ಅಪರಿಚಿತ ವಾಹನ ಡಿಕ್ಕಿ: ವೃದ್ಧ ಸಾವು
ಕನ್ನಡಪ್ರಭ ವಾರ್ತೆ, ಸೊರಬ, ಮಾ.14
ಪಟ್ಟಣದ ಶಿರಾಳಕೊಪ್ಪ ರಸ್ತೆಯಲ್ಲಿನ ಪೆಟ್ರೋಲ್ ಬಂಕ್ ಎದುರು ಮಾ.14ರ ಸಂಜೆ ಘಟಿಸಿದ ರಸ್ತೆ ಅಪಘಾತವೊಂದರಲ್ಲಿ ವೃದ್ಧರೋಬ್ಬರು ಅಸುನೀಗಿದ್ದಾರೆ.
ಪಟ್ಟಣ ಕೆಇಬಿ ಕಾಲೋನಿಯ ಹುಚ್ಚಪ್ಪ (75) ಎಂಬಾತ ತಮ್ಮ ಮನೆಗೆ ತೆರಳುವಾಗ ಅಪರಿಚಿತ ನಾಲ್ಕು ಚಕ್ರದ ವಾಹನ ಗುದ್ದಿದೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಹುಚ್ಚಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಳ್ಳತನ: ವ್ಯಕ್ತಿ ಬಂಧನ
ಭದ್ರಾವತಿ: ಕಳ್ಳತನದ ಆರೋಪದ ಮೇಲೆ ನ್ಯೂಟೌನ್ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಪಟ್ಟಣದ ಬಿ.ಎಚ್. ರಸ್ತೆಯ ಹೊರವಲಯದಲ್ಲಿ ನಡೆದು ಬರುತ್ತಿದ್ದ ಮೂವರು ಚೆಕ್ ಪಾಯಿಂಟ್ ಹತ್ತಿರ ನಿಂತಿದ್ದ ನ್ಯೂಟೌನ್ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಕಂಡು ಓಡಿಹೋಗಲು ಯತ್ನಿಸಿದಾಗ ಪೊಲೀಸರು ಬೋವಿಕಾಲೋನಿಯ ಕುಮಾರ ಎಂಬುವನ್ನು ಬಂಧಿಸಿ ಆತನಿಂದ 7 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಓಡಿಹೋದ ಸೀಗೆಬಾಗಿಯ ರಮೇಶ ಮತ್ತು ಬೋವಿ ಕಾಲೋನಿಯ ಮಂಜ ಎಂಬುವರ ಪತ್ತೆಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.
ಮದ್ಯ ಸೇವನೆ: ಸಾವು
ಪಟ್ಟಣದ ಸುಭಾಶ್ ನಗರದ ಮೂರ್ತಿ ಎಂಬುವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಅತಿಯಾದ ಮದ್ಯ ಸೇವಿಸಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೊಸಮನೆ ಶಿವಾಜಿ ವೃತ್ತದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಗಂಭೀರ
ಸಾಗರ: ತಾಲೂಕಿನ ಆನಂದಪುರಂ ರಾಷ್ಟ್ರೀಯ ಹೆದ್ದಾರಿ 206ರ ಆಚಾಪುರ ಕೆರೆ ಏರಿ ಬಳಿ ಬೈಕ್ ಹಾಗೂ ಟ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಆನಂದಪುರಂನಿಂದ ಮುರುಘಾಮಠಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ಶಂಕರಶೆಟ್ಟಿ ಎಂಬುವವರಿಗೆ ಆಚಾಪುರ ಕೆರೆ ಏರಿ ಸಮೀಪ ಎರಡು ಟ್ಯಾಕ್ಟರ್ಗಳು ಡಿಕ್ಕಿ ಹೊಡೆದಿವೆ. ಮೊದಲು ಒಂದು ಟ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ನಂತರ ಬೈಕಿನಿಂದ ಕೆಳಗೆ ಬಿದ್ದ ಶಂಕರಶೆಟ್ಟಿಗೆ ಇನ್ನೊಂದು ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.
ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಟ್ಯಾಕ್ಟರ್ಗಳು ನಾಪತ್ತೆಯಾಗಿದ್ದು, ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡ ಶಂಕರಶೆಟ್ಟಿಯನ್ನು ಶಿವಮೊಗ್ಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

