ಮಂತ್ರ ಮಾಂಗಲ್ಯ ವಿವಾಹಕ್ಕೆ ಅವಕಾಶ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.12
ರಾಷ್ಟ್ರಕವಿ ಕುವೆಂಪು ಅವರ ಆದರ್ಶ, ತತ್ವಗಳನ್ನು ಪಾಲಿಸಿಕೊಂಡು ಬರುತ್ತಿರುವ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹ ಪದ್ಧತಿಗೆ ಸದಾ ಸಿದ್ಧವಿದೆ.
ಮದುವೆಗಾಗಿ ಅಪಾರ ದುಂದುವೆಚ್ಚ, ಅದಕ್ಕಾಗಿ ಮಾಡುವ ಸಾಲ, ಇದರಿಂದ ಅನುಭವಿಸುವ ಬಾಧೆಗಳನ್ನು ಕಂಡ ರಾಷ್ಟ್ರಕವಿ ಕಂಡುಕೊಂಡ ಮಾರ್ಗ ಸರಳ ವಿವಾಹ ಅಥವಾ ಮಂತ್ರ ಮಾಂಗಲ್ಯ.
ಇದನ್ನೇ ಮುಂದುವರೆಸಿಕೊಂಡು ಬಂದಿರುವ ಕುವೆಂಪು ಪ್ರತಿಷ್ಠಾನ ಮಂತ್ರಮಾಂಗಲ್ಯ ವಿಧಾನದಲ್ಲಿ ವಿವಾಹವಾಗಲು ಸ್ವಇಚ್ಛೆಯಿಂದ ಬರುವ ಯುವಕ- ಯುವತಿಯರಿಗೆ ಕುಪ್ಪಳಿಯ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನದಲ್ಲಿ ಅವಕಾಶ ಮಾಡಿಕೊಡಲಿದೆ.
ಆದರೆ, ಮದುವೆ ಕುವೆಂಪು ಪ್ರಣೀತವಾಗಿರುವಂತೆಯೇ ನಡೆಯಬೇಕು. ಪ್ರತಿಷ್ಠಾನವು ಸೂಚಿಸುವ ನೀತಿ ನಿಯಾಮವಳಿಗಳಿಗೆ ಬದ್ಧವಾಗಿರಬೇಕು. ಇದಕ್ಕೆ ಸಿದ್ಧರಿರುವ ಎಲ್ಲಾ ಜಾತಿ ಧರ್ಮದವರಿಗೂ, ಅಂತರ್ಜಾತಿಯ ವಿವಾಹಗಳಿಗೂ ಅವಕಾಶವಿದೆ.
ಹೇಮಾಂಗಣದಲ್ಲಿ ಸಾಂಸ್ಕೃತಿಕ ಶೈಕ್ಷಣಿಕ ಕಾರ್ಯಕ್ರಮಗಳಿಲ್ಲದ ನಿಗದಿತ ದಿನಗಳಲ್ಲಿ ವಿವಾಹಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕ ಡಾ. ಜೆ.ಕೆ. ರಮೇಶ್ ತಿಳಿಸಿದ್ದಾರೆ. ವಿವರಗಳಿಗಾಗಿ- 08181 228843 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

