ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ: ಶಕುಂತಲಮ್ಮ
ಶಿರಾಳಕೊಪ್ಪ: ಪ್ರತಿ ಮಗುವಿನಲ್ಲಿಯೂ ವಿಶೇಷವಾದ ಶಕ್ತಿ ಇರುತ್ತದೆ. ಶಾಲೆಯಲ್ಲಿ ಗುರುಗಳು ಹಾಗೂ ಮನೆಯಲ್ಲಿ ಪೋಷಕರು ಕೊಡುವ ಶಿಕ್ಷಣದಿಂದ ಆ ಮಗುವಿನಲ್ಲಿ ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಬಹುದು ಎಂಬ ವಿಶ್ವಾಸ ಬರುತ್ತದೆ ಎಂದು ಶಿರಾಳಕೊಪ್ಪ ಫ್ರೌಢಶಾಲೆ ಶಿಕ್ಷಕಿ ಶಕುಂತಲಮ್ಮ ತಿಳಿಸಿದರು.
ಶಿರಾಳಕೊಪ್ಪ ಸಪಪೂ ಕಾಲೇಜು ಫ್ರೌಡಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ವಿತರಣಾ ಹಾಗು ಶಾರದಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಚಿಕ್ಕವಯಸ್ಸಿನಲ್ಲಿ ಸ್ವಂತ ನಿರ್ದಾರ ತೆಗೆದು ಕೊಂಡು ನಿಮ್ಮ ಜೀವನ ಹಾಳು ಮಾಡಿಕೊಳ್ಳದೇ ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆಯಿರಿ ಎಂದರು.
ಆತ್ಮವಿಶ್ವಾಸ ಅಗತ್ಯ: ಮಂಜುನಾಥ ಬಲಮುರಿ ಮಾತನಾಡಿ, ಓದಿನಲ್ಲಿ ಒತ್ತಡವಿರದೇ ಓದಬೇಕು ಪರೀಕ್ಷೆಯಲ್ಲಿ ಗಡಿಬಿಡಿ ಮಾಡಿಕೊಳ್ಳದೇ ಆತ್ಮವಿಶ್ವಾಸ ದಿಂದ ಮಾತ್ರ ನಿರೀಕ್ಷಿತ ಗುರಿಮುಟ್ಟಬಹುದು. ಶಾಲಾ ಸಮಿತಿ ಅಧ್ಯಕ್ಷ ರವಿಶಾನಭೋಗ ಮಾತನಾಡಿ ಈ ಶಾಲೆಗೆ ಉತ್ತಮಶಾಲೆ ಎಂಬ ಹೆಗ್ಗಳಿಕೆ ಇದೆ ಆ ಹೆಸರನ್ನು ಉಳಿಸಿ ಎಲ್ಲರಿಗೂ ಹೆಸರು ತರುವಂತೆ ಪ್ರಯತ್ನಿಸಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಸೋಮಶೇಖರ ಮಾತನಾಡಿ, ಶಾಲೆಗೆ ಕೀರ್ತಿತರುವದು ವಿದ್ಯಾರ್ಥಿಗಳ ಕೈಯಲ್ಲಿ ಇದೆ ಎಂದರು.
ಶೇಷಗಿರಿ ಹಾಗು ಶಾಲಾ ಸಮಿತಿ ಸದಸ್ಯ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ವಿದ್ಯಾರ್ಥಿಗಳ ಪರವಾಗಿ ಪವನ, ಮಂಜುನನಾಥಗೌಡ, ಶಶಿಧರ, ಸಂಗೀತ, ವಿದ್ಯಾ ಮಾತನಾಡಿದರು. ವೈಷ್ಣವೀ ಭಟ್ಟ ನಿರೂಪಿಸಿದರು. ಎಲ್ಲ ಶಿಕ್ಷಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

