ಶಿವಮೊಗ್ಗ

ಸಣ್ಣ ಪುಟ್ಟ ಸಾಧನೆ ಮೂಲಕ ಕನಸು ನನಸು

Published On :

ಕ.ಪ್ರ ವಾರ್ತೆ ಶಿವಮೊಗ್ಗ, ಮಾ.9
ವಿದ್ಯಾರ್ಥಿಗಳು ಸಣ್ಣ ಸಣ್ಣ ಸಾಧನೆಗಳು ಮಾಡುವ ಮೂಲಕ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ 2020 ವಿಷನ್ ಕನಸನ್ನು ನನಸು ಮಾಡಬಹುದು ಎಂದು ಚಿತ್ರನಟ ಮಾ. ಕಿಶನ್ ಅಭಿಪ್ರಾಯಪಟ್ಟರು.
ಶ್ರೀ ವಿನಾಯಕ ವಿದ್ಯಾಸಂಸ್ಥೆಯು ಆಯೋಜಿಸಿದ್ದ ಎಸ್‌ವಿಎಸ್ ಗ್ರೂಪ್ ಆಫ್ ಕಾಲೇಜ್ ಹಾಗೂ ವಿನಾಯಕ ಐಟಿಐ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟಿಸಿದ ಅವರು, ನಮ್ಮ ಜೀವನದಲ್ಲಿ ಮಾಡುವ ಸಣ್ಣ ಸಾಧನೆಗಳಿಗೆ ಒತ್ತು ನೀಡಿ ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕು ಎಂದರು.
ಅಭಿವೃದ್ಧಿಯತ್ತ ಕೊಂಡೊಯ್ಯಿರಿ: ಭಾರತೀಯರು ಕೆಲವೇ ಕೆಲಸ, ಹುದ್ದೆಗಳಿಗೆ ಸೀಮಿತರಾಗಿದ್ದಾರೆ ಎಂದು ವಿದೇಶಿಯರು ತಿಳಿದುಕೊಂಡಿದ್ದಾರೆ. ಆದ್ದರಿಂದ ಯುವಕರು ಹೊಸದಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ಹೊಸ ಆಲೋಚನೆ, ವಿನೂತನ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು ಎಂದು ತಿಳಿಸಿದರು.
ನಮ್ಮ ಮನೆಗಳಲ್ಲಿ ಪೈಟಿಂಗ್ ಕೆಲಸ ಮಾಡುತ್ತೇನೆ ಎಂದರೆ  ಗೋಡೆಗೆ ಬಣ್ಣ ಬಳಿಯಲು ಹೋಗುತ್ತಿಯಾ ಎಂದು ಬೈಯುತ್ತಾರೆ. ಆದರೆ, ಒಂದು ಉತ್ತಮ ಪೈಟಿಂಗ್‌ಗೆ ರು. 1 ರಿಂದ 1.5 ಲಕ್ಷ ಇದೆ ಎಂದು ಪೋಷಕರು ತಿಳಿಯಬೇಕು ಎಂದರು.
ಇಲ್ಲಿರುವ ವಿದ್ಯಾರ್ಥಿಗಳು ನಿಸರ್ಗದ ಮಡಿಲಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಬೆಂಗಳೂರಿನಂತಹ ಕಾಂಕ್ರಿಟ್ ಕಾಡಿನಲ್ಲಿ ಇಂತಹ ಪರಿಸರ ಸಿಗುವುದಿಲ್ಲ. ಅಲ್ಲಿನ ಜನರಿಗೆ ಪ್ರಕೃತಿಯ ಸೌಂದರ್ಯ ಪ್ರಜ್ಞೆ ಕಡಿಮೆ ಇದೆ. ಇರುವ ಪರಿಸರವನ್ನು ನಾಶ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವ ರಾಮೇಗೌಡ, ಜ್ಞಾನದೀಪ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಿ.ಡಿ. ಪ್ರಸಾದ್, ಎಸ್‌ವಿವಿಎಸ್ ಗ್ರೂಪ್ ಆಫ್ ಕಾಲೇಜ್‌ನ ಅಧ್ಯಕ್ಷ ಶಾಂತವೀರನಾಯ್ಕ್, ಪ್ರಾಂಶುಪಾಲೆ ಲತಾ ಎಸ್‌ವಿ. ನಾಯ್ಕ್, ಎಚ್.ಈ. ಪ್ರದೀಪ್, ಭಾಗ್ಯಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.