ ಜಗತ್ ಭಕ್ಷಕ. ಕಾಲ ಎಲ್ಲವನ್ನು ನುಂಗಿ ಬಿಡುತ್ತದೆ. ಅದೇ ರೀತಿ ಮಾಹೆಯು ಕೂಡ. ಯಾರು ಮಾಯೆಗೆ ಒಳಗಾಗುತ್ತಾರೋ ಅವರು ಕ್ಷಣಾರ್ಧದಲ್ಲಿ ತಮ್ಮ ಜೀವನವನ್ನೇ ನಶ್ವರ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಇವೆಲ್ಲವುಗಳಿಂದ ಪಾರಾಗಬೇಕಾದರೆ ಭಗವಂತನ ಸ್ಮರಣೆಯನ್ನು ಮಾಡಬೇಕು ಎಂದರು. ಶ್ರೀಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀನಿಜಗುಣ ದೇವರು ಮಾತನಾಡಿ, ಪರಮಾತ್ಮನಲ್ಲಿ ಭಕ್ತಿ, ಸ್ಮರಣೆ ಮಾಡಿದಲ್ಲಿ ಯಮಧೂತನು ನಮ್ಮಿಂದ ದೂರ ಹೋಗುತ್ತಾನೆ. ಯಾಕೆಂದರೆ ಭಕ್ತಿಯಲ್ಲಿ ಅಂತಹ ಶಕ್ತಿ ಇದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

